‘ನಾನು ಬದುಕಿರುವವರೆಗೂ ಇದನ್ನು ಕಾಪಿಟ್ಟುಕೊಳ್ಳುತ್ತೇನೆ’ ಈ ಅಮ್ಮ ಹೀಗೇಕೆ ಹೇಳುತ್ತಿರುವುದು?

|

Updated on: Feb 09, 2023 | 12:12 PM

Mother and Child : ಇದಕ್ಕೆ ಫ್ರೇಮ್​ ಹಾಕಿಸಿ ನಿಮ್ಮ ಆಫೀಸಿನಲ್ಲಿಟ್ಟುಕೊಳ್ಳಿ ಎಂದು ಒಬ್ಬರು. ಡ್ರಾಯರ್ ತುಂಬಾ ನನ್ನ ಮಕ್ಕಳು ಬರೆದ ಪತ್ರಗಳಿವೆ, ಅವುಗಳಲ್ಲಿ ಮಗಳು ಕೇಳಿದ ಕ್ಷಮೆಯ ಪತ್ರಗಳೇ ಹೆಚ್ಚಿವೆ ಎಂದಿದ್ದಾರೆ ಇನ್ನೊಬ್ಬರು. ನೀವೇನಂತೀರಿ?

‘ನಾನು ಬದುಕಿರುವವರೆಗೂ ಇದನ್ನು ಕಾಪಿಟ್ಟುಕೊಳ್ಳುತ್ತೇನೆ’ ಈ ಅಮ್ಮ ಹೀಗೇಕೆ ಹೇಳುತ್ತಿರುವುದು?
ಆರು ವರ್ಷದ ಮಗು ತನ್ನ ತಾಯಿಗೆ ಬರೆದ ನೋಟ್
Follow us on

Viral News : ಅಮ್ಮನನ್ನು ಮಕ್ಕಳು ಅರ್ಥ ಮಾಡಿಕೊಳ್ಳತೊಡಗಿದರೆ ಆ ಪಯಣವೇ ಬೇರೆ. ಅಮ್ಮನ ರೆಕ್ಕೆಗೆ ಇದು ಮತ್ತಷ್ಟು ಬಲವನ್ನು ತುಂಬುತ್ತದೆ. ಆದರೆ ಈ ಹಂತಕ್ಕಾಗಿ ಒಂದಷ್ಟು ವರ್ಷಗಳನ್ನು ಅಮ್ಮ ಸವೆಸಲೇಬೇಕು. ಆದರೆ ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಈಗಷ್ಟೇ ಅಕ್ಷರ ಕಲಿಯುತ್ತಿರುವ ಮಗು ಅಮ್ಮನಿಗೆ ಹೀಗೆ ಪತ್ರ ಬರೆದಿದೆ. ಈ ಮಗುವಿಗೆ ಕೇವಲ ಆರುವರ್ಷ. ‘ಆರು ವರ್ಷದ ಮಗುವಿನಿಂದ ಈಗಷ್ಟೇ ಇದು ಸಿಕ್ಕಿತು. ನಾನು ಬದುಕಿರುವವರೆಗೂ ಇದನ್ನು ಕಾಪಿಟ್ಟುಕೊಳ್ಳುತ್ತೇನೆ’ ಎಂದು ವೈದ್ಯೆಯಾಗಿರುವ ಮಗುವಿನ ಅಮ್ಮ ಈ ನೋಟ್​ ಅನ್ನು ಟ್ವೀಟ್ ಮಾಡಿದ್ದಾರೆ.

ಕ್ಷಮಿಸಿ ಅಮ್ಮಾ, ನಿಮ್ಮ ದಿನ ಈವತ್ತು ಒತ್ತಡದಿಂದ ಕೂಡಿತ್ತೋ ಏನೋ ಎಂದು ಕೆಳಗೆ ಎರಡು ಪುಟ್ಟ ಹೃದಯಗಳನ್ನು ಚಿತ್ರಿಸಿದೆ ಈ ಮಗು. ಫೆಬ್ರವರಿ 7 ರಂದು ಇದನ್ನು ಟ್ವೀಟ್ ಮಾಡಲಾಗಿದೆ. ಈತನಕ ಸುಮಾರು 63,000 ಜನರು ಇದನ್ನು ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ

ಇದಕ್ಕೆ ಫ್ರೇಮ್​ ಹಾಕಿಸಿ ನಿಮ್ಮ ಆಫೀಸಿನಲ್ಲಿ ಇರಿಸಿಕೊಳ್ಳಿ ಅಥವಾ ಲ್ಯಾಮಿನೇಟ್ ಮಾಡಿ ಕಾರ್​ವೈಸರ್​ಗೆ ಹಾಕಿ. ಯಾವಾಗ ನಿಮಗೆ ಒತ್ತಡದ ದಿನ ಎಂದು ಅನ್ನಿಸುತ್ತದೆಯೋ ಆಗ ಇದನ್ನು ನೋಡಬಹುದು ಎಂದು ಒಬ್ಬರು ಹೇಳಿದ್ದಾರೆ. ಅಮ್ಮ ಅಪ್ಪನನ್ನು ಬೆಚ್ಚಗಾಗಿಸುವ ಈ ಪತ್ರಗಳು ಬಹಳ ಅಮೂಲ್ಯವಾದವುಗಳು ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ನನ್ನ ಡ್ರಾಯರ್ ತುಂಬಾ ನನ್ನ ಮಕ್ಕಳು ಬರೆದ ಪತ್ರಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳಲ್ಲಿ ನನ್ನ ಮಗಳು ಯಾವ್ಯಾವುದೋ ವಿಷಯಕ್ಕೆ ಕ್ಷಮೆ ಕೇಳಿದ್ದಾಳೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು ಇಂಥ ಪತ್ರಗಳನ್ನು ಗ್ರೀಟಿಂಗ್​ ಕಾರ್​​ಗೆ ಪರಿವರ್ತಿಸಿ ಜೋಪಾನಿಸಿಟ್ಟುಕೊಂಡಿದ್ದೇನೆ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:10 pm, Thu, 9 February 23