ಮೂಕಪ್ರಾಣಿಗಳ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಮಾತು ಬಾರದ ಪ್ರಾಣಿಗಳು ಮನುಷ್ಯನ ಮೇಲೆ ವಿಶೇಷವಾದ ಪ್ರೀತಿಯನ್ನು ತೋರಿಸುತ್ತದೆ. ಕೆಲವೊಮ್ಮೆ ಈ ಮೂಕ ಪ್ರಾಣಿಗಳ ಮೇಲೆ ಕೂಡ ತಮ್ಮ ಕೋಪವನ್ನು ತೋರಿಸುತ್ತೇವೆ. ಕೆಲವೊಮ್ಮೆ ಕೋಪದಲ್ಲಿ ಬೈಯುವುದಿದೆ, ಹೊಡೆಯುವುದಿದೆ. ಅದೇನೇ ಆದರೂ ಈ ಮುಗ್ಧ ಜೀವಿಗಳು ಮಾತ್ರ ಮನೆಯವರನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ.
ಮನೆಯಲ್ಲಿರುವ ಮಕ್ಕಳ ಜೊತೆಗೆ ಈ ಮೂಕ ಜೀವಿಗಳು ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತವೆ. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಈ ಸಾಕು ಪ್ರಾಣಿಗಳ ಜೊತೆಗೆ ಕಳೆಯುವುದಿದೆ. ಮೂಕ ಪ್ರಾಣಿಗಳ ಜೊತೆಗಿರುವ ಮಕ್ಕಳ ತುಂಟಾಟದ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯದಲ್ಲಿ ಅಂಬೆಗಾಲಿಡುತ್ತಿರುವ ಮಗುವೊಂದು ಹಸುವಿನೊಂದಿಗೆ ಸಂಭಾಷಣೆ ನಡೆಸಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಂಬೆಗಾಲುಡುತ್ತಿರುವ ಪುಟ್ಟ ಮಗುವೊಂದು ಹಸುವಿನ ಜೊತೆಗೆ ಆಟ ಆಡುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಹಸುವಿನ ಪಕ್ಕದಲ್ಲಿ ಕುಳಿತುಕೊಂಡಿದೆ. ಮೂಕ ಪ್ರಾಣಿಯು ಹಸುವು ತನ್ನ ಪ್ರೀತಿಯನ್ನು ಮಗುವನ್ನು ಮುದ್ದಿಸುವ ಮೂಲಕ ತೋರಿಸುತ್ತಿದೆ. ಹಸುವು ಮಗುವನ್ನು ಮುದ್ದಾಡುತ್ತಿದ್ದಂತೆ ಮಗು ಸ್ವಚಂದ ಮನಸ್ಸಿನಿಂದ ಜೋರಾಗಿಯೇ ನಗುತ್ತಿದೆ. ಈ ಎರಡು ಮುಗ್ಧ ಮನಸ್ಸುಗಳ ಮುದ್ದಾದ ಸಂಭಾಷಣೆಯ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. @gopalak_jay ಎನ್ನುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೂಕ ಪ್ರಾಣಿ ಹಸು ಹಾಗೂ ಅಂಬೆಗಾಲಿಡುವ ನಡುವಿನ ಮುಗ್ಧ ಪ್ರೀತಿಯ ಸಂಭಾಷಣೆಯು ನೆಟ್ಟಿಗರ ಹೃದಯವನ್ನು ಗೆದ್ದಿದೆ.
ಇದನ್ನೂ ಓದಿ: ಬ್ಯಾಂಕ್ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ
ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ, 294,000 ಲೈಕ್‌ಗಳನ್ನು ಬಂದಿದ್ದು, ನೆಟ್ಟಿಗರು ಮೆಚ್ಚಿಕೊಂಡು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು “ಇದು ತುಂಬಾ ಮೂಡ್ ಲಿಫ್ಟಿಂಗ್ ಆಗಿದೆ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, “OMG, ಇದು ತುಂಬಾ ಮುದ್ದಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ತುಂಬಾ ಮುದ್ದಾಗಿದೆ! ಸುಂದರ ಸಂಬಂಧ.” ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Sat, 3 February 24