Viral Video: ಚರ್ಚ್ ನೆಲದಲ್ಲಿ ಓಂ, ಸ್ವಸ್ತಿಕ್ ಚಿಹ್ನೆಯ ಟೈಲ್ಸ್‌, ವಿವಾದ ಸೃಷ್ಟಿಸಿದ ಈ ವಿಡಿಯೋ

ಹಿಂದು ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವ ಸ್ವಸ್ತಿಕ, ಓಂ ಚಿಹ್ನೆಯನ್ನು ಜನರು ತುಳಿದುಕೊಂಡು ಹೋಗುವ ಟೈಲ್ಸ್‌ನಲ್ಲಿ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

Viral Video: ಚರ್ಚ್ ನೆಲದಲ್ಲಿ ಓಂ, ಸ್ವಸ್ತಿಕ್ ಚಿಹ್ನೆಯ ಟೈಲ್ಸ್‌, ವಿವಾದ ಸೃಷ್ಟಿಸಿದ ಈ ವಿಡಿಯೋ
ಚರ್ಚ್ ನೆಲಕ್ಕೆ ಓಂ, ಸ್ವಸ್ತಿಕ್ ಚಿಹ್ನೆಯ ಟೈಲ್ಸ್‌
Follow us
|

Updated on: Apr 03, 2024 | 5:27 PM

ಆಂಧ್ರಪ್ರದೇಶ: ಹಿಂದೂ ಧರ್ಮದಲ್ಲಿ ಸ್ವಸ್ತಿಕ, ಓಂ ಚಿಹ್ನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಯಾವುದೇ ಪೂಜೆ, ಪುನಸ್ಕಾರದ ಸಮಯದಲ್ಲಿ, ಸ್ವಸ್ತಿಕ, ಓಂ ಚಿಹ್ನೆಗಳನ್ನು ಬರೆಯಲಾಗುತ್ತದೆ. ಆದರೆ ಇದೀಗ ಸಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್​​ ಆಗಿದ್ದು, ವಿಡಿಯೋದಲ್ಲಿ ಆಂಧ್ರಪ್ರದೇಶದ ಚರ್ಚ್ ಒಂದರ ಮುಂಭಾಗದಲ್ಲಿ ಹಾಕಲಾಗಿರುವ ಟೈಲ್ಸ್‌ನಲ್ಲಿ ಓಂ ಮತ್ತು ಸ್ವಸ್ತಿಕ್ ಚಿಹ್ನೆ ಬಳಸಿರುವುದನ್ನು ಕಾಣಬಹುದು. ಹಿಂದು ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವ ಸ್ವಸ್ತಿಕ, ಓಂ ಚಿಹ್ನೆಯನ್ನು ಜನರು ತುಳಿದುಕೊಂಡು ಹೋಗುವ ಟೈಲ್ಸ್‌ನಲ್ಲಿ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ರಾಜ್ಯದ ಮಂಗಳಾಪುರ ಪ್ರದೇಶದಲ್ಲಿರುವ ಚರ್ಚ್​​ ಎಂದು ಗುರುತಿಸಲಾಗಿದೆ.

@arunpudur ಎಂಬ ಹೆಸರಿನ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಏಪ್ರಿಲ್​ 2ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 95 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು ಕಾಮೆಂಟ್​​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ

ವೈರಲ್​​​ ಆದ ವಿಡಿಯೋದಲ್ಲಿ ಚರ್ಚ್ ಆವರಣದಲ್ಲಿ ಟೈಲ್ಸ್‌ ಹಾಕಿರುವುದನ್ನು ಕಾಣಬಹುದು. ಅದರ ನಡು ನಡುವೆ ಸ್ವಸ್ತಿಕ, ಓಂ ಚಿಹ್ನೆಗಳ ಟೈಲ್ಸ್‌ಗಳನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ದೈವಿಕವೆಂದು ಪರಿಗಣಿಸಲಾಗಿರುವ ಓಂ ಮತ್ತು ಸ್ವಾತಿಸ್ಕ್ ಚಿಹ್ನೆಗಳನ್ನು ಈ ರೀತಿ ಬಳಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ಧರ್ಮಕ್ಕೆ ಅಗೌರವ ತೋರಿರುವವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ