Viral Video: ಈ ಪುಟ್ಟ ಬಾಲಕನ ಪ್ರಕಾರ ಸಿಎಂ ಯಾರು ಗೊತ್ತಾ? ಇಲ್ಲಿದೆ ನೋಡಿ ವಿಡಿಯೊ

ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಮೀಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾದ ಪುಟ್ಟ ಹುಡುಗನ ತಮಾಷೆಯ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಒಂದು ಮಹಿಳೆ ಪುಟ್ಟ ಬಾಲಕನ ಬಳಿ ಸಿಎಂ ಅಂದ್ರೆ ಯಾರು ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಆ ಹುಡುಗ ಉತ್ತರಿಸಿದ್ದು ಹೀಗೆ

Viral Video: ಈ ಪುಟ್ಟ ಬಾಲಕನ ಪ್ರಕಾರ ಸಿಎಂ ಯಾರು ಗೊತ್ತಾ? ಇಲ್ಲಿದೆ ನೋಡಿ ವಿಡಿಯೊ
ವೈರಲ್ ವಿಡಿಯೊ
Edited By:

Updated on: Mar 08, 2023 | 5:05 PM

ನಮ್ಮ ರಾಜ್ಯದ ಸಿಎಂ ಯಾರು ಎಂದು ಕೇಳಿದಾಗ ಸಿಎಂ ನಮ್ಮಮ್ಮ ಎಂದು ಹೇಳಿ ಬಿಡೋದಾ, ಪುಟ್ಟ ಪೋರನ ತರ್ಲೆ ಮಾತುಕತೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳ ಮುದ್ದು ಪೆದ್ದು ಮಾತುಗಳು, ತರ್ಲೆಗಳು ತಮಾಷೆಯಾಗಿ ಕಾಣುತ್ತವೆ. ಮಕ್ಕಳಿರುವ ಮನೆಯಲ್ಲಿ ಯಾವಾಗಲೂ ಖುಷಿ ಇರುತ್ತವೆ. ಯಾಕೆಂದರೆ ಆ ಮಕ್ಕಳು ಮಾಡುವ ತರ್ಲೆ ತುಂಟಾಟಗಳು ನಮ್ಮ ನೋವನ್ನು ಮರೆಸಿ ಮುಖದಲ್ಲಿ ನಗು ಮೂಡಿಸುತ್ತದೆ. ಇನ್ನೂ ಕೆಲವು ಮಕ್ಕಳು ಸಿಕ್ಕಾಪಟ್ಟೆ ಚುರುಕಾಗಿ ಇರುತ್ತವೆ. ಅಂತಹ ಮಕ್ಕಳ ತರ್ಲೆ ಮಾತುಗಳು ಕೇಳಲು ತುಂಬಾ ತಮಾಷೆಯಾಗಿರುತ್ತವೆ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಉತ್ತರಿಸುವ ರೀತಿ, ಅವರ ಗತ್ತು ಗಾಂಭಿರ್ಯ ನೋಡಲು ಚಂದವೆನಿಸುತ್ತದೆ. ಸೈಲೆಂಟ್ ಆಗಿರುವ ಮಕ್ಕಳಿಗಿಂತ ಈ ಅಜ್ಜಿಕತೆ ಮಾತಾಡುವ ಚುರುಕು ಮಕ್ಕಳೆಂದರೆ ಹೆಚ್ಚಿನವರಿಗೆ ಇಷ್ಟವಾಗುತ್ತಾರೆ. ದೊಡ್ಡವರು ಕೇಳುವ ಪ್ರಶ್ನೆಗಳಿಗೆ ಆ ತರ್ಲೆ ಮಕ್ಕಳು ನೀಡುವ ಉತ್ತರ ನಮ್ಮನ್ನು ನಗಿಸುತ್ತವೆ. ಹೀಗೆ ಪುಟ್ಟ ಹುಡುಗನೊಬ್ಬನ ತರ್ಲೆ ಮಾತಿನ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Viral Video : ಚಿರತೆಯೊಂದಿಗೆ ಸೆಲ್ಫೀ ತೆಗೆದುಕೊಂಡ ಗೈಡ್​, ಕೋಪಗೊಂಡ ನೆಟ್ಟಿಗರು

ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಮೀಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾದ ಪುಟ್ಟ ಹುಡುಗನ ತಮಾಷೆಯ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಒಂದು ಮಹಿಳೆ ಪುಟ್ಟ ಬಾಲಕನ ಬಳಿ ಸಿಎಂ ಅಂದ್ರೆ ಯಾರು ಎಂದು ಪ್ರಶ್ನೆ ಕೇಳುತ್ತಾರೆ. ಆ ಹುಡುಗ ತಕ್ಷಣ ಸಿಎಂ ನನ್ನ ಅಮ್ಮ ಅಂತ ಹೇಳುತ್ತಾನೆ. ಈ ಮಗುವಿನ ಉತ್ತರ ಕೇಳಿ ಅಲ್ಲಿದ್ದವರೆಲ್ಲ ಜೋರಾಗಿ ನಗುವುದನ್ನು ತೋರಿಸುತ್ತದೆ. ಪುಟ್ಟ ಮಗುವಿನ ಈ ಮಾತು ನಮ್ಮೆಲ್ಲರನ್ನು ನಕ್ಕು ನಗಿಸುವುದಂತೂ ನಿಜ.

ನೆಟ್ಟಿಗರ ಮನಗೆದ್ದ ಈ ವೈರಲ್ ವಿಡಿಯೊ 374 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಮೆಂಟ್ಸ್ ಕೂಡಾ ಈ ವಿಡಿಯೊಗೆ ಸಿಕ್ಕಿದೆ. ಒಬ್ಬ ಬಳಕೆದಾರರು ರಾಜ್ಯದಲ್ಲಿ ಯಾರು ಬೇಕಾದರೂ ಸಿಎಂ ಆಗಲಿ, ಆದರೆ ಮನೆಯಲ್ಲಿ ಅಮ್ಮನೇ ಸಿಎಂ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಹುಡುಗ ಹೇಳಿದ್ದು ಕರೆಕ್ಟ್, ಸಿಎಂ ಎಂದರೆ ಕುಕಿಂಗ್ ಮಿನಿಸ್ಟರ್ ಎಂದು ತಮಾಷೆಯ ಕಮೆಂಟ್ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾದರು ಯಾವತ್ತೂ ಅಮ್ಮನೇ ಸಿಎಂ ಎಂದು ಹೇಳಿದ್ದಾರೆ.

Published On - 5:04 pm, Wed, 8 March 23

Loading...
Unable to load recommendations.
Follow Us