Viral Video: ಹೆಣ್ಮಕ್ಕಳನ್ನು ಚುಡಾಯಿಸುವ ಹುಡುಗರಿಗೆ ಮುಟ್ಟಿನೋಡಿಕೊಳ್ಳುವಂತೆ ಪಾಠ ಮಾಡಿದ ಶಿಕ್ಷಕಿ

|

Updated on: Mar 30, 2023 | 3:52 PM

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಜಾಗೃತಿಯನ್ನು ಹೆಚ್ಚಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ಲಿಂಗ ಸಮಾನತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಿದ್ದಾರೆ.

Viral Video: ಹೆಣ್ಮಕ್ಕಳನ್ನು ಚುಡಾಯಿಸುವ ಹುಡುಗರಿಗೆ ಮುಟ್ಟಿನೋಡಿಕೊಳ್ಳುವಂತೆ ಪಾಠ ಮಾಡಿದ ಶಿಕ್ಷಕಿ
ಶಿಕ್ಷಕಿ
Follow us on

ರ‍್ಯಾಂಗಿಗ್ ಮಾಡುವ ಹುಡುಗರಿಗೆ ಮುಟ್ಟಿನೋಡಿಕೊಳ್ಳುವಂತೆ ಪಾಠ ಹೇಳಿರುವ ಶಿಕ್ಷಕಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಬಗ್ಗೆ ಎಲ್ಲ ಕಡೆಯಿಂದಲ್ಲೂ ಮೆಚ್ಚುಗೆ ಪಾತ್ರವಾಗಿದೆ. ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ ಮತ್ತು ಸಮಾಜದ ನಿರ್ಣಾಯಕ ಅಂಶವಾಗಿದೆ. ಇದರ ಹೊರತಾಗಿಯೂ, ಲಿಂಗ ತಾರತಮ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ನಿದರ್ಶನಗಳು ಇನ್ನೂ ಇವೆ. ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಜಾಗೃತಿಯನ್ನು ಹೆಚ್ಚಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ಲಿಂಗ ಸಮಾನತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಿದ್ದಾರೆ.

ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಶಿಕ್ಷಕಿಯೊಬ್ಬರು ತಮ್ಮ ತರಗತಿಯ ಎಲ್ಲಾ ಹುಡುಗರಿಗೆ ಮಹಿಳೆಯರನ್ನು ಗೌರವಿಸುವ ಪಾಠವನ್ನು ಕಲಿಸಿದರು. ಈ ವೀಡಿಯೋದಲ್ಲಿ ಶಿಕ್ಷಕಿ ಹೇಳಿರುವ ಪ್ರತಿಯೊಂದು ಮಾತು ಮನಸ್ಸಿಗೆ ಮುಟ್ಟುವಂತಿದೆ. ಅವರು ಪ್ರತಿಯೊಂದು ಮಾತಿಲ್ಲೂ ಒಂದು ಶಕ್ತಿಯಂತು ಇತ್ತು ಎಂದು ಈ ವೀಡಿಯೊವನ್ನು ನೋಡಿದ ಬಳಕೆದಾರರೂ ತಿಳಿಸಿದ್ದಾರೆ. ಕ್ಲಾಸ್​​ ರೂಮ್​​ನಲ್ಲಿ ಶಿಕ್ಷಕಿ ಮಾಡಿದ ಭಾಷಣವನ್ನು ಲೈವ್​ ಮಾಡಲಾಗಿತ್ತು. ನಂತರ ಈ ವಿಡಿಯೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ; Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ಹೆಣ್ಣಿಗೆ ಗೌರವ ನೀಡಿ, ಇಲ್ಲವಾದರೆ ಕರ್ಮ ರಿಟರ್ನ್

ಹೆಣ್ಮಕ್ಕಳ ಜೊತೆಗೆ ನಾವು ಹೇಗೆ ವರ್ತನೆ ಮಾಡಬೇಕು, ನಮ್ಮ ಮನೆಯ ಹೆಣ್ಮಕ್ಕಳಿಗೆ ಹೇಗೆ ಗೌರವ ನೀಡುತ್ತೇವೆ, ಹಾಗೆ ನಮ್ಮ ಸಮಾಜದ ಇತರ ಮಹಿಳೆಗೂ ಗೌರವ ನೀಡಬೇಕು ಎಂದು ಹೇಳಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದೇ, ಇತರ ಹೆಣ್ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವ ಮೊದಲು ನಮ್ಮ ಮನಸ್ಸನ್ನು ಪ್ರಶ್ನೆ ಮಾಡಬೇಕು. ತರಗತಿಗಳಲ್ಲಿ ಅಥವಾ ಹೊರಗಡೆ ಹೆಣ್ಮಕ್ಕಳ ಜೊತೆಗೆ ಇರುವ ವರ್ತನೆ ಹೇಗೆ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ನೀವು ಯಾವ ಹೆಣ್ಣಿಗೆ ತೊಂದರೆ ಮಾಡುತ್ತೀರಾ ಅಥವಾ ಕೆಟ್ಟದಾಗಿ ನಡೆಸಿಕೊಳ್ಳತ್ತೀರಾ, ಅದು ನಿಮ್ಮಗೆ ಮತ್ತೆ ಬರುತ್ತದೆ. ಅಂದರೆ ಬೇರೆ ಹುಡುಗಿಯರಿಗೆ ತೊಂದರೆ ಕೊಟ್ಟರೆ ನಿಮ್ಮ ಮನೆಯ ಹೆಣ್ಮಕ್ಕಳಿಗೆ ಇನ್ನೊಬ್ಬರು ತೊಂದರೆ ನೀಡುತ್ತಾರೆ, ಇದು ಒಂದು ರೀತಿಯಲ್ಲಿ ಕರ್ಮ ರಿಟರ್ನ್ ಎಂಬಂತೆ ಎಂದು ಹೇಳಿದ್ದಾರೆ.

ಈ ವಿಡಿಯೋ 414 ಸಾವಿರ ವೀಕ್ಷಣೆಗಳು, 1,634 ರಿಟ್ವೀಟ್‌, 116 ಕಮೆಂಟ್​​, 6,423 ಲೈಕ್​ ಮತ್ತು 608 ಬುಕ್‌ಮಾರ್ಕ್‌ ಪಡೆದುಕೊಂಡಿದೆ. ಈ ವೀಡಿಯೊಗೆ ಟನ್‌ಗಟ್ಟಲೆ ಪ್ರತಿಕ್ರಿಯೆಗಳು ಬಂದಿವೆ ಮತ್ತು ಇದು ಎಲ್ಲ ಶಿಕ್ಷಕರಿಗೆ ಸ್ಪೂರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:28 pm, Thu, 30 March 23