Viral Video: ಇದು ಶೂ ಥರಾನೇ, ಆದರೆ ಶೂ ಅಲ್ಲ, ಹಾಗಿದ್ರೆ ಈ ವ್ಯಕ್ತಿ ಧರಿಸಿದ್ದಾದರೂ ಏನು ಗೊತ್ತಾ?

ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ವ್ಯಕ್ತಿಯೊಬ್ಬರು ಶೂಗಳನ್ನು ಖರೀದಿಸುವುದರ ಬದಲು ದೀರ್ಘಾವಧಿಯ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ವೀಕ್ಷಿಸಿ.

Viral Video: ಇದು ಶೂ ಥರಾನೇ, ಆದರೆ ಶೂ ಅಲ್ಲ, ಹಾಗಿದ್ರೆ ಈ ವ್ಯಕ್ತಿ ಧರಿಸಿದ್ದಾದರೂ ಏನು ಗೊತ್ತಾ?
ಶೂ ಟ್ಯಾಟೂ
Edited By:

Updated on: Jun 17, 2022 | 6:56 PM

ಒಂದೆಡೆ ಈ ವ್ಯಕ್ತಿಗೆ ಶೂಗಳ ಮೇಲೆ ಬಲು ಪ್ರೀತಿ, ಇನ್ನೊಂದೆಡೆ ಶೂಗಳ ಬೆಲೆ ಏರಿಕೆ.. ಈಕಡೆ ಶೂಗಳನ್ನು ಖರೀದಿಸದೆ ಇರಲು ಆಗದೆ, ಬೆಲೆ ಏರಿಕೆಯಿಂದಾಗಿ ಖರೀದಿಸಲೂ ಆಗದೆ ಒಂದು ರೀತಿಯಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದ ಎಂದು ಹೇಳಲಾಗುವ ವ್ಯಕ್ತಿ ಕಂಡುಕೊಂಡ ದೀರ್ಘಾವಧಿಯ ಪರಿಹಾರ ನೋಡಿದರೆ ಅಚ್ಚರಿಗೊಳ್ಳುತ್ತೀರಿ. ಹಾಗಿದ್ದರೆ ಶೂಗಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿರುವ ಅಥವಾ ಹುಚ್ಚು ಪ್ರೀತಿ ಇಟ್ಟುಕೊಂಡಿರುವ ಈ ವ್ಯಕ್ತಿ ಯಾರು? ಆತ ಮಾಡಿದ್ದಾರೂ ಏನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿದೆ ನೋಡಿ.

ಇದನ್ನೂ ಓದಿ: Viral Pic: ಇಲಿಯ ಬಳಿ ಇತ್ತು ಬರೋಬ್ಬರಿ 5 ಲಕ್ಷ ಮೌಲ್ಯದ ಚಿನ್ನ! ಇಲಿ ಲಕ್ಷಾಧಿಪತಿಯಾಗಿದ್ದು ಹೇಗೆ? ಇಲಿದೆ ಕುತೂಹಲಕಾರಿ ಸ್ಟೋರಿ

ತನ್ನ ನೆಚ್ಚಿನ ಶೂಗಳ ಮೇಲಿನ ಪ್ರೀತಿಯನ್ನು ಹೊಂದಿರುವ ಇಂಗ್ಲೆಂಡ್​ನ ವ್ಯಕ್ತಿಯೊಬ್ಬರಿಗೆ ಬೆಲೆ ಏರಿಕೆಯ ನಡುವೆ ಪ್ರತಿ ತಿಂಗಳು ಶೂಗಳನ್ನು ಖರೀದಿಸುವುದು ಬೇಸರ ತರಿಸುತ್ತಿತ್ತು. ಇದೇ ಕಾರಣಕ್ಕೆ ದೀರ್ಘಾವಧಿಯ ಪರಿಹಾರ ಕಂಡುಕೊಂಡ ಆ ವ್ಯಕ್ತಿ, ತನ್ನ ನೆಚ್ಚಿನ ಶೂವಿನ ಟ್ಯಾಟೂವನ್ನು ಎರಡೂ ಕಾಲುಗಳ ಪಾದಗಳಿಗೆ ಹಚ್ಚೆ ಹಾಕಿಸಿದ್ದಾರೆ.

ಪ್ರಸಿದ್ಧ ಟ್ಯಾಟೂ ಕಲಾವಿದ ಡೀನ್ ಗುಂಥರ್ ಅವರು ಟ್ಯಾಟೂ ಬಿಡಿಸುವುದನ್ನು ಚಿತ್ರೀಕರಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಳ್ಳುವ ವೇಳೆ “ಅವರು ಪ್ರತಿ ಕೆಲವು ತಿಂಗಳಿಗೊಮ್ಮೆ ಶೂಗಳಿಗೆ ಹಣ ಪಾವತಿಸಲು ಸುಸ್ತಾಗಿದ್ದರು, ಆದ್ದರಿಂದ ಅವರು ತಮ್ಮ ನೆಚ್ಚಿನ ನೈಕ್ ಬೂಟುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಹುಲಿಗಳ ಮಧ್ಯೆ ನಾಯಿ ಜೀವಂತವಾಗಿರಲು ಸಾಧ್ಯವೇ? ಸಾಧ್ಯ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ!

ಕಾಲುಗಳಿಗೆ ಟ್ಯಾಟೂಗಳನ್ನು ಬಿಡಿಸಿ ಮುಗಿಸಲು ಡೀನ್ ಗುಂಥರ್ ಅವರು 8 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಟ್ಯೂಟೂ ಬಿಡಿಸಿದ ಬಗ್ಗೆ ಮಾತನಾಡಿದ ಡೀನ್, “ನನ್ನ ಕೈಯಲ್ಲಿ ಹಚ್ಚೆ ಬಿಡಿಸುವುದು ಅತ್ಯಂತ ಸವಾಲಿನ ಭಾಗವಾಗಿತ್ತು” ಎಂದರು.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Fri, 17 June 22