Video Viral: 104 ನೇ ಮಯಸ್ಸಿನಲ್ಲಿ ಸ್ಕೈ ಡೈವ್ ಕನಸನ್ನು ನನಸು ಮಾಡಿಕೊಂಡ ಅಜ್ಜಿ

|

Updated on: Oct 05, 2023 | 2:57 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ಭಾರೀ ವೈರಲ್​​ ಆಗುವುದುಂಟು. ಇದೀಗಾ ಒಂದು ಅಜ್ಜಿಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ತನ್ನ 104 ನೇ ವಯಸ್ಸಿನಲ್ಲಿ ಈ ಅಜ್ಜಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಕನಸು ಏನು ಗೊತ್ತಾ? ಈ ಸ್ಟೋರಿನಾ ಓದಿ.

Video Viral: 104 ನೇ ಮಯಸ್ಸಿನಲ್ಲಿ ಸ್ಕೈ ಡೈವ್ ಕನಸನ್ನು ನನಸು ಮಾಡಿಕೊಂಡ ಅಜ್ಜಿ
Viral Video
Image Credit source: Twitter
Follow us on

ನಿಮ್ಮ ಕನಸುಗಳನ್ನು ನನಸಾಗಿಸಲು ವಯಸ್ಸಿನ ಮಿತಿಯಿಲ್ಲ. ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಹುಮ್ಮಸ್ಸಿಗಲ್ಲಾ. ಇದಕ್ಕೊಂದು ಉತ್ತಮ ಉದಾಹರಣೆ ಎಂಬಂತೆ 104 ನೇ ಇಳಿ ವಯಸ್ಸಿನಲ್ಲಿ 13,500 ಮೀಟರ್ ಎತ್ತರದಲ್ಲಿ ಸ್ಕೈಡೈವ್ ಮಾಡಿದ ಅಜ್ಜಿಯ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನಸನ್ನು ನನಸು ಮಾಡುವ ಧೈರ್ಯ, ಛಲವಿದ್ದರೆ ಯಾವ ವಯಸ್ಸಿನಲ್ಲಿ ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಈ ಅಜ್ಜಿ. ವಿಡಿಯೋ ಎಲ್ಲಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಅಜ್ಜಿಯ ಧೈರ್ಯ ಹಾಗೂ ಸಾಹಸವನ್ನು ಕಾಮೆಂಟ್​​ ಮೂಲಕ ಕೊಂಡಾಡಿದ್ದಾರೆ.

104 ನೇ ಮಯಸ್ಸಿನಲ್ಲಿ ಸ್ಕೈ ಡೈವ್ ಮಾಡಿದ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿ ಬಾಲಕಿ ಚಡಪಡಿಕೆ; ವಿಡಿಯೋ ವೈರಲ್

ಅಮೆರಿಕದ ಚಿಕಾಗೋದ ಡೊರೊಥಿ ಹಾಫ್ನರ್(104) ಧೈರ್ಯದಿಂದ ತನ್ನ ಕನಸನ್ನು ನನಸಾಗಿಸಿದ ಅಜ್ಜಿ. ಭಾನುವಾರ ಅಕ್ಟೋಬರ್ 1 ರಂದು ಚಿಕಾಗೋದಿಂದ ನೈಋತ್ಯಕ್ಕೆ 140 ಕಿಲೋಮೀಟರ್ ದೂರದಲ್ಲಿರುವ ಒಟ್ಟಾವಾದಲ್ಲಿ 13,500 ಅಡಿ ಎತ್ತರದಲ್ಲಿ ಸ್ಕೈ ಡೈವ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ವಯಸ್ಸಲ್ಲಿ ಸ್ಕೈ ಡೈವಿಂಗ್ ಮಾಡೋದು ಮಾಮೂಲಿ ವಿಷಯ ಅಲ್ಲ ಅಜ್ಜಿ.. ಸೂಪರ್’ ಎಂದು ಒಬ್ಬರು ಕಮೆಂಟ್ ಹಾಕಿದ್ದರೆ, ಮತ್ತೊಬ್ಬರು ‘ಥ್ಯಾಂಕ್ಯೂ ಅಜ್ಜಿ, ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಕ್ಕೆ’ ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು ‘ವಾವ್.. ಸೂಪರ್, ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: