Viral Video: ತನ್ನ ಮರಿಗೆ Z+ ಸೆಕ್ಯೂರಿಟಿ ನೀಡಿದ ಮುಳ್ಳು ಹಂದಿ, ಚಿರತೆ ದಾಳಿಯ ರಣರೋಚಕ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ವನ್ಯ ಜೀವಿಗಳ ಕುರಿತ ಇಂಟೆರೆಸ್ಟಿಂಗ್ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ತಮ್ಮ ಮರಿಗಳನ್ನು ಬೇಟೆಯಾಡಲು ಬಂದಂತಹ ಚಿರತೆಯ ಮೇಲೆ ಪ್ರತಿದಾಳಿ ಮಾಡುವ ಮೂಲಕ ಮುಳ್ಳು ಹಂದಿಗಳೆರಡು, ಚಿರತೆಯ ಸೊಕ್ಕಡಗಿಸಿವೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಪ್ರತಿಯೊಂದು ಮಗುವಿನ ಜೀವನದಲ್ಲೂ ಪೋಷಕರು ಪ್ರಧಾನ ಪಾತ್ರ ವಹಿಸುತ್ತಾರೆ. ಅವರಿಗೆ ಉತ್ತಮ ಜೀವನ ಪಾಠವನ್ನು ಕಲಿಸುವುದರಿಂದ ಹಿಡಿದು, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಕೂಡಾ ಅವುಗಳ ಮರಿಗಳನ್ನು ಲಾಪನೆ ಪಾಲನೆ ಮಾಡುತ್ತಾ ಬಹಳ ಜೋಪಾನವಾಗಿ ನೋಡಿಕೊಳ್ಳುತ್ತವೆ. ಎಂತಹ ಕಷ್ಟದ ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅವುಗಳ ಮರಿಗಳನ್ನು ರಕ್ಷಣೆ ಮಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಹಲವಾರು ಹೃದಯಸ್ಪರ್ಶಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಮುಳ್ಳು ಹಂದಿಗಳೆರಡು ತಮ್ಮ ಮರಿಗಳನ್ನು ರಕ್ಷಿಸಲು ಬೇಟೆಗಾರ ಪ್ರಾಣಿ ಚಿರತೆಯ ಜೊತೆಗೆ ಧೈರ್ಯದಿಂದ ಸೆಣಸಾಡಿವೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುಳ್ಳು ಹಂದಿಗಳೆರಡು ಅವುಗಳ ಮರಿಗಳ ಮೇಲೆ ದಾಳಿ ಮಾಡಲು ಬಂದಂತಹ ಚಿರತೆಯ ಬೆವರಿಳಿಸಿವೆ. ಈ ವಿಡಿಯೋವನ್ನು Science girl ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮುಳ್ಳು ಹಂದಿಗಳು ಅವುಗಳ ಮರಿಗಳನ್ನು ಚಿರತೆಯ ದಾಳಿಯಿಂದ ರಕ್ಷಿಸುವ ಪರಿ ನೋಡಿ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ:
Porcupine parents protect babies from leopard pic.twitter.com/nEqqUlj7sc
— Science girl (@gunsnrosesgirl3) January 28, 2024
ವೈರಲ್ ವಿಡಿಯೋದಲ್ಲಿ ಮುಳ್ಳು ಹಂದಿಗಳು ಕುಟುಂಬ ಸಮೇತವಾಗಿ ಕಾಡಿನ ಮಧ್ಯೆಯಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತವೆ. ಇದನ್ನು ಕಂಡಂತಹ ಚಿರತೆ ಹೇಗಾದ್ರೂ ಮಾಡಿ ಈ ಮುಳ್ಳು ಹಂದಿಯ ಮರಿಗಳನ್ನು ಬೇಟೆಯಾಡ್ಬೇಕಲ್ವಾ ಎನ್ನುತ್ತಾ, ಅವುಗಳ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಚಿರತೆಯು ದಾಳಿ ಮಾಡಲು ಬರುತ್ತಿದ್ದಂತೆ, ಈ ಮುಳ್ಳು ಹಂದಿಗಳೆರಡೂ ಅವುಗಳ ಮರಿಗಳು ಚಿರತೆಯ ಕೈಗೆ ಸಿಗದಂತೆ ರಕ್ಷಿಸಿಕೊಳ್ಳುತ್ತವೆ. ಹೀಗಿದ್ರೂ ಕೂಡಾ ತನ್ನ ಹಟವನ್ನು ಬಿಡದ ಚಿರತೆ ಮತ್ತೆ ಮತ್ತೆ ಮುಳ್ಳು ಹಂದಿಯ ಮರಿಗಳ ದಾಳಿ ಮಾಡಲು ಮುಂದಾಗುತ್ತದೆ. ಈತನನ್ನು ಹೀಗೆ ಬಿಟ್ಟರೆ ನಮ್ಮ ಮಕ್ಕಳನ್ನು ನುಂಗಿ ನೀರು ಕುಡಿದು ಬಿಡುತ್ತಾನೆ ಅಂತ ಭಾವಿಸಿದ ಮುಳ್ಳು ಹಂದಿಗಳೆರಡು ಜೊತೆಯಾಗಿ ಚಿರತೆಯ ಮೇಲೆ ಪ್ರತಿದಾಳಿ ಮಾಡುತ್ತವೆ. ಇವುಗಳ ಭಯಾನಕ ದಾಳಿಗೆ ಹೆದರಿದ ಚಿರತೆ ಹಿಂದೆ ಹಿಂದೆ ಹೆಜ್ಜೆಗಳನ್ನಿಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರಕ್ಕೆ 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆ ನೀಡಿದ ಭಕ್ತ ವೃಂದ
ಜನವರಿ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸಂಕಷ್ಟದಿಂದ ಪಾರು ಮಾಡಲು ಯಾವ ತ್ಯಾಗಕ್ಕೂ ಬೇಕಾದರೂ ಸಿದ್ಧರಿರುತ್ತಾರೆʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮುಳ್ಳು ಹಂದಿಗಳ ರಕ್ಷಣಾ ಕಾರ್ಯವಿಧಾನವು ಸಾಮಾನ್ಯವಾಗಿ ತುಂಬಾ ಮಾರಕವಾಗಿರುತ್ತದೆʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತ ದೃಶ್ಯʼ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Tue, 30 January 24