Viral Video: ಚಿರತೆಯನ್ನು ಪಂಜರದಲ್ಲಿ ಕಾಡಿಗೆ ತಂದು ಬಿಡುವ ಅದ್ಭುತ ವೀಡಿಯೊ ಹಂಚಿಕೊಂಡ ಅರಣ್ಯಾಧಿಕಾರಿ

|

Updated on: May 16, 2023 | 12:31 PM

ನಾಡಿನಲ್ಲಿ ಸುತ್ತಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದನ್ನು ತೋರಿಸುವ ಹೃದಯಸ್ಪರ್ಶಿ ವೀಡಿಯೊವನ್ನು ಅರಣ್ಯಾಧಿಕಾರಿ ಹಂಚಿಕೊಂಡಿದ್ದಾರೆ.

Viral Video: ಚಿರತೆಯನ್ನು ಪಂಜರದಲ್ಲಿ ಕಾಡಿಗೆ ತಂದು ಬಿಡುವ ಅದ್ಭುತ ವೀಡಿಯೊ ಹಂಚಿಕೊಂಡ ಅರಣ್ಯಾಧಿಕಾರಿ
ವೈರಲ್​​ ವೀಡಿಯೊ
Follow us on

ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಆವಾಸಸ್ಥಾನಗಳಿಗೆ ಕಳಿಸುವ ಅನೇಕ ವೀಡಿಯೊಗಳನ್ನು ನೀವು ನೋಡಿರಬಹುದು, ಇಂತಹದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​​ ಆಗಿದೆ. ಅದೆಷ್ಟು ಭಯಾನಕ ಮತ್ತು ಒಂದು ಬಾರಿ ಪಂಚರದಿಂದ ಹೊರಗೆ ಬಂದಾಗ ಅವುಗಳಿಗೆ ಆಗುವ ಖುಷಿಯನ್ನು ಈ ವೀಡಿಯೊದಲ್ಲಿ ನೋಡಬಹುದು. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಅನೇಕ ಇಂತಹ ವೀಡಿಯೊಗಳನ್ನು ಬಹಳಷ್ಟು ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಕೂಡ ಅವರೇ ಹಂಚಿಕೊಂಡಿದ್ದಾರೆ. ನಾಡಿನಲ್ಲಿ ಸುತ್ತಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದನ್ನು ತೋರಿಸುವ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕಸ್ವಾನ್ ಅವರು ಈ ವೀಡಿಯೊ ಜತೆಗೆ ಶೀರ್ಷಿಕೆಯೊಂದನ್ನು ಹಂಚಿಕೊಂಡಿದ್ದಾರೆ, “ಆ ಚಿರತೆ ಸ್ವಲ್ಪ ಆತುರದಲ್ಲಿದೆ. ಯಶಸ್ವಿಯಾಗಿ ರಕ್ಷಿಸಲಾಗಿದೆ ಮತ್ತು ಕಾಡಿಗೆ ಬೀಡಲಾಗಿದೆ. ಯಾವುದೇ ಅಪಾಯವಿಲ್ಲದೆ ನಿನ್ನೆ ರಾತ್ರಿ ನಮ್ಮ ತಂಡ ಈ ಕಾರ್ಯವನ್ನು ಮಾಡಿದೆ” ಎಂದು ಹೇಳಿದ್ದಾರೆ.

19 ಸೆಕೆಂಡುಗಳ ಈ ವೀಡಿಯೊ ಕ್ಲಿಪ್‌ನಲ್ಲಿ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿದ ನಂತರ ರಾತ್ರಿಯಲ್ಲಿ ಅರಣ್ಯಕ್ಕೆ ಬಿಡುವುದನ್ನು ತೋರಿಸಲಾಗಿದೆ. ಪ್ರಾಣಿಗಳು ಉದ್ದೇಶಿತವಾಗಿ ನಾಡಿನತ್ತ ಬರಲ್ಲ, ಆಹಾರ ಅಥವಾ ದಾರಿ ತಪ್ಪಿದಾಗ ನಾಡಿನತ್ತ ಬರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಣ್ಣ ಪಿಕಪ್ ಟ್ರಕ್‌ನ ಹಿಂಭಾಗದ ಪಂಜರದಲ್ಲಿ ಈ ಚಿರತೆಯನ್ನು ಇರಿಸಲಾಗಿತ್ತು. ಅಧಿಕಾರಿಗಳು ಚಿರತೆಯನ್ನು ಪಂಜರದಿಂದ ಮುಕ್ತಗೊಳಿಸಿದ ತಕ್ಷಣ, ಚಿರತೆ ಲಾರಿಯಿಂದ ಜಿಗಿದು ಕಾಡಿನತ್ತ ಓಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿ:Viral Video: ಪ್ಯಾರಾಗ್ಲೈಡಿಂಗ್ ವೇಳೆ ಹಿಂದಿ ಹಾಡು ಹಾಡಿದ ಯುವಕರು, ಬೇಷ್ ಎಂದ ನೆಟ್ಟಿಗರು

ಈ ವೀಡಿಯೊಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಟ್ವಿಟರ್​​ ಬಳಕೆದಾರರೂ ಹಾರ್ಟ್​​ ​​ಎಮೋಟಿಕಾನ್​​​ ಕಮೆಂಟ್​​ ಮಾಡಿದ್ದಾರೆ. ಪ್ರಾಣಿಗಳು ಬಂಧನದಿಂದ ಮುಕ್ತವಾಗುವ ಎಷ್ಟು ಸಂತೋಷಪಡುತ್ತದೆ ನೋಡಿ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೂ ಅನೇಕರು ಅರಣ್ಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಒಳ್ಳೆಯದು. ಕಾಡು ಪ್ರಾಣಿಯನ್ನು ಮರಳಿ ಕಾಡಿನಲ್ಲಿ ಯಶಸ್ವಿಯಾಗಿ ಬಿಡುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲ. ತಂಡಕ್ಕೆ ಅಭಿನಂದನೆಗಳು ಒಬ್ಬ ಟ್ವಿಟರ್​​ ಬಳಕೆದಾರ ಹೇಳಿದ್ದಾರೆ. ಅರಣ್ಯ ಇಲಾಖೆಗೆ ಅಪಾರ ಗೌರವ ನೀಡಬೇಕು. ಅವರು ಪ್ರಕೃತಿಯ ನಿಜವಾದ ಹೀರೋಗಳು ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:14 pm, Tue, 16 May 23