AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮುರಿದ ಕಬ್ಬಿಣದ ಗ್ರಿಲ್​ನಲ್ಲಿ ಮಕ್ಕಳಿಬ್ಬರ ತೂಗುಯ್ಯಾಲೆ ಆಟ; ವೈರಲ್ ಆಯ್ತು ವಿಡಿಯೋ 

ನಮ್ಮಲ್ಲಿ ಸಿರಿವಂತಿಕೆ ಇಲ್ಲದೆ ಇರಬಹುದು, ಆದರೆ ನಮ್ಮಲ್ಲಿ  ಖುಷಿಗೇನು ಕೊರತೆಯಿಲ್ಲ ಎನ್ನುತ್ತಾ ಪುಟಾಣಿ ಮಕ್ಕಳಿಬ್ಬರು  ರಸ್ತೆ ಬದಿಯಲ್ಲಿ ಮುರಿದ ಕಬ್ಬಿಣದ ಗ್ರಿಲ್ ಅಲ್ಲಿ ತೂಗುಯ್ಯಾಲೆ ಆಟವನ್ನು ಆಡಿದ್ದಾರೆ. ಈ ಮುದ್ದಾದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ  ವೈರಲ್ ಆಗುತ್ತಿದೆ. 

Viral Video: ಮುರಿದ ಕಬ್ಬಿಣದ ಗ್ರಿಲ್​ನಲ್ಲಿ ಮಕ್ಕಳಿಬ್ಬರ ತೂಗುಯ್ಯಾಲೆ ಆಟ; ವೈರಲ್ ಆಯ್ತು ವಿಡಿಯೋ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 03, 2024 | 4:02 PM

Share

ಮಕ್ಕಳ ಜೀವನವೇ ಬಲು ಸುಂದರ. ಈ ಸುಂದರ ಬಾಲ್ಯ ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಮಕ್ಕಳಿದ್ದಾಗ್ಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಂಜಾಯ್ ಮಾಡ್ಬೇಕು. ಆದ್ರೆ ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಅಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಹೊರತು ಮನೆಯಿಂದ ಹೊರ ಬಂದ ಜಾರು ಬಂಡೆ, ಜೋಕಾಲಿ, ಚಿನ್ನಿದಾಂಡು ಇಂತಹ ಆಟಗಳನ್ನು ಆಡುವುದೇ ಅಪರೂಪವಾಗಿಬಿಟ್ಟಿದೆ. ಆದರೆ ಇಲ್ಲಿಬ್ಬರು ಪುಟಾಣಿ ಮಕ್ಕಳು ನಮ್ಮಲ್ಲಿ ಆಟವಾಡಲು ಆಟಿಕೆ ಇಲ್ಲದಿದ್ರೆ ಏನಂತೆ ಎನ್ನುತ್ತಾ, ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ರಸ್ತೆ ಬದಿಯಲ್ಲಿ ಮುರಿದ ಕಬ್ಬಿಣದ ಗ್ರಿಲ್ ಒಂದರಲ್ಲಿ ತೂಗುಯ್ಯಾಲೆ ಆಟವನ್ನು ಆಡುತ್ತಾ ಎಂಜಾಯ್ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಜುಗಾಡ್ ಐಡಿಯಾಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ಕ್ರಿಯೆಟಿವ್ ಐಡಿಯಾಗಳ ವಿಡಿಯೋಗಳನ್ನು ಕಂಡು ಇಂಡಿಯಾ ಇಸ್ ನಾಟ್ ಫಾರ್ ಬಿಗಿನರ್ಸ್ ಎಂದು ನೆಟ್ಟಿಗರು ಆಗಾಗ್ಗೆ ಹೇಳುತ್ತಿರುತ್ತಾರೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಕ್ಕಳಿಬ್ಬರು ರಸ್ತೆ ಬದಿಯಲ್ಲಿನ ಕಬ್ಬಿಣದ ಗ್ರಿಲ್ ಒಂದರಲ್ಲಿ ತೂಗುಯ್ಯಾಲೆ ಆಟವನ್ನು ಆಡುತ್ತಾ, ತಮ್ಮ ಬಾಲ್ಯವನ್ನು ಎಂಜಾಯ್ ಮಾಡಿದ್ದಾರೆ.  @ghantaa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇಬ್ಬರು  ಪುಟಾಣಿ ಮಕ್ಕಳು ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ,  ಮುರಿದು ಹೋದ ಗ್ರಿಲ್ ಒಂದರಲ್ಲಿ  ತೂಗುಯ್ಯಾಲೆ ಆಟವನ್ನು ಆಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೊಡಿ:

View this post on Instagram

A post shared by ghantaa (@ghantaa)

ವೈರಲ್ ವಿಡಿಯೋದಲ್ಲಿ ರಸ್ತೆ ಪಕ್ಕದಲ್ಲಿನ ಬೃಹತ್ ಕಟ್ಟಡದ ಕಾರಿಡಾರ್ ಅಲ್ಲಿ  ಮುರಿದು ಹೋದಂತಹ ಕಬ್ಬಿಣದ ಗ್ರಿಲ್ ಒಂದರಲ್ಲಿ ಪುಟಾಣಿ ಮಕ್ಕಳಿಬ್ಬರು ಕುಳಿತುಕೊಂಡು ಇತರೆ ಮಕ್ಕಳಂತೆ ಮೊಬೈಲ್ ನೋಡುತ್ತಾ ಸಮಯ ಕಳೆಯದೆ, ಈ ಕಬ್ಬಿಣದ ಗ್ರಿಲ್ ಅಲ್ಲಿ ಕುಳಿತು ತೂಗುಯ್ಯಾಲೆ ಆಟವನ್ನು ಆಡುತ್ತಾ ತಮ್ಮ ಬಾಲ್ಯವನ್ನು ಎಂಜಾಯ್ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ

ಮಾರ್ಚ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ಇರುವುದರಲ್ಲಿಯೇ ತಮ್ಮ ಖುಷಿಯನ್ನು ಕಂಡುಕೊಳ್ಳುತ್ತಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇಂಡಿಯಾ ಇಸ್ ನಾಟ್ ಫಾರ್ ಬಿಗಿನರ್ಸ್ ಎಂಬ ಕಾಮೆಂಟ್ಸ್ ಗಳನ್ನು ಬರೆದುಕೊಂಡಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ