Viral Video: ಬಿಎಂಟಿಸಿ ಬಸ್ನಲ್ಲಿ ಮಿನಿ ಗಾರ್ಡನ್ ನಿರ್ಮಿಸಿದ ಚಾಲಕ; ಕನ್ನಡಿಗರ ಭಾರೀ ಮೆಚ್ಚುಗೆ
ಹೆಚ್ಚಾಗಿ ಮನೆ ಅಂಗಳದಲ್ಲಿ, ಮಾಲ್, ಕಛೇರಿಗಳ ಮುಂಭಾಗದಲ್ಲಿ ಅಂದ ಚಂದದ ಗಾರ್ಡನ್ ನಿರ್ಮಾಣ ಮಾಡ್ತಾರೆ. ಆದ್ರೆ ಇಲ್ಲೊಬ್ಬರು BMTC ಬಸ್ ಚಾಲಕ ತಮ್ಮ ಬಸ್ಸಲ್ಲಿಯೇ ಮಿನಿ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಬಸ್ ಚಾಲಕರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮನೆ ಮುಂದೆ ಒಂದು ಸಣ್ಣ ಕೈತೋಟ ಅಥವಾ ಗಾರ್ಡನ್ ಇದ್ದರೆ ಮನೆಗೆ ಒಂದು ರೀತಿ ಬೇರೆಯದ್ದೇ ಶೋಭೆ. ಜೊತೆಗೆ ಇದು ಉತ್ತಮ ವಾತಾವರಣವನ್ನು ಸಹ ಒದಗಿಸುತ್ತದೆ. ಅದಕ್ಕಾಗಿಯೇ ಬಹುತೇಕ ಹೆಚ್ಚಿನವರು ಮನೆಯ ಮುಂದೆ ಅಥವಾ ಮನೆ ಟೆರೆಸ್ ಮೇಲೆ, ಬಾಲ್ಕನಿಗಳಲ್ಲಿ ಪುಟ್ಟದಾದ ಗಾರ್ಡನ್ ನಿರ್ಮಾಣ ಮಾಡುತ್ತಾರೆ. ಆದ್ರೆ ಇಲ್ಲೊಬ್ಬರು BMTC ಬಸ್ ಚಾಲಕ ತಮ್ಮ ಬಸ್ಸಿನಲ್ಲಿಯೇ ಮಿನಿ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿದ್ದಾರೆ. ಹೌದು ಮಹಾನಗರದಲ್ಲಿನ ಧೂಳು, ವಾಹನಗಳಿಂದ ಬರುವಂತಹ ಹೊಗೆ, ವರ್ಕ್ ಟೆನ್ಷನ್ ಇವೆಲ್ಲವುಗಳಿಂದ ಬೇಸತ್ತು ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಬೇಕೆಂದು ಬಸ್ಸಿನಲ್ಲಿಯೇ ಹಚ್ಚ ಹಸಿರಿನ ಪುಟ್ಟ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇವನಹಳ್ಳಿ-ಹೊಸಕೋಟೆಯ ಬಿ.ಎಂ.ಟಿ.ಸಿ ಬಸ್ ಚಾಲಕರಾದ ಲೋಕೇಶ್ ಎಂಬವರು ತಮ್ಮ ಬಸ್ಸಿನಲ್ಲಿ ಮಿನಿ ಗಾರ್ಡನ್ ನಿರ್ಮಾಣ ಮಾಡಿದ್ದು, ಮೊದಲಿಗೆ 5 ಹೂಕುಂಡಗಳನ್ನು ಇಟ್ಟಿದ್ದರು. ನಂತರ ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತೆ ಎಂಬ ಕಾರಣಕ್ಕೆ ಬಸ್ಸಿನ ಮುಂಭಾಗದಲ್ಲೆಲ್ಲಾ ಪುಟ್ಟ ಹೂಗಳ ಗಿಡ, ಮನಿ ಪ್ಲಾಂಟ್, ಅಮೃತ ಬಳ್ಳಿ ಗಿಡಗಳನ್ನು ಕುಂಡದಲ್ಲಿಟ್ಟು, ಬಸ್ಸಿನಲ್ಲಿ ಮಿನಿ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಪ್ರಯಾಣಿಕರಿಗೆ ಈ ಮಿನಿ ಗಾರ್ಡನ್ ಆಕರ್ಷಣೆಯ ಬಿಂದುವಾಗಿದ್ದು, ಹೆಚ್ಚಿನ ಪ್ರಯಾಣಿಕರು ಈ ಬಸ್ಸಿನಲ್ಲೇ ಪ್ರಯಾಣಿಸಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ ಲೋಕೇಶ್ ಅವರು ಪ್ರಯಾಣಿಕರಿಗಾಗಿ ಬಸ್ಸಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ.
ಈ ಕುರಿತ ವಿಶೇಷ ವಿಡಿಯೋವೊಂದನ್ನು ಚಂದನವನ (@chandanavanachannel) ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “BMTC ಬಸ್ಸಿನಲ್ಲೇ ಗಾರ್ಡನ್ ಮಾಡಿದ ಡ್ರೈವರ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ;
View this post on Instagram
ವೈರಲ್ ವಿಡಿಯೋದಲ್ಲಿ BMTC ಬಸ್ ಒಂದರಲ್ಲಿ ಚಾಲಕ ಮಿನಿ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವ ಸುಂದರ ದೃಶ್ಯವನ್ನು ಕಾಣಬಹುದು. ಮನಿಪ್ಲಾಂಟ್, ಅಮೃತಬಳ್ಳಿ ಸೇರಿದಂತೆ ವಿವಿಧ ರೀತಿಯ ಸುಂದರ ಹೂವುಗಳ ಪಾಟ್ ಗಳನ್ನು ಇಟ್ಟು ಹಚ್ಚ ಹಸಿರಿನ ಮಿನಿ ಗಾರ್ಡನ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್ ಎಂದರೇನು?
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಚಾಲಕನ ಗಿಡಗಳು ಮತ್ತು ಪ್ರಕೃತಿ ಪ್ರೇಮಕ್ಕೆ ನನ್ನ ವಂದನೆಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಉದ್ಯಾನ ನಗರಿ ಬೆಂಗಳೂರಿನ ಎಲ್ಲಾ ಬಸ್ ಗಳಲ್ಲಿಯೂ ಈ ಉತ್ತಮ ಕ್ರಮವನ್ನು ಅಳವಡಿಸಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಬಹಳ ಒಳ್ಳೆಯ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ