50 ಕೋಟಿ ರೂ.ಮೌಲ್ಯದ ಚಿನ್ನದ ಕಮೋಡ್ ಕಳವು; ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಕಳ್ಳ
ವೆಲ್ಲಿಂಗ್‌ಬರೋದ 39 ವರ್ಷದ ಜೇಮ್ಸ್ ಶೀನ್, ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ಶೈರ್‌ನ ವುಡ್‌ಸ್ಟಾಕ್‌ನಲ್ಲಿರುವ 300 ವರ್ಷಗಳಷ್ಟು ಹಳೆಯದಾದ ಬ್ಲೆನ್‌ಹೈಮ್ ಪ್ಯಾಲೇಸ್‌ನಿಂದ 50 ಕೋಟಿ ರೂ.ಮೌಲ್ಯದ ಚಿನ್ನದ ಕಮೋಡ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ಶೈರ್‌ನ ವುಡ್‌ಸ್ಟಾಕ್‌ನಲ್ಲಿರುವ 300 ವರ್ಷಗಳಷ್ಟು ಹಳೆಯದಾದ ಬ್ಲೆನ್‌ಹೈಮ್ ಪ್ಯಾಲೇಸ್‌ನಿಂದ 48,00000 ಪೌಂಡ್‌ಗಳ (ರೂ. 50,36,23939) ಘನ ಚಿನ್ನದ ಶೌಚಾಲಯವನ್ನು ಕದ್ದಿರುವುದಾಗಿ ವ್ಯಕ್ತಿಯೊಬ್ಬ ಒಪ್ಪಿಕೊಂಡಿದ್ದಾನೆ. ಸೆಪ್ಟೆಂಬರ್ 2019 ರಲ್ಲಿ ಕಲಾ ಪ್ರದರ್ಶನದ ಭಾಗವಾಗಿದ್ದ ಈ ಕಮೋಡ್ ಕಳ್ಳತನವಾಗಿತ್ತು. ದಿ ಗಾರ್ಡಿಯನ್ ಪ್ರಕಾರ, ಸುಮಾರು 50 ಕೋಟಿ ರೂ ಮೌಲ್ಯದ ‘ಅಮೆರಿಕಾ’ ಎಂಬ ಹೆಸರಿನ ಈ ಐಷಾರಾಮಿ ಕಮೋಡ್ ಅನ್ನು ಖ್ಯಾತ ಇಟಾಲಿಯನ್ ಪರಿಕಲ್ಪನಾ ಕಲಾವಿದ ಮೌರಿಜಿಯೊ ಕ್ಯಾಟೆಲಾನ್ ವಿನ್ಯಾಸಗೊಳಿಸಿದ್ದರು.
ಕಳೆದ ವರ್ಷ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ಚಿನ್ನದ ಕಮೋಡ್ ಕದ್ದ ಅನುಮಾನದ ಮೇಲೆ ನಾಲ್ವರು ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲು ಘೋಷಿಸಿದ್ದು. ಈ ನಾಲ್ವರು ನವೆಂಬರ್ 28 ರಂದು ಆಕ್ಸ್‌ಫರ್ಡ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದರು.
ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ
ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ಇದೀಗ ವೆಲ್ಲಿಂಗ್‌ಬರೋದ 39 ವರ್ಷದ ಜೇಮ್ಸ್ ಶೀನ್, ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಏತನ್ಮಧ್ಯೆ, ಜೇಮ್ಸ್ ಶೀನ್ ಈಗಾಗಲೇ 400,000 ಪೌಂಡ್‌ಗಳ ಮೌಲ್ಯದ ರಾಷ್ಟ್ರೀಯ ಕುದುರೆ ರೇಸಿಂಗ್ ಮ್ಯೂಸಿಯಂನಿಂದ ಉಪಕರಣಗಳು ಮತ್ತು ಬಹುಮಾನಗಳನ್ನು ಒಳಗೊಂಡಂತೆ ಹಲವಾರು ವಸ್ತುಗಳ ಕಳ್ಳತನದ ಅಪರಾಧಗಳಿಗಾಗಿ 17 ವರ್ಷಗಳ ಜೈಲು ವಾಸದಲ್ಲಿದ್ದಾನೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ