AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ಬೆಲೆಯ ವಾಚ್ ನಿಮ್ಮ ಬಳಿಯಿದೆಯೇ, ಹಾಗಾದ್ರೆ ಈ ತಪ್ಪುಗಳನ್ನು ಅಪ್ಪಿ ತಪ್ಪಿಯು ಮಾಡಲೇಬೇಡಿ

ಈಗಂತೂ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸದ ಆಕರ್ಷಕವಾಗಿರುವ ವಾಚ್ ಗಳು ಲಗ್ಗೆ ಇಟ್ಟು ವಾಚ್ ಪ್ರಿಯರ ಮನಸ್ಸು ಗೆಲ್ಲುತ್ತಲೇ ಇದೆ. ಈಗಾಗಲೇ ದುಬಾರಿ ಬೆಲೆಯ ವಾಚ್ ಗಳು ಲಭ್ಯವಿದ್ದು ಕೈಗೊಂದು ಕೈಗಡಿಯಾರ ಇರಲಿ ಎಂದು ಎಲ್ಲರೂ ಬಯಸುವವರೇ. ಅದರಲ್ಲಿಯು ವಾಚ್ ಪ್ರಿಯರಂತೂ ವಿಭಿನ್ನ ವಿನ್ಯಾಸದ ವಾಚ್ ಕಲೆಕ್ಷನ್ ಹೊಂದಿರುತ್ತಾರೆ. ಆದರೆ ದುಬಾರಿ ಬೆಲೆಯ ಈ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಾಗ ಈ ಕೆಲವು ತಪ್ಪುಗಳನ್ನು ಮಾಡುವವರೇ ಹೆಚ್ಚು. ಹಾಗಾದ್ರೆ ನಿಮ್ಮ ಅಚ್ಚು ಮೆಚ್ಚಿನ ಕೈ ಗಡಿಯಾರವನ್ನು ಹಾಳಾಗದಂತೆ ಇರಿಸಿಕೊಳ್ಳುವಾಗ ಈ ವಿಚಾರಗಳ ಬಗ್ಗೆ ಗಮನ ಹರಿಸಿ.

ದುಬಾರಿ ಬೆಲೆಯ ವಾಚ್ ನಿಮ್ಮ ಬಳಿಯಿದೆಯೇ, ಹಾಗಾದ್ರೆ ಈ ತಪ್ಪುಗಳನ್ನು ಅಪ್ಪಿ ತಪ್ಪಿಯು ಮಾಡಲೇಬೇಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 02, 2024 | 5:16 PM

ಕೆಲವರಿಗೆ ಈ ಕೈ ಗಡಿಯಾರ ಎನ್ನುವುದು ಸಮಯವನ್ನು ತೋರಿಸುವ ವಸ್ತುವಿಗಿಂತ ಹೆಚ್ಚಾಗಿರುತ್ತದೆ. ಕೆಲವರಿಗೆ ಕೈ ಗಡಿಯಾರವೆನ್ನುವುದು ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತಾರೆ. ವೈಯಕ್ತಿಕ ಕಥೆಯನ್ನು ಹೇಳುತ್ತಿರುತ್ತದೆ. ಆದರೆ ದುಬಾರಿ ಬೆಲೆಯ ವಾಚ್ ಗಳನ್ನು ಸರಿಯಾಗಿ ನಿರ್ವಹಣೆ ಮತ್ತು ಕಾಳಜಿ ವಹಿಸಿದರೆ ಹೋದರೆ ಬೇಗನೇ ಹಾಳಾಗುತ್ತದೆ. ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ನಿಮ್ಮ ವಾಚ್ ಗಳನ್ನು ಹಾನಿಯಾಗದಂತೆ ಮುಂದಿನ ಪೀಳಿಗೆಯವರೆಗೂ ರವಾನಿಸುವುದು ಕಷ್ಟವೇನಲ್ಲ.

  • ನಿಯಮಿತ ಸೇವೆಯನ್ನು ನಿರ್ಲಕ್ಷಿಸುವುದು: ವಾಚ್ ಖರೀದಿಸುವ ವೇಳೆಯಲ್ಲಿ ಮಾಲೀಕರು ಕೆಲವು ಸೇವೆಗಳನ್ನು ಶಿಫಾರಸು ಮಾಡುತ್ತಾರೆ. ಆದರೆ ಖರೀದಿದಾರ ಈ ವಾಚ್ ಗಳನ್ನು ಸರ್ವಿಸ್ ಗೆ ಕೊಡುವ ಕೆಲಸ ಮಾಡುವುದೇ ಇಲ್ಲ. ಇದರಿಂದ ಬಹುಬೇಗನೆ ಕೈಗಡಿಯಾರವು ಕೆಟ್ಟು ಹೋಗುವಗುವ ಸಾಧ್ಯತೆ ಇರುತ್ತದೆ.
  • ಅನಾವಶ್ಯಕವಾಗಿ ವಾಚ್ ಅನ್ನು ನೀರಿಗೆ ಒಡ್ಡುವುದು: ಕೆಲವು ಕೈಗಡಿಯಾರಗಳು ನೀರು- ನಿರೋಧಕವಾಗಿದ್ದರೂ ನೀರಿಗೆ ಒಡ್ದುವುದರಿಂದ ಗ್ಯಾಸ್ಕೆಟ್‌ಗಳಿಗೆ ಹಾನಿಯಾಗಬಹುದು.
  • ಕೈ ಗಡಿಯಾರದ ಅಕ್ಕ ಪಕ್ಕ ಆಯಸ್ಕಾಂತ ವಸ್ತುಗಳನ್ನು ಇಡುವುದು : ಮ್ಯಾಗ್ನೆಟಿಕ್ ಕ್ಲಾಸ್ಟ್ ಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳಂತಹ ಬಲವಾದ ಕಾಂತೀಯ ವಸ್ತುಗಳು ಗಡಿಯಾರದ ಸೂಕ್ಷ್ಮವಾದ ಆಂತರಿಕ ಕಾರ್ಯಕ್ಕೆ ಅಡ್ಡಿಯಾಗಬಹುದು. ಅದಲ್ಲದೇ, ಕೈ ಗಡಿಯಾರದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
  • ರಾಸಾಯನಿಕಗಳನ್ನು ಶುಚಿಗೊಳಿಸಲು ಬಳಸುವುದು : ರಾಸಾಯನಿಕಗಳನ್ನು ಬಳಸಿ ವಾಚ್ ಶುಚಿ ಗೊಳಿಸುವುದರಿಂದ ಗೀರುಗಳು, ಬಣ್ಣ ಬದಲಾವಣೆ ಸೇರಿದಂತೆ ಇತರ ಹಾನಿಗಳಿಗೆ ಕಾರಣವಾಗುತ್ತದೆ.
  • ಅಸಮರ್ಪಕವಾದ ಸಂರಕ್ಷಣೆ: ಕೈ ಗಡಿಯಾರವನ್ನು ನೇರ ಸೂರ್ಯನ ಬೆಳಕು ಅಥವಾ ವಿಪರೀತ ತಾಪಮಾನಕ್ಕೆ ಒಡ್ಡಿಕೊಳ್ಳುವಂತಹ ಸ್ಥಳಗಳಲ್ಲಿ ಇಡುವುದು ಸೂಕ್ತವಲ್ಲ. ಇದರಿಂದ ಕೈ ಗಡಿಯಾರವು ಕೆಟ್ಟು ಹೋಗುವ ಸಂಭವವು ಅಧಿಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ