Viral Video: ಅಯೋಧ್ಯೆಯ ರಾಮ ಮಂದಿರಕ್ಕೆ 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆ ನೀಡಿದ ಭಕ್ತ ವೃಂದ  

ಅಯೋಧ್ಯೆಯ ರಾಮ ಮಂದಿರದಲ್ಲಿ  ಜನವರಿ 22 ರಂದು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಬಹಳ ವಿಜೃಂಭನೆಯಿಂದ ನಡೆದಿದ್ದು, ಬಾಲ ರಾಮನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿವೆ. ಅಷ್ಟೇ ಅಲ್ಲದೇ ರಾಮ ಮಂದಿರಕ್ಕೆ ದೇಶದ ವಿದೇಶಗಳಿಂದ   ಹಲವಾರು ಉಡುಗೊರೆ, ದೇಣಿಗೆಗಳು ಹರಿದು ಬಂದಿವೆ. ಇದೀಗ ಅಖಿಲ ಭಾರತೀಯ ಮಾಂಗ್ ಸಮಾಜವು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿಯ ಪೊರಕೆಯನ್ನು ಉಡುಗೊರೆಯಾಗಿ ನೀಡಿದೆ. 

Viral Video: ಅಯೋಧ್ಯೆಯ ರಾಮ ಮಂದಿರಕ್ಕೆ 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆ ನೀಡಿದ ಭಕ್ತ ವೃಂದ  
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 29, 2024 | 6:57 PM

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ. ಕೋಟ್ಯಾಂತರ ಹಿಂದೂಗಳ ಭವ್ಯ ರಾಮ ಮಂದಿರದ ಕನಸು ಸಾಕಾರಕೊಂಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿನಿಂದಲೂ ಭಕ್ತರು ಹಲವಾರು ರೂಪದಲ್ಲಿ ರಾಮ ಮಂದಿರಕ್ಕೆ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ದೇಶ ವಿದೇಶಗಳಿಂದ ರಾಮ ಮಂದಿರಕ್ಕೆ ಉಡುಗೊರೆಗಳ ಮಹಾಪೂರವೇ ಹರಿದು ಬಂದಿವೆ. ಬೃಹತ್ ಬೀಗದ ಕೈ, ಪಂಚಧಾತುವಿನಿಂದ ತಯಾರಿಸಿದ ಬೃಹತ್ ದೀಪ, ಬೃಹತ್ ಘಂಟೆ, ವಜ್ರದ ಕಂಠಾಭರಣ, ಚಿನ್ನ ಲೇಪಿತ ಬ್ಯಾಂಡ್, 108 ಅಡಿ ಉದ್ದದ ಅಗರಬತ್ತಿ, ಪಾದುಕೆ, ಬೆಳ್ಳಿ ಇಟ್ಟಿಗೆ  ಸೇರಿದಂತೆ ಹಲವಾರು ಉಡುಗೊರೆಗಳು ಹರಿದು ಬಂದಿವೆ.  ಇದೀಗ ಅಖಿಲ ಭಾರತೀಯ ಮಾಂಗ್ ಸಮಾಜವು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿಯ ಪೊರಕೆಯನ್ನು ಉಡುಗೊರೆಯಾಗಿ ನೀಡಿದೆ.

ಹೌದು ಅಖಿಲ ಭಾರತೀಯ ಮಾಂಗ್ ಸಮಾಜವು ಬಾಲ ರಾಮನ ಗರ್ಭಗುಡಿಯನ್ನು ಸ್ವಚ್ಛಗೊಳಿಸಲೆಂದು 1.751 ಕೆಜಿ ತೂಕದ ಬೆಳ್ಳಿಯ ಪೊರಕೆಯನ್ನು ಉಡುಗೊರೆಯಾಗಿ  ನೀಡಿದೆ. ಈ ಬೆಳ್ಳಿ ಪೊರಕೆಯನ್ನು 11 ದಿನಗಳಲ್ಲಿ ತಯಾರಿಸಲಾಗಿದ್ದು, ಪೊರಕೆಯ ಮೇಲ್ಭಾಗದಲ್ಲಿ ಲಕ್ಷ್ಮೀ ದೇವಿಯ ಚಿತ್ರವನ್ನು ಸಹ ಕೆತ್ತಲಾಗಿದೆ. ಹಾಗೂ ಈ ಬೆಳ್ಳಿ ಪೊರಕೆಯು 108 ಕಡ್ಡಿಗಳನ್ನು ಸಹ ಹೊಂದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ:

ಅಖಿಲ ಭಾರತ ಮಾಂಗ್ ಸಮಾಜದ ಸದಸ್ಯ ಮಧುಕರ್ ರಾವ್ ಮಾಧ್ಯಮಗಳೊಂದಿಗೆ ಮಾತನಾಡಿ, ವಿಶ್ವದ ಮೊದಲ ಬೆಳ್ಳಿ ಪೊರಕೆಯನ್ನು ಶ್ರೀರಾಮನಿಗೆ ಅರ್ಪಿಸಿದ್ದೇವೆ. ಜನವರಿ 22 ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಇಡೀ ದೇಶದಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. ದೀಪಾವಳಿಯ ದಿನದಂದು ಲಕ್ಷ್ಮೀ ದೇವಿಯ ರೂಪದಲ್ಲಿ ಪೊರಕೆಯನ್ನು ಪೂಜಿಸಲಾಗುತ್ತದೆ, ಅದಕ್ಕಾಗಿಯೇ ಅಖಿಲ ಭಾರತ ಮಾಂಗ್ ಸಮಾಜವು  ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿಯ ಪೊರಕೆಯನ್ನು ಊಡುಗೊರೆಯಾಗಿ ನೀಡಿದೆʼ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಜ್ಜಿಯೊಂದಿಗೆ ಕನ್ನಡ ಮಾತನಾಡಿದ ಗಗನ ಸಖಿ, ವಿಮಾನಯಾನ ಸೂಪರ್​​ ಎಂದ ಅಜ್ಜಿ 

ಈ ವಿಡಿಯೋವನ್ನು ಸುದ್ದಿ ಸಂಸ್ಥೆ ANI ತನ್ನ  X ಖಾತೆಯಲ್ಲಿ ಹಂಚಿಕೊಂಡಿದ್ದು, “ಅಖಿಲ ಭಾರತ ಮಾಂಗ್ ಸಮಾಜದ ರಾಮ ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿ ಪೊರಕೆಯನ್ನು ಕೊಡುಗೆಯಾಗಿ ನೀಡಿದ್ದು, ಅದನ್ನು ಗರ್ಭಗುಡಿಯನ್ನು ಸ್ವಚ್ಛಗೊಳಿಸಲು ಮಾತ್ರ ಬಳಸಬೇಕೆಂದು ಅವರು ವಿನಂತಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿಯ ಪೊರಕೆಯನ್ನು  ಭಕ್ತರು ಅದ್ಧೂರಿ ಮೆರವಣಿಗೆಯ ಮೂಲಕ ರಾಮ ಮಂದಿರಕ್ಕೆ ಕೊಂಡೊಯ್ಯುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ