ದೊಡ್ಡವರನ್ನು ನೋಡಿ ಮಕ್ಕಳು ಸಾಕಷ್ಟನ್ನು ಕಲಿಯುತ್ತವೆ. ಅಪ್ಪ-ಅಮ್ಮ ಏನೇನು ಮಾಡುತ್ತಾರೋ ಅದನ್ನೆಲ್ಲ ಅನುಕರಣೆ ಮಾಡುತ್ತವೆ. ಇಲ್ಲೊಂದು ಮಗು ತನ್ನ ತಾಯಿಯ ಜೊತೆ ತಾನೂ ವರ್ಕ್ಔಟ್ (Workout) ಮಾಡುವ ವಿಡಿಯೋ ಭಾರೀ ವೈರಲ್ ಆಗಿದೆ. ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಯಾವಾಗಲೂ ಕುತೂಹಲ ತೋರಿಸುತ್ತಾರೆ. ಮಕ್ಕಳು ತಮ್ಮ ಹೆತ್ತವರನ್ನು ನೋಡುತ್ತಾರೆ ಮತ್ತು ಅವರನ್ನೇ ಅನುಸರಿಸುತ್ತಾರೆ. ಅದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಈ ವಿಡಿಯೋದಲ್ಲಿ, 5 ತಿಂಗಳ ಪುಟ್ಟ ಮಗು ತನ್ನ ತಾಯಿಯೊಂದಿಗೆ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ನಗಿಸುತ್ತದೆ. ತಾಯಿ ಹಾಗೂ 5 ತಿಂಗಳ ಮಗು ಜೋಡಿಯಾಗಿ ವರ್ಕ್ಔಟ್ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ವ್ಯಾಯಾಮ ಮಾಡುತ್ತಿರುವ ತಾಯಿ ಆಸ್ಟಿನ್ ಎಂಬ ತನ್ನ 5 ತಿಂಗಳ ಪುಟ್ಟ ಮಗುವಿಗೆ ಅದೇ ರೀತಿ ಮಾಡಲು ಸೂಚಿಸುತ್ತಾಳೆ. ನಂತರ ಮಗು ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿಕೊಂಡು ಕಷ್ಟಪಟ್ಟು ಅಮ್ಮ ಮಾಡಿದ ಹಾಗೆ ಮಾಡುತ್ತದೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ನನ್ನ 5 ತಿಂಗಳ ಮಗು ಕೆಲವು ಹೊಸ ವಿಷಯಗಳನ್ನು ಕಲಿಯುತ್ತಿದೆ. ಆಕೆ ಕೂಡ ತಾಯಿಯಂತೆ ಬಲಶಾಲಿಯಾಗಿದ್ದಾಳೆ. ನಮ್ಮ ಮಗುವನ್ನು ನೋಡಿ ನಾನು ನಿಜವಾಗಿಯೂ ತುಂಬಾ ಹೆಮ್ಮೆಪಡುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆಯಲಾಗಿದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ