Expensive Mushrooms: ವಿಶ್ವದ ಅತ್ಯಂತ ದುಬಾರಿ ಅಣಬೆ; ಇದರ ಬೆಲೆ ಎಷ್ಟು ಗೊತ್ತಾ?
ಈ ದುಬಾರಿ ಅಣಬೆಯನ್ನು ನೀವು ಕೆಜಿ ಲೆಕ್ಕದಲ್ಲಿ ಖರೀದಿಸಬೇಕಾದರೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಪಾವತಿಸಬೇಕಾಗುತ್ತದೆ.
ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಅಣಬೆಗಳು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮಶ್ರೂಮ್ ಜನಪ್ರಿಯವಾಗಿರುವ ಆಹಾರವೂ ಹೌದು. ಆದರೆ ವಿಶ್ವದ ಅತ್ಯಂತ ದುಬಾರಿ ಬೆಲೆಯ ಅಣಬೆಯ ಬಗ್ಗೆ ಗೊತ್ತಾ? ಈ ಅಣಬೆಯನ್ನು ನೀವು ಕೆಜಿ ಲೆಕ್ಕದಲ್ಲಿ ಖರೀದಿಸಬೇಕಾದರೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಪಾವತಿಸಬೇಕಾಗುತ್ತದೆ.
ವಿಶ್ವದ ಅತ್ಯಂತ ದುಬಾರಿ ಮಶ್ರೂಮ್ ಜಪಾನ್‌ನ ಮಾಟ್ಸುಟೇಕ್ ಮಶ್ರೂಮ್ . ಈ ಮಶ್ರೂಮ್ ಕೊರಿಯನ್ ಪೆನಿನ್ಸುಲಾ, ಚೀನಾ ಮತ್ತು ಅಮೆರಿಕಾದಲ್ಲಿ ಬೆಳೆಯಲಾಗುತ್ತದೆ. ಆದರೆ ಜಪಾನ್ ನ ಕ್ಯೋಟೋದಲ್ಲಿ ಬೆಳೆಯುವ ಈ ಅಣಬೆಗಳ ಬೆಲೆ ಗಗನಕ್ಕೇರುತ್ತಿದೆ. ಈ ಅಣಬೆಯ ವಿಶೇಷತೆ ಅದರ ವಾಸನೆ. ಅದರ ಕಟುವಾದ ವಾಸನೆ ಮತ್ತು ಮಾಂಸದಂತಹ ರಚನೆಯಿಂದಾಗಿ ಇದು ಸಾಕಷ್ಟು ದುಬಾರಿಯಾಗುತ್ತಿದೆ. ಅವುಗಳ ಬೆಲೆ 500 ಡಾಲರ್ ಅಂದರೆ ಪೌಂಡ್ ಗೆ 41,708 ರೂ.
ಇದನ್ನೂ ಓದಿ: ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್! ಮಹಿಳೆಯರಲ್ಲಿ ಆತಂಕ ಸೃಷ್ಟಿಸಿರುವ ಈ ಸೀರೆ ಕ್ಯಾನ್ಸರ್ ಎಂದರೇನು?
ಈ ಅಣಬೆಯ ಬೆಲೆ ಕೆಜಿಗೆ ಲೆಕ್ಕ ಹಾಕಿದರೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ಇರುತ್ತದೆ. ತಿಳಿ ಕಂದು ಬಣ್ಣದಲ್ಲಿರುವ ಈ ಅಣಬೆ ಸಾಮಾನ್ಯ ಅಣಬೆಗಿಂತ ಗಾತ್ರದಲ್ಲಿ ದೊಡ್ಡದಿದೆ. ಇದರ ಉತ್ಪಾದನೆಯು ವರ್ಷಕ್ಕೆ 1000 ಟನ್‌ಗಳಿಗಿಂತ ಕಡಿಮೆಯಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ