
ಎರಡು ಹುಲಿಗಳ ನಡುವಿನ ಭೀಕರ ಕಾದಾಟದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಕಾದಾಟದ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಿಂಹ ಅಥವಾ ಹುಲಿ ಆಕಸ್ಮಿಕವಾಗಿ ಮತ್ತೊಂದು ಸಿಂಹ ಅಥವಾ ಹುಲಿಯ ಪ್ರದೇಶವನ್ನು ಪ್ರವೇಶಿಸಿದರೆ, ಆಗ ಅವುಗಳ ನಡುವೆ ಕಾದಾಟ ಶುರುವಾಗುತ್ತದೆ. ಪ್ರಸ್ತುತ, ಅಂತಹದ್ದೇ ಒಂದು ವೀಡಿಯೊ ಇಲ್ಲಿದೆ ನೋಡಿ.
ವೈರಲ್ ಆಗುತ್ತಿರುವ ಈ ಭೀಕರ ಕಾದಾಟದ ವೀಡಿಯೊವನ್ನು @crazyclipsonly ಹೆಸರಿನ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಕ್ಯಾಮೆಮ್ಯಾನ್ಗೂ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ’ ಎಂದು ಶೀರ್ಷಿಕೆ ಬರೆಯಲಾಗಿದೆ. ಕೇವಲ 20 ಸೆಕೆಂಡ್ಗಳ ಈ ವೀಡಿಯೋವನ್ನು ಇದುವರೆಗೆ 20 ಮಿಲಿಯನ್ ಅಂದರೆ 2 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 90 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಈ ವೆಬ್ ಸೈಟ್ಗೆ ಭೇಟಿ ನೀಡಿ, ವಾರಕೊಮ್ಮೆ ಅತ್ತು ಬಿಡಿ, ಆರೋಗ್ಯಕ್ಕೂ ಒಳ್ಳೆಯದಂತೆ!
ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನೆಟ್ಟಿಗರು, ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘ಅಬ್ಬಾ, ಕ್ಯಾಮೆರಾದಲ್ಲಿ ಅದ್ಭುತವಾದ ಮತ್ತು ನಂಬಲಾಗದ ಕ್ಷಣವನ್ನು ಸೆರೆಹಿಡಿದಿದ್ದಾರೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ