ನನಗೂ ಸ್ನಾನ ಮಾಡಬೇಕು, ಟವೆಲ್ ಪ್ಲೀಸ್… ಬಾತ್ರೂಮ್ಗೆ ನುಗ್ಗಿದ 12 ಅಡಿ ಉದ್ದದ ಹೆಬ್ಬಾವು
ಶೌಚಾಲಯದ ಮೂಲಕ ಬಾತ್ರೂಮ್ಗೆ ನುಗ್ಗಿದ ಹೆಬ್ಬಾವು, ಅದರ ಹತ್ತಿರಕ್ಕೆ ಹೋದ ಬೆಕ್ಕಿನ ಕಥೆ ಏನು? ವೈರಲ್ ವಿಡಿಯೋ ಇಲ್ಲಿದೆ ನೋಡಿ...
ಬಾತ್ರೂಮ್ ಅಥವಾ ಟಾಯ್ಲೆಟ್ ಒಳಗಡೆ ಹಾವುಗಳಂತಹ ಸರಿಸೃಪಗಳು ಕಂಡುವರುತ್ತಿವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿರುವುದನ್ನು ಕಂಡಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಲು ಪ್ರಾರಂಭಿಸಿದೆ. ಶೌಚಾಯಲಯದ ಮೂಲಕ ಪ್ರವೇಶಿಸಿದ 12 ಅಡಿ ಉದ್ದದ ಹೆಬ್ಬಾವು ಒಂದು ಸ್ನಾನದ ಗೃಹಕ್ಕೆ ನುಗ್ಗಿದ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಹೆಬ್ಬಾವಿನ ಹತ್ತಿರದಲ್ಲೇ ಒಂದು ಬೆಕ್ಕು ಇರುವುದನ್ನು ಕಾಣಬಹುದು. ಆ ಬೆಕ್ಕು ಏನಾಯ್ತು? ಅದನ್ನೂ ಹೇಳುತ್ತೇವೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಸರಿಸುಮಾರು 12 ಅಡಿ ಉದ್ದದ ದೈತ್ಯ ಹೆಬ್ಬಾವು ಸ್ನಾನದ ಗೃಹದಲ್ಲಿ ಪತ್ತೆಯಾಗಿದೆ, ವರದಿಗಳ ಪ್ರಕಾರ ಶೌಚಾಲಯದಿಂದ ಸ್ನಾನದ ಗೃಹಕ್ಕೆ ಪ್ರವೇಶಿಸಿದೆ. ಇದನ್ನು ನೋಡಿದ ಮನೆಯವರು ಹಾವು ರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಮನೆಗೆ ದಾವಿಸಿದ ಇಬ್ಬರು ಉರಗ ರಕ್ಷಕರು ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಬೆಕ್ಕಿನ ಧೈರ್ಯ ಹೇಗಿತ್ತು ಗೊತ್ತಾ?
ವಿಡಿಯೋದಲ್ಲಿ ಕಾಣುವಂತೆ ಬೆಕ್ಕು ಹೆಬ್ಬಾವಿನ ಹತ್ತಿರಕ್ಕೆ ಹೋಗುತ್ತದೆ. ಆದರೆ ಹೆಬ್ಬಾವು ಮಾತ್ರ ಏನೂ ಮಾಡುವುದಿಲ್ಲ. ದೈತ್ಯ ಹೆಬ್ಬಾವಿನ ಮುಂದೆ ಸಣ್ಣ ಗಾತ್ರದ ಬೆಕ್ಕು ಯಾವ ಲೆಕ್ಕ ಅಲ್ವಾ? ಅಷ್ಟಕ್ಕೂ ಬೆಕ್ಕು ಮುಂದೆ ಹೋಗಲು ಧೈರ್ಯ ಮಾಡಿದ್ದು ಅಡ್ಡಲಾಗಿ ದೊಡ್ಡ ಗ್ಲಾಸ್ ಇದೆ ಎಂದು ಗೊತ್ತಿದೆ. ಬಾತ್ರೂಮ್ಗೆ ಅಡ್ಡಲಾಗಿ ಗೋಡೆಯ ಬದಲು ಗ್ಲಾಸ್ ಅನ್ನು ಅಳವಡಿಸಲಾಗಿದೆ. ಹೀಗಾಗಿ ಹೆಬ್ಬಾವು ದಾಳಿ ಮಾಡಲು ಸಾಧ್ಯವಿಲ್ಲ, ಹೀಗಾಗಿ ಜನಸಾಮಾನ್ಯರು ಮೃಗಾಲಯಕ್ಕೆ ಹೋಗಿ ಕೂಡಿಹಾಕಿದ ಹಾವುಗಳನ್ನು ಗ್ಲಾಸ್ ಮೂಲಕ ಯಾವ ರೀತಿ ಹತ್ತಿರದಿಂದ ನೋಡುತ್ತಾರೆಯೋ ಅದೇ ರೀತಿಯಲ್ಲಿ ಬೆಕ್ಕು ಕೂಡ ನೋಡಿದೆ ಅಷ್ಟೆ.
ವೈರಲ್ ವಿಡಿಯೋವನ್ನು ನೌ ದಿಸ್ ನ್ಯೂಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 5.74 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಹಾಗೂ ಸಾವಿರಾರರು ಲೈಕ್ಗಳು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದು, ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, ಸ್ನಾನದ ತೊಟ್ಟಿಗೆ ಏಕೆ ಕಿಟಕಿ ಇದೆ ಎಂದು ಪ್ರಶ್ನಿಸಿದ್ದಾರೆ.
View this post on Instagram
ಮತ್ತಷ್ಟು ಟ್ರೆಂಡಿಂಗ್ ವಿಡಿಯೋನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Sun, 11 September 22