Viral Video: ಈ ತರ ವಿಮಾನ ಲ್ಯಾಂಡಿಂಗ್ ನೀವು ಎಂದೂ ನೋಡಿರಲ್ಲಾ; ವಿಡಿಯೋ ವೈರಲ್
ಈ ವೀಡಿಯೊದಲ್ಲಿ ವಿಮಾನವು ಜನರ ಕೈಗೆ ಎಟಕುವಂತೆ ಹಾರಾಡುವುದು ಕಾಣಬಹುದು. ಅಷ್ಟು ಹತ್ತಿರದಿಂದ ಇಳಿಯುವುದನ್ನು ನೋಡುವುದೇ ಒಂದು ಅದ್ಭುತ.ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಂಡ ಎರಡನೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಫ್ಲೈಟ್ ಲ್ಯಾಂಡಿಂಗ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ವೀಡಿಯೊದಲ್ಲಿ ವಿಮಾನವು ಜನರ ಕೈಗೆ ಎಟಕುವ ಎತ್ತರದಲ್ಲಿ ಬಂದು ಲ್ಯಾಂಡಿಂಗ್ ಆಗಿರುವುದನ್ನು ಕಾಣಬಹುದು. ಅಷ್ಟು ಹತ್ತಿರದಿಂದ ಇಳಿಯುವುದನ್ನು ನೋಡುವುದೇ ಒಂದು ಅದ್ಭುತ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಂಡ ಎರಡನೇ ದಿನದಲ್ಲಿ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಈ ಅಚ್ಚರಿಯ ವೀಡಿಯೊವನ್ನು @ThebestFigen ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜನವರಿ 28ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಕೇವಲ ಎರಡು ದಿನಗಳಲ್ಲಿ 18 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 92 ಸಾವಿರಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
A wow landing.pic.twitter.com/DtvbhjTjGT
— The Best (@ThebestFigen) January 28, 2024
ಇದನ್ನೂ ಓದಿ: ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷ; ವಿಡಿಯೋ ಇಲ್ಲಿದೆ
ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನಂತರ, ಜನರು ವಿವಿಧ ರೀತಿಯ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ. ‘ಈ ದೃಶ್ಯವು ಸೇಂಟ್ ಮಾರ್ಟನ್‌ನ ಮಹೋ ಬೀಚ್‌ನಿಂದ ಬಂದಿದೆ’ ಎಂದು ನೆಟ್ಟಿಗರೊಬ್ಬರು ಹೇಳುತ್ತಿದ್ದರೆ, ‘ಈ ವಿಡಿಯೋ ನಕಲಿ’ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿಮಾನದ ಈ ಲ್ಯಾಂಡಿಂಗ್ ನಿಜವ್ ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Tue, 30 January 24