4 ಲಕ್ಷ ಸಂಬಳ ಪಡೆಯುವ 37ರ ಮಹಿಳೆಗೆ ವರ ಬೇಕಾಗಿದೆ; ಶರತ್ತು ಕೇಳಿದ್ರೆ ನೀವು ಶಾಕ್​​ ಆಗುವುದಂತೂ ಖಂಡಿತಾ

ತನ್ನ ಷರತ್ತುಗಳಿಗೆ ಒಪ್ಪಿಗೆಯಾಗುವಂತಹ ಹುಡುಗನನ್ನು ವರ್ಷಗಳಿಂದ ಹುಡುಕುತ್ತಿದ್ದಾಳೆ. ತನಗೆ ಯಾವ ರೀತಿಯ ವರ ಬೇಕು ಎಂದು ಮಹಿಳೆ ವಿವರಿಸಿರುವ ಪೋಸ್ಟ್​​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

4 ಲಕ್ಷ ಸಂಬಳ ಪಡೆಯುವ 37ರ ಮಹಿಳೆಗೆ ವರ ಬೇಕಾಗಿದೆ; ಶರತ್ತು ಕೇಳಿದ್ರೆ ನೀವು ಶಾಕ್​​ ಆಗುವುದಂತೂ ಖಂಡಿತಾ
Follow us
ಅಕ್ಷತಾ ವರ್ಕಾಡಿ
|

Updated on:Apr 03, 2024 | 4:20 PM

ಹತ್ತು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮರಾಠಿ ಮಹಿಳೆಯೊಬ್ಬರು ತನಗಾಗಿ ವರನನ್ನು ಹುಡುಕುತ್ತಿದ್ದಾರೆ. ಮಹಿಳೆಯ ವಯಸ್ಸು 37 ವರ್ಷ. ಆದರೆ ಆಕೆ ತನ್ನ ಮದುವೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಹೊಂದಿದ್ದು, ತನ್ನ ಷರತ್ತುಗಳಿಗೆ ಒಪ್ಪಿಗೆಯಾಗುವಂತಹ ಹುಡುಗನನ್ನು ವರ್ಷಗಳಿಂದ ಹುಡುಕುತ್ತಿದ್ದಾಳೆ. ತನಗೆ ಯಾವ ರೀತಿಯ ವರ ಬೇಕು ಎಂದು ಮಹಿಳೆ ವಿವರಿಸಿರುವ ಪೋಸ್ಟ್​​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

@Ambar_SIFF_MRA ಎಂಬ ಟ್ವಿಟರ್​ ಖಾತೆಯಲ್ಲಿ ಏಪ್ರಿಲ್​​ 02ರಂದು ಹಂಚಿಕೊಡಿರುವ ಈ ಪೋಸ್ಟ್​​ ಒಂದೇ ದಿನದಲ್ಲಿ 5ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಪೋಸ್ಟ್​​ನ್ಲಲಿ ಮರಾಠಿಯಲ್ಲಿ ಬರೆದಿರುವುದನ್ನು ಇಂಗ್ಲೀಷ್​​ಗೆ ಅನುವಾದ ಮಾಡಲಾಗಿದೆ.

ಮಹಿಳೆ ಕಳೆದ 10 ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ 4 ಲಕ್ಷ ರೂ. ದುಡಿಯುತ್ತಿದ್ದಾರೆ. ಈಕೆಯ ಪ್ರಕಾರ ಈಕೆಯನ್ನು ಮದುವೆಯಾಗುವ ವರ ಡಾಕ್ಟರ್​​, ಸಿಎ, ಅಥವಾ ಯಾವುದೇ ಉನ್ನತ ಹುದ್ದೆಯಲ್ಲಿದ್ದು, ವರ್ಷಕ್ಕೆ ಕನಿಷ್ಠ 1 ಕೋಟಿ ಸಂಬಳ ಗಳಿಸುವವನಾಗಿರಬೇಕು. ಇದಲ್ಲದೇ ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದಿರಬೇಕು ಎಂದು ಬರೆಯಲಾಗಿದೆ.

ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ

ಈಕೆಯ ಇಷ್ಟೆಲ್ಲಾ ಶರತ್ತುಗಳನ್ನು ಹೊಂದಿರುವ ಪೋಸ್ಟ್​​ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ‘ಒಂದು ಮಾಹಿತಿಯ ಪ್ರಕಾರ, ಭಾರತದಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಗಳಿಸುವವರ ಸಂಖ್ಯೆ ಕೇವಲ 1.7 ಲಕ್ಷ. ಅಂತಹ ಪರಿಸ್ಥಿತಿಯಲ್ಲಿ, ಈ ಮಹಿಳೆ ತನ್ನ 37 ನೇ ವಯಸ್ಸಿನಲ್ಲಿ ತನ್ನ ‘ಕನಸಿನ ರಾಜಕುಮಾರ’ ಸಿಗುವುದು ಕಷ್ಟ” ಎಂದು ನೆಟ್ಟಿಗರೊಬ್ಬರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:16 pm, Wed, 3 April 24