Viral Video: ಕತ್ತೆಯ ಮೇಲೆ ಮನಬಂದಂತೆ ಹಲ್ಲೆ ಮಾಡುವ ಇವನು ಕೂಡಲೇ ತನ್ನ ಕರ್ಮದ ಪ್ರತಿಫಲ ಉಣ್ಣುತ್ತಾನೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 01, 2022 | 4:34 PM

ಆದರೆ ಒಮ್ಮೆ ಅವನು ಹೊಡೆಯುವುದನ್ನು ನಿಲ್ಲಿಸಿ ಸವಾರಿ ಮಾಡಲು ಅದರ ಮೇಲೆ ಹತ್ತಿ ಕುಳಿತಾಗ ಕತ್ತೆ ತನ್ನ ಮುಯ್ಯಿ ತೀರಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಿಡಿಯೋದ ಈ ಎರಡನೇ ಭಾಗ ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Viral Video: ಕತ್ತೆಯ ಮೇಲೆ ಮನಬಂದಂತೆ ಹಲ್ಲೆ ಮಾಡುವ ಇವನು ಕೂಡಲೇ ತನ್ನ ಕರ್ಮದ ಪ್ರತಿಫಲ ಉಣ್ಣುತ್ತಾನೆ!
ಏಟು ತಿನ್ನುತ್ತಿರುವ ಕತ್ತೆ
Follow us on

ಮಾಡಿದ್ದುಣ್ಣೋ ಮಾರಾಯ, ಏನನ್ನು ಬಿತ್ತುತ್ತೇವೆಯೋ ಅದನ್ನೇ ಕೊಯ್ಯುಬೇಕು, ಮುಯ್ಯಿಗೆ ಮುಯ್ಯಿ ಮೊದಲಾದ ನುಡಿಗಟ್ಟುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಈ ವಿಡಿಯೋ ನೋಡಿದ ಬಳಿಕ ಇಲ್ಲಿ ಹೇಳಿರುವ ಎಲ್ಲ ಮೂರು ಮಾತುಗಳು ಸಾಕಾರಗೊಂಡಿರುವಂತೆ ನಿಮಗೆ ಭಾಸವಾಗುವುದು ನಿಶ್ಚಿತ. ವಿಡಿಯೋದ ಮೊದಲಾರ್ಧ (first half) ಮನಸ್ಸಿಗೆ ಕಿರಿಕಿರಿಯುಂಟು ಮಾಡುವುದು ನಿಜವಾದರೂ ದ್ವಿತೀಯಾರ್ಧ (second half) ಅದನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ. ಅಂದಹಾಗೆ, ವಿಡಿಯೋವನ್ನು ಖ್ಯಾತ ಬಾಲಿವುಡ್ ಶಕ್ತಿ ಕಪೂರ್ (Shakti Kapoor) ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಅದಕ್ಕೆ ‘ಜೈಸಿ ಕರ್ನಿ ವೈಸಿ ಭರ್ನಿ’ ಅಂತ ಶೀರ್ಷಿಕೆ ನೀಡಿದ್ದಾರೆ!

ವಿಡಿಯೋ ಶುರುವಾಗುತ್ತಿದ್ದಂತೆ ಒಬ್ಬ ವ್ಯಕ್ತಿ ಕತ್ತೆಯೊಂದಕ್ಕೆ ಮನಬಂದಂತೆ ಹೊಡೆಯುವುದು ಒದೆಯುವುದು ಕಾಣುತ್ತದೆ. ಕತ್ತೆಯ ಸ್ಥಿತಿ ನೋಡಿ ಅಯ್ಯೋ ಅನಿಸದಿರದು. ಕತ್ತೆ ಬಾಯಿ ಮುಚ್ಚಿಕೊಂಡು ಮಾನವನ ಹಲ್ಲೆ ಸಹಿಸಿಕೊಳ್ಳುತ್ತದೆ.

ಆದರೆ ಒಮ್ಮೆ ಅವನು ಹೊಡೆಯುವುದನ್ನು ನಿಲ್ಲಿಸಿ ಸವಾರಿ ಮಾಡಲು ಅದರ ಮೇಲೆ ಹತ್ತಿ ಕುಳಿತಾಗ ಕತ್ತೆ ತನ್ನ ಮುಯ್ಯಿ ತೀರಿಸಿಕೊಳ್ಳಲು ಪ್ರಾರಂಭಿಸುತ್ತದೆ.
ವಿಡಿಯೋದ ಈ ಎರಡನೇ ಭಾಗ ನೋಡಿ ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ವ್ಯಕ್ತಿ ಕತ್ತೆಯ ಮೇಲೆ ಹತ್ತಿದ ಕೂಡಲೇ ತನ್ನ ಕರ್ಮದ ಪ್ರತಿಫಲನ್ನು ಉಣ್ಣಲಾರಂಭಿಸುತ್ತಾನೆ. ಕತ್ತೆ ಅವನನ್ನು ನೆಲಕ್ಕೆ ಕೊಡವಿ ಅವನ ಒಂದು ಕಾಲನ್ನು ಬಾಯಲ್ಲಿ ಕಚ್ಚಿ ಗಿರಿಗಿಟ್ಲೆ ಹಾಗೆ ಗಿರಿಗಿರಿ ಸುತ್ತು ಹಾಕುತ್ತದೆ. ಮೈಯಲ್ಲಿ ಆವೇಶ ಬಂದವರಂತೆ ಕತ್ತೆ ತನ್ನ ಪೀಡಕನ ಕಾಲು ಹಿಡಿದು ಸುತ್ತುವುದು ಸಖತ್ ಮಜವಾಗಿದೆ ಮಾರಾಯ್ರೇ.

ಈ ವಿಡಿಯೋವನನ್ನು ಈಗಾಗಲೇ ಒಂದೂವರೆ ಲಕ್ಷ ಜನ ನೋಡಿದ್ದಾರೆ. ಪ್ರಾಣಿಗೆ ಹಿಂಸೆ ನೀಡಿದ ವ್ಯಕ್ತಿಯನ್ನು ಖಂಡಿಸುತ್ತಿದ್ದಾರೆ ಮತ್ತು ಶಪಿಸುತ್ತಿದ್ದಾರೆ. ಆದರೆ ಎರಡನೇ ಭಾಗ ನೋಡಿದ ಬಳಿಕ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಒಬ್ಬ ನೆಟ್ಟಿಗ ‘ವಿಡಿಯೋದ ದ್ವಿತೀಯಾರ್ಧ ಅದ್ಭುತವಾಗಿದೆ ಮತ್ತು ಮನಸ್ಸಿಗೆ ಸಮಾಧಾನ ನೀಡುತ್ತದೆ,’ ಎಂದಿದ್ದರೆ ಮತ್ತೊಬ್ಬರು, ‘ಚೆನ್ನಾಗಿದೆ, ಅವನು ಅದಕ್ಕೇ ಲಾಯಕ್ಕು!’ ಅಂತ ಪ್ರತಿಕ್ರಿಯಿಸಿದ್ದಾರೆ. ಮೂರನೇಯವರು, ‘ಇವರಿಬ್ಬರಲ್ಲಿ ಕತ್ತೆ ಯಾರು?’ ಅಂತ ಕೇಳಿದ್ದಾರೆ.