
ರೆಡ್ಡಿಟ್‌ನಲ್ಲಿ ತುಂಬಾ ಕ್ಯೂಟ್ ಆಗಿರುವ ಪೋಸ್ಟ್ವೊಂದು ವೈರಲ್ ಆಗಿದೆ. ತನ್ನ ಹೆಂಡತಿಯ ಹುಟ್ಟು ಹಬ್ಬಕ್ಕೆ ಫ್ಯಾಮಿಲಿ ವಾಟ್ಸಪ್ ಗ್ರೂಪ್‌ನಲ್ಲಿ (Family WhatsApp group) ಯಾರೂ ವಿಶ್ ಮಾಡಿಲ್ಲ ಎಂದು ಗ್ರೂಪ್‌ನಲ್ಲಿ ಕುಟುಂಬ ಸದಸ್ಯರಿಗೆ ಹಾಕಿರುವ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ಅವರ ಮಗ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ “ ತಂದೆ ಸಂದೇಶ ನನ್ನ ಇಡೀ ಕುಟುಂಬವನ್ನು ಲೋಲ್ ಎಂದು ಕರೆದರು“ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಈ ಪೋಸ್ಟ್ಗೆ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಮ್ಮ ಫ್ಯಾಮಿಲಿ ವಾಟ್ಸಪ್ ಗ್ರೂಪ್‌ನಲ್ಲಿ ನನ್ನ ತಂದೆ, ತಾಯಿ, ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಮ್ಮ ದೊಡ್ಡಪ್ಪ, ಅತ್ತೆ–ಮಾವ, ಅವರ ಮಕ್ಕಳು , ನನ್ನ ಹೆಂಡತಿ, ಮಕ್ಕಳು ಎಲ್ಲರೂ ಕೂಡ ಇದ್ದಾರೆ. ಈ ಗ್ರೂಪ್‌ನಲ್ಲಿ ನನ್ನ ತಾಯಿಯ ಹುಟ್ಟು ಹಬ್ಬಕ್ಕೆ ಯಾರೊಬ್ಬರು ಕೂಡ ಶುಭಾಶಯ ತಿಳಿಸಿಲ್ಲ. ಅವರೆಲ್ಲ ಗ್ರೂಪ್‌ನಲ್ಲಿ ಆಕ್ಟಿವ್ ಆಗಿರುವುದು ಕಡಿಮೆ, ಹಾಗಾಗಿ ಗ್ರೂಪ್‌ನಲ್ಲಿ ತುಂಬಾ ಮೌನ ಆವರಿಸಿತು. ಈ ವೇಳೆ ನನ್ನ ಅಮ್ಮ ಗ್ರೂಪ್‌ನಲ್ಲಿ ಹೀಗೆ ಸುಮ್ಮನೆ ಒಂದು ಮೆಸೇಜ್ ಹಾಕಿದ್ರು, ಅಲ್ಲಿಂದ ಸ್ವಲ್ಪ ಚರ್ಚೆಗಳು ನಡೆಯಿತು. ಸ್ವಲ್ಪ ಹೊತ್ತಿನ ನಂತರ ಅಪ್ಪ ಇದರಲ್ಲಿ ಮಧ್ಯಪ್ರವೇಶ ಮಾಡಿದ್ರು, ನನ್ನ ಹೆಂಡತಿಯ ಹುಟ್ಟುಹಬ್ಬದಂದು ತುಂಬಾ ಪ್ರೀತಿಯನ್ನು ಸುರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಅಪ್ಪ ವ್ಯಂಗ್ಯವಾಗಿ ಹೇಳಿದ್ರು, ಎಲ್ಲರೂ ಕೂಡ ಈ ಮೆಸೇಜ್ಗೆ ನಗುವಿನ ಎಮೋಜಿ ಕಳಿಸಿದ್ರು, ಈ ಗ್ರೂಪ್‌ನಲ್ಲಿ ಕುಟುಂಬದ ಇತರರ ಸದಸ್ಯರ ಹುಟ್ಟುಹಬ್ಬದಂದು ಶುಭಾಶಯಗಳು ಬರುತ್ತದೆ. ಆದರೆ ನನ್ನ ತಾಯಿಗೆ ಯಾರೂ ಶುಭಾಶಯ ತಿಳಿಸಿಲ್ಲ. ಗ್ರೂಪ್‌ನಲ್ಲಿ ಅಪ್ಪನ ಮೆಸೇಜ್ ಬರುತ್ತಿದ್ದಂತೆ ಹುಟ್ಟು ಹಬ್ಬದ ಸುರಿಮಳೆ ಶುರುವಾಯಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇದು ಆಪಲ್ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
My father literally called my whole family out lol
byu/constantdownfall_ inTeenIndia
ನನ್ನ ಫ್ಯಾಮಿಲಿ ಗ್ರೂಪ್‌ನಲ್ಲಿ ಎಲ್ಲವೂ ಸರಳವಾಗಿದೆ. ಯಾರೂ ಯಾವುದೇ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಿಮ್ಮ ತಂದೆ ತುಂಬಾ ಪೂಕಿ (ಕ್ಯೂಟ್) ಎಂದು ತಮಾಷೆಯಾಗಿ ಹೇಳಿದ್ದಾರೆ. ಪುರುಷರು ತಮ್ಮ ಹೆಂಡತಿಯ ಪರವಾಗಿ ನಿಲ್ಲುವ ಧೈರ್ಯವಿಲ್ಲದಿದ್ದರೆ ಮದುವೆಯಾಗಬಾರದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಿಮ್ಮ ಅಮ್ಮನ ಪರವಾಗಿ ನಿಂತಿದ್ದಕ್ಕಾಗಿ ನಿಮ್ಮ ತಂದೆಗೆ ಕೃತಜ್ಞತೆ ಹೇಳಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Wed, 12 November 25