ಘಾನಾ: 12 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ 63 ವರ್ಷದ ವ್ಯಕ್ತಿ
ಭಾರತದ ರೀತಿಯಲ್ಲೇ ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಕೂಡ ಹೆಣ್ಣುಮಕ್ಕಳು ಮದುವೆಯಾಗುವ ವಯಸ್ಸು 18 ವರ್ಷ. ಆದರೆ 63 ವರ್ಷದ ಧಾರ್ಮಿಕ ಮುಖಂಡರೊಬ್ಬರು 12 ವರ್ಷದ ಅಪ್ರಾಪ್ತೆಯನ್ನು ವರಿಸಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದು ನಮ್ಮ ಸಂಪ್ರದಾಯ ಎಂದು ಆ ಸಮಯದಾಯದವರು ಹೇಳಿಕೊಂಡಿದ್ದಾರೆ.
ಭಾರತದ ರೀತಿಯಲ್ಲೇ ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಕೂಡ ಹೆಣ್ಣುಮಕ್ಕಳು ಮದುವೆಯಾಗುವ ವಯಸ್ಸು 18 ವರ್ಷ. ಆದರೆ 63 ವರ್ಷದ ಧಾರ್ಮಿಕ ಮುಖಂಡರೊಬ್ಬರು 12 ವರ್ಷದ ಅಪ್ರಾಪ್ತೆಯನ್ನು ವರಿಸಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದು ನಮ್ಮ ಸಂಪ್ರದಾಯ ಎಂದು ಆ ಸಮಯದಾಯದವರು ಹೇಳಿಕೊಂಡಿದ್ದಾರೆ.
ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮದ ಮುಖಂಡರಿಗೆ ಎಲ್ಲರೂ ಗೌರವ ಕೊಡುತ್ತಾರೆ. ಆದರೆ ಈ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನುಬದ್ಧವಾಗಿ ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು ಆದರೆ ಆ ಬಾಲಕಿಗೆ ಕೇವಲ 12 ವರ್ಷ ವಯಸ್ಸು.
ಈ ಮದುವೆ ತಮ್ಮ ಸಂಪ್ರದಾಯದ ಪದ್ಧತಿಯಂತೆ ನಡೆದಿದೆ ಎಂದು ಹೇಳಿದ್ದಾರೆ. ಆಕೆಗೆ 6 ವರ್ಷವಾಗಿದ್ದಾಗಲೇ ಆಕೆಯನ್ನು ನೋಡಿದ್ದರು, ಅಂದಿನಿಂದ ಆಕೆಯನ್ನೇ ಮದುವೆಯಾಗಬಯಸಿದ್ದರು.
ನುಂಗ್ವಾ ಸಮುದಾಯದ ಧಾರ್ಮಿಕ ಮುಖಂಡ ನುಮೊ ಬೊರ್ಕೆಟೆ ಲಾವೆಹ್ ತ್ಸುರು, ತಮ್ಮದೇ ಸಮುದಾಯದ 12 ವರ್ಷದ ಹುಡುಗಿಯನ್ನು ವಿವಾಹವಾಗಿದ್ದಾರೆ.
ಮತ್ತಷ್ಟು ಓದಿ:ಮುಟ್ಟಿನ ರಕ್ತವನ್ನು ಫೇಸ್ ಮಾಸ್ಕ್ ಆಗಿ ಬಳಸುತ್ತಾಳೆ ಈ ಯುವತಿ; ಈ ಕುರಿತು ತಜ್ಞರು ಹೇಳುವುದೇನು?
ಘಾನಾದಲ್ಲಿ ಬಾಲ್ಯ ವಿವಾಹವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಆಚರಣೆಯನ್ನು ಆಚರಿಸಬಾರದು ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಕ್ರೋವರ್‌ನ ನುಂಗುವಾದಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹ ನಡೆಯಿತು. ಟೀಕೆಗಳನ್ನು ಅಜ್ಞಾನ ಎಂದು ತಳ್ಳಿಹಾಕಿದ್ದಾರೆ. ಘಾನಾದಲ್ಲಿ ಸುಮಾರು 19% ಹುಡುಗಿಯರು 18 ನೇ ವಯಸ್ಸನ್ನು ತಲುಪುವ ಮೊದಲು ಮದುವೆಯಾಗಿದ್ದಾರೆ, 5% ರಷ್ಟು ತಮ್ಮ 15 ನೇ ಹುಟ್ಟುಹಬ್ಬದ ಮೊದಲು ಮದುವೆಯಾಗಿದ್ದಾರೆ ಎಂದು NGO ಗರ್ಲ್ಸ್ ನಾಟ್ ಬ್ರೈಡ್ಸ್ ಹೇಳಿದೆ. ಈ ವಿವಾದಿತ ವಿವಾಹದ ಬಗ್ಗೆ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ