ಕಾಂಗ್ರೆಸ್ಗೆ ಹಿಂದೂ ಧರ್ಮದ ಕೇಸರಿ ಧ್ವಜದ ಮೇಲೇಕೆ ಸಿಟ್ಟು?: ಪ್ರಮೋದ್ ಮುತಾಲಿಕ್ ಪ್ರಶ್ನೆ
ಹಿಂದೂ ಕಾರ್ಯಕರ್ತರು ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ತ್ರೀವ್ರ ಪ್ರತಿಭಟನೆಯ ನಡುವೆ ಮಂಡ್ಯ ಜಿಲ್ಲಾಡಳಿತ ಕೆರಗೋಡು ಧ್ವಜಸ್ತಂಭದಿಂದ ಹನುಮ ಧ್ವಜ ತೆರವುಗೊಳಿಸಿದ್ದಾರೆ. ಈ ಬಗ್ಗೆ ಆಕ್ರೋಶ ಹೊರಹಾಕದಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ನವರಿಗೆ ಕೇಸರಿ ಕೆಂಡದಂತೆ ಕಾಣುತ್ತಿದೆ. ಕಾಂಗ್ರೆಸ್ಗೆ ಹಿಂದೂ ಧರ್ಮದ ಧ್ವಜದ ಮೇಲೇಕೆ ಸಿಟ್ಟು ಎಂದು ಪ್ರಶ್ನಿಸಿದ್ದಾರೆ.
ಗದಗ, ಜ.28: ಕಾಂಗ್ರೆಸ್ನವರಿಗೆ ಕೇಸರಿ ಕೆಂಡದಂತೆ ಕಾಣುತ್ತಿದೆ. ಕಾಂಗ್ರೆಸ್ಗೆ ಹಿಂದೂ ಧರ್ಮದ ಧ್ವಜದ ಮೇಲೇಕೆ ಸಿಟ್ಟು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಪ್ರಶ್ನಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆರಗೋಡ ಗ್ರಾಮದಲ್ಲಿ ಕೇಸರಿ ಧ್ವಜ ತೆರವು ವಿಚಾರವಾಗಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಸರಿ ಅಂದರೆ ಕಾಂಗ್ರೆಸ್ನವರಿಗೆ ಉರಿಯುತ್ತದೆ ಎಂದಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಕೇಸರಿ ಧ್ವಜ ತೆರವು ಮಾಡಿದ್ದನ್ನು ಶ್ರೀರಾಮ ಸೇನೆ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೇಸರಿ ಧ್ವಜ ಯಾವುದೋ ಪಕ್ಷ, ಸಂಘಟನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಬಂದ ದೇಶದ ಧರ್ಮದ ಧ್ವಜ. ಗ್ರಾಮ ಪಂಚಾಯಿತಿ ಒಮ್ಮತದಿಂದ ಹಾರಿಸಿದ ಧ್ವಜ. ಕೇಸರಿ ತ್ಯಾಗ, ಸಂಸ್ಕೃತಿಯ, ಸಮೃದ್ಧಿಯ ಪ್ರತೀಕ. ಕೇಸರಿ ಧ್ವಜ ಬಿಜೆಪಿ, ಆರ್ಎಸ್ಎಸ್ ಧ್ವಜ ಅಲ್ಲ ಎಂದರು.
ಧರ್ಮದ ಧ್ವಜವನ್ನ ಗೌರವಿಸುವುದನ್ನ ಕಾಂಗ್ರೆಸ್ ಕಲೆತುಕೊಳ್ಳಬೇಕು. ದ್ವೇಷ ಸಾಧಿಸಿದಷ್ಟು ಹಿಂದೂ ಸಮಾಜ ಕೆರಳುತ್ತದೆ, ನಿಮ್ಮನ್ನ ವಿರೋಧ ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೇಲಿಂದ ಮೇಲೆ ಈರೀತಿಯ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ರಾಮನ ಅಲೆ, ಸುನಾಮಿ ಕಾಂಗ್ರೆಸ್ನವರಿಗೆ ನೋಡಲು ಆಗುತ್ತಿಲ್ಲ. ತಡೆದುಕೊಳ್ಳದಕ್ಕೆ ಆಗುತ್ತಿಲ್ಲ. ಉರಿಯುತ್ತಿದೆ ಎಂದರು.
ಇದನ್ನೂ ಓದಿ: ಕೆರಗೋಡು ಧ್ವಜಸ್ತಂಭದಲ್ಲಿ ಹಾರಿದ ರಾಷ್ಟ್ರಧ್ವಜ; ಪಕ್ಕದಲ್ಲೇ ಹನುಮ ಧ್ವಜ ಏರಿಸಿದ ಆರ್.ಅಶೋಕ್
ಧ್ವಜ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದೀರಿ, ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ಯಾಕೆ ಮಾಡಬೇಕು? ಅಲ್ಲೇನು ಕಲ್ಲೆಸೆದಿದ್ದಾರಾ ಗಲಾಟೆ ಮಾಡಿದ್ದಾರಾ? ಧ್ವಜ ತೆಗೆದಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಅವರ ಮೇಲೆ ಲಾಠಿ ಚಾರ್ಜ್ ಮಾಡುತ್ತೀರಾ? ಯಾರ ಮೇಲೆ ಲಾಠಿ ಪ್ರಹಾರ ಮಾಡಬೇಕು ಅವರ ಮೇಲೆ ಮಾಡಲ್ಲ ಎಂದರು.
ಔರಂಗಜೇಬನ ಕಟೌಟ್ ಹಾಕಿ ಮೆರವಣಿಗೆ ಮಾಡಿದಾಗ ಕಾನೂನು ನೆನಪಾಗಲಿಲ್ಲವೇ? ಈಗ ಹಿಂದೂಗಳ ಭಾವನೆಗೆ ಧಕ್ಕೆ ಕೊಡುವುದನ್ನ ನೋಡಿದರೆ ನೀವು ರಾವಣನ ಮಾನಸಿಕ ಸ್ಥಿತಿಗೆ ಬಂದಿದ್ದೀರಿ ಎಂದು ತಿಳಿಯುತ್ತದೆ. ಅಲ್ಲಿ ರಾಷ್ಟ್ರಧ್ವಜ ಹಾಕಿಸಲು ಯಾರು ಬೇಡ ಅಂತಾರೆ. ಆದರೆ ಧ್ವೇಷ ಸಾಧಿಸುವುದು ಸರಿಯಲ್ಲ ಎಂದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್, ಸಚಿವರ ಹೇಳಿಕೆಯನ್ನು ನಾನು ಒಪ್ಪಲ್ಲ. ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ಬಿಟ್ಟು ಪಕ್ಷಗಳನ್ನು ಬಿಟ್ಟು, ಒಟ್ಟಾಗಿ ಧ್ವಜ ಹಾರಿಸಿದ್ದರು. ಎಲ್ಲರ ಪರಿಶ್ರಮದಿಂದ 108 ಅಡಿ ಕಂಬ ಹಾಕಲಾಗಿತ್ತು. ಈ ಸರ್ಕಾರ ಇಷ್ಟು ದೊಡ್ಡ ಕಂಬದ ಮೂಲಕ ರಾಷ್ಟ್ರ ಧ್ವಜ ಹಾರಿಸಲ್ಲ. ಸುಳ್ಳು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಂ ವೋಟ್ಗಾಗಿ ಚೆಲುವರಾಯಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯದ ಪರಿಣಾಮವಾಗಿ ಕೇಸರಿ ಧ್ವಜವನ್ನು ಇಳಿಸಲಾಗಿದೆ. ಬೇರೆಯವರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಮುಂಚೆ ನೀವು ಏನು ಮಾಡುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಯಾರೋ ಮುಸ್ಲಿಂ ವಿರೋಧ ಮಾಡಿದ್ದಾರೆ ಎಂದು ತೆಗೆಯುವುದಾ? ನೀವು ರಾಜಕೀಯ ಮಾಡಿದರೆ, ನಾವು ರಾಜಕೀಯಕ್ಕಾಗಿಯೇ ವಿರೋಧ ಮಾಡುತ್ತೇವೆ ಎಂದರು.
ಕಾಂಗ್ರೆಸ್ಗೆ ಕೊನೆಗಾಲ ಬಂದಿರುವುದರು ಸತ್ಯ: ಪ್ರಮೋದ್ ಮುತಾಲಿಕ್
ಕಾಂಗ್ರೆಸ್ನ ಕೊನೆಗಾಲ ಬಂದಿರುವುದರು ನೂರಕ್ಕೆ ನೂರು ಸತ್ಯ. ಸಿಎಂ ಸಿದ್ದರಾಮಯ್ಯ ಅವರ ಮಡಿಕೇರಿ ಭೇಟಿ ಹಿನ್ನೆಲೆ ಮಡಿಕೇರಿಯಲ್ಲಿ ಕೇಸರಿ ಧ್ವಜಗಳನ್ನು ಎಲ್ಲವನ್ನೂ ತೆಗೆದು ಹಾಕಿದ್ದಾರೆ. ಬ್ಯಾನರ್, ಕೆಸರಿ ಬಾವುಟ, ಪ್ಲೆಕ್ಸ್, ಕಟೌಟ್ ತೆಗೆದು ಹಾಕಿದ್ದಾರೆ. ಅಲ್ಲಿನ ಸ್ಥಳೀಯರು ಅನುಮತಿ ಪಡೆದು, ಅಳವಡಿಕೆ ಮಾಡಿದ್ದರು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ