Viral Video : ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡಿಗೆ ಧ್ವನಿಯಾದ 8 ವರ್ಷದ ಬಾಲಕಿ!

Viral Video : ಬಾಲಕಿಯೊಬ್ಬಳು ಇದೀಗ ತನ್ನ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.   IPS ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು  ಹಂಚಿಕೊಂಡಿದ್ದಾರೆ.

Viral Video : ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡಿಗೆ ಧ್ವನಿಯಾದ 8 ವರ್ಷದ ಬಾಲಕಿ!
ಬಾಲಕಿ ಹಾಡಿದ ಹಾಡು ಸೂಪರ್ ಹಿಟ್
Edited By:

Updated on: Apr 02, 2022 | 4:33 PM

ಸಾಮಾಜಿಕ ಜಾಲತಾನ ಎನ್ನುವುದು ಎಷ್ಟೊಂದು ಪ್ರಭಾವಿತ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ, ಇಡೀ ದೇಶದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೌದು  ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ನೆನಪಿದೆಯೇ? ಛತ್ತೀಸ್‌ಗಢವು ಸಹದೇವ್ ಅವರಂತಹ ಪ್ರತಿಭಾವಂತ ಸ್ಫೂರ್ತಿಯು ಈ  8 ವರ್ಷದ ಬಾಲಕಿಯ ಮೇಲೆ ಪ್ರಭಾವವನ್ನು ಬೀರಿದೆ ಎಂದು ಅನ್ನಿಸುತ್ತದೆ. ಹೌದು  ಬಾಲಕಿಯೊಬ್ಬಳು ಇದೀಗ ತನ್ನ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.   IPS ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು  ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ  ಮುರಿ ಮುರಾಮಿ ಎಂಬ ಪುಟ್ಟ ಹುಡುಗಿಯು ಹಿಂದೆ ಸಿನಿಮಾದ ಸೂಪರ್ ಹಿಟ್ ಹಾಡನ್ನು ಹಾಡಿದ್ದಾಳೆ.   ಈಕೆ ಸಲ್ಮಾನ್ ಖಾನ್-ರಾಣಿ ಮುಖರ್ಜಿ ಅಭಿನಯದ ಚಲನಚಿತ್ರದ ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಹಾಡಿದ್ದಾರೆ.

ಮೂಲತಃ ಟ್ರೈಬಲ್ ಆರ್ಮಿ ಹೆಸರಿನ ಟ್ವಿಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ, ಮುರಿ ದಂತೇವಾಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈ ವಿಡಿಯೋ   67,700 ವೀಕ್ಷಣೆಗಳು ಮತ್ತು  ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನಪ್ರಿಯ ಹಾಡಿನ ಮುರಿಯ ಸುಂದರ ನಿರೂಪಣೆಯನ್ನು ಜನರು ಇಷ್ಟಪಟ್ಟಿದ್ದಾರೆ. ಈಕೆಯ ಪ್ರತಿಭೆ ಮುಂದೊಂದು ದಿನ ಆಕೆಯನ್ನು ದೊಡ್ಡ ತಾರೆಯನ್ನಾಗಿ ಮಾಡುತ್ತದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಅಲ್ಕಾ ಯಾಗ್ನಿಕ್ ಮತ್ತು ಕುಮಾರ್ ಸಾನು ಹಾಡಿದ್ದಾರೆ. ಹಿಮೇಶ್ ರೇಶಮಿಯಾ ಅವರು ಸಂಯೋಜಿಸಿ ನಿರ್ದೇಶಿಸಿದ ಈ ಹಾಡು 90 ರ ದಶಕದಿಂದಲೂ ಸೂಪರ್‌ಹಿಟ್ ಆಗಿ ಮುಂದುವರೆದಿದೆ.