ಹೈದರಾಬಾದ್: ಕೆಲ ದಿನಗಳ ಹಿಂದೆಯಷ್ಟೇ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯೊರ್ವನಿಗೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನೀಡಲಾಗಿದ್ದ ಅನಸ್ತೇಶಿಯ ಒವರ್ ಡೋಸ್ನಿಂದಾಗಿ ಸಾವನ್ನಪ್ಪಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇದೀಗಾ ಇದಕ್ಕೆ ಪೂರಕ ಎಂಬಂತೆ ಇದೇ ಡೆಂಟಲ್ ಆಸ್ಪತ್ರೆಯಲ್ಲಿ ನಡೆದಿದ್ದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ವೈದ್ಯರೊಬ್ಬರು ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ಕತ್ತರಿಸಿ ಕಳುಹಿಸಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದೀಗಾ @sowmya_sangam ಎಂಬ ಟ್ವಿಟರ್ ಬಳಕೆದಾರರು ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ತನ್ನ ಗೆಳತಿಗಾದ ಅನ್ಯಾಯವನ್ನು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. “ಇತ್ತೀಚೆಗಷ್ಟೇ ಅನಸ್ತೇಶಿಯ ಒವರ್ ಡೋಸ್ನಿಂದಾಗಿ ವ್ಯಕ್ತಿಯೊಬ್ಬ ಈ ಡೆಂಟಲ್ ಕ್ಲಿನಿಕ್‌ನಲ್ಲಿ ಸಾವನ್ನಪ್ಪಿರುವ ಘಟನೆ ಅಘಾತವನ್ನುಂಟು ಮಾಡಿದೆ. ಆದರೆ ಇಲ್ಲಿನ ದಂತ ವೈದ್ಯರ ನಿರ್ಲಕ್ಷ್ಯಗಳು ಇದೇ ಮೊದಲೇನಲ್ಲಾ ಈ ಹಿಂದೆಯೂ ಕೂಡ ಇಂತದ್ದೇ ಘಟನೆ ನಡೆದಿದೆ. ತನ್ನ ಗೆಳತಿಯೊಬ್ಬರು ಇಲ್ಲಿ ಹಲ್ಲಿನ ಚಿಕಿತ್ಸೆಗೆಂದು ಹೋದಾಗ ಚಿಕಿತ್ಸೆಯ ಸಮಯದಲ್ಲಿ ಡೆಂಟಲ್ ಬ್ಲೆಡ್ನಿಂದ ಆಕೆಯ ತುಟಿಗಳನ್ನೇ ಕತ್ತರಿಸಿದ್ದಾರೆ” ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
At FMS Hospital in Jubilee Hills, where a patient passed away during dental procedure due to anesthesia overdose, one of my friends too had a horrific dental treatment experience there earlier. The dentist accidentally chopped off her lip, leaving a deep depression in her mouth. pic.twitter.com/43vt4fBcZF
— Sowmya Sangam (@sowmya_sangam) February 20, 2024
ಇದನ್ನೂ ಓದಿ: ‘Smile Designing’ Surgery: ಹಲ್ಲಿನ ಚಂದ ಹೆಚ್ಚಿಸಲು ಹೋಗಿ ಸಾವನ್ನಪ್ಪಿದ ಮದುಮಗ
ಈ ಪೋಸ್ಟ್ ವೈರಲ್ ಆಗುತ್ತಿದ್ದು, ಸಾಕಷ್ಟು ನೆಟ್ಟಿಗರು ಕ್ಲಿನಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಮಗಾದ ಅನ್ಯಾಯದ ವಿರುದ್ಧ ಆ ಡೆಂಟಲ್ ಕ್ಲಿನಿಕ್ ವಿರುದ್ಧ ಕೋರ್ಟ್ನಲ್ಲಿ ಕೇಸು ದಾಖಲಿಸಿ” ಎಂದು ಸಾಕಷ್ಟು ನೆಟ್ಟಿಗರು ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ