Viral Video: ತೆರೆದ ಮೊಟ್ಟೆಯಲ್ಲಿ ಕೋಳಿಮರಿಯನ್ನು ಬೆಳೆಸಿದ ಯುವಕ

|

Updated on: Mar 31, 2023 | 1:42 PM

ತೆರೆದ ಮೊಟ್ಟೆಯೊಂದರಲ್ಲಿ ಕೋಳಿಯ ಭ್ರೂಣವನ್ನಿಟ್ಟು ಅದಕ್ಕೆ ಕಾವು ಕೊಟ್ಟು ಕೃತಕ ವಿಧಾನದಲ್ಲಿ ಮರಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವಾಗಿಯೂ ಸಾಧ್ಯವೇ ಎಂಬುವುದು ಅನೇಕರ ಪ್ರಶ್ನೆ.

Viral Video: ತೆರೆದ ಮೊಟ್ಟೆಯಲ್ಲಿ ಕೋಳಿಮರಿಯನ್ನು ಬೆಳೆಸಿದ ಯುವಕ
ವಿಡಿಯೋ ವೈರಲ್
Follow us on

ತೆರೆದಿಟ್ಟ ಮೊಟ್ಟೆಯೊಳಗೆ ಅದರ ಹಳದಿ ಲೋಳೆಯ ಭ್ರೂಣವನ್ನಿಟ್ಟು ಜೀವಂತ ಮರಿಯನ್ನು ಕೃತಕ ವಿಧಾನದ ಮೂಲಕ ಅಭಿವೃದ್ಧಿಪಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಈ ವಿಡಿಯೋ ತುಣಕು ಹಳೆಯದು. ಮೂಲತಃ 2016ರಲ್ಲಿ ಇದನ್ನು ಹಂಚಿಕೊಳ್ಳಲಾಗಿತ್ತು. ಹಾಗೂ ಇತ್ತೀಚಿಗೆ ಮೆಡಿಕಲ್ ವಿಡಿಯೋಸ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಮರು ಪೋಸ್ಟ್ ಮಾಡಲಾಗಿದೆ. ಒಡೆದ ಮೊಟ್ಟೆಯಿಂದ ಕೋಳಿ ಮರಿ ಜೀವಂತವಾಗಿ ಬರುವವರೆಗೆ ಈ 21 ದಿನದ ಪ್ರಕ್ರಿಯೆಯನ್ನು ಕೆಲವೇ ನಿಮಿಷಗಳ ಈ ವೈರಲ್ ವೀಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸುಮಾರು ೩ ಮಿಲಿಯಲ್ ವೀಕ್ಷಣೆಗಳನ್ನು ಮತ್ತು ಸುಮಾರು 32,000 ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವೀಡಿಯೋವನ್ನು ನೋಡಿದ ಅನೇಕ ಟ್ವಿಟರ್ ಬಳಕೆದಾರರಿಗೆ ಈ ಕೃತಕ ಪ್ರಕ್ರಿಯೆಯಲ್ಲಿ ಕೋಳಿಮರಿಯನ್ನು ಜೀವಂತವಾಗಿ ಬೆಳೆಸುವುದು ನಿಜವಾಗಿಯೂ ಸಾಧ್ಯನಾ ಎಂದು ನಂಬಲು ಕಷ್ಟಕರವಾಗಿತ್ತು. ಹಾಗೂ ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಕ್ಲಿಪ್​​ನಲ್ಲಿ ವ್ಯಕ್ತಿಯೊರ್ವ ಮೊಟ್ಟೆಯನ್ನು ರೌಂಡ್ ಆಕಾರಕ್ಕೆ ಕಟ್ ಮಾಡಿ ಅದರಲ್ಲಿ ಮೊಟ್ಟೆಯ ಹಳದಿ ಲೋಳೆಯನ್ನು ಹಾಕಿ ಯಾವುದೋ ದ್ರವವೊಂದನ್ನು ಅದಕ್ಕೆ ಇಂಜೆಕ್ಟ್ ಮಾಡಿ ಪ್ಲಾಸ್ಟಿಕ್ ಚೀಲದಿಂದ ಮುಚ್ಚುತ್ತಾನೆ. ಈ ಪ್ರಕ್ರಿಯೆ ಹಲವು ಬಾರಿ ಮುಂದುವರೆದು, ಕಾವುಕೊಟ್ಟ ನಂತರ ಆ ಮೊಟ್ಟೆಯಿಂದ ಮರಿ ಹೊರಬರುವುದನ್ನು ತೋರಿಸುತ್ತದೆ.

ಇದನ್ನೂ ಓದಿ:Viral Video : ಈ ಪುಟ್ಟಿ ಅಪ್ಪನೆದುರು ಶಾಂತಮಯೀ, ಅಮ್ಮನೆದುರು ರುದ್ರಭಯಂಕರೀ

ಆ ವ್ಯಕ್ತಿ ಜಪಾನಿನ ವಿದ್ಯಾರ್ಥಿಯಾಗಿದ್ದು, ಕೆಲವು ಹಂತಗಳಲ್ಲಿ ಭ್ರೂಣಕ್ಕೆ ಜೀವ ತುಂಬಲು ಸಿರಿಂಜ್‌ನಿಂದ ಏನನ್ನೋ ಚುಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಅನೇಕ ಬಳಕೆದಾರರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಅನೇಕರು ಇದು ಸುಳ್ಳು ಎಂದು ಹೇಳಿದ್ದಾರೆ. ಆದರೆ ಮಿಸ್ಸಿಸ್ಸಿಪ್ಪಿ ಸ್ಟೇಟ್ ಯೂನಿವರ್ಸಿಟಿಯ ಕೋಳಿ ವಿಜ್ಞಾನದ ಪ್ರಾಧ್ಯಾಪಕರಾದ ಇ ಡೇವಿಡ್ ಪೀಬಲ್ಸ್, ಈ ಪ್ರಕ್ರಿಯೆ ಸಾಧ್ಯ ಎಂದು ತಿಳಿಸಿದರು.

ಪ್ರೊಫೆಸರ್ ಪೀಬಲ್ಸ್ ಅವರು ಉತ್ತರ ಕೆರೊಲಿನಾ ಸ್ಟೇಟ್ ಯೂನಿವಸಿಟಿಯಲ್ಲಿ ಇದೇ ರೀತಿಯ ಮೊಟ್ಟೆಯಿಂದ ಮರಿ ಮಾಡುವ ಪ್ರಕ್ರಿಯೆಯನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಹಾಗೂ ಈ ಪ್ರಕ್ರಿಯೆಯು ವಾಣಿಜ್ಯ ಕೋಳಿ ಸಾಕಾಣೆಯಲ್ಲಿ ಅಥವಾ ಆಹಾರಕ್ಕಾಗಿ ಕೋಳಿಗಳನ್ನು ಸಾಕಲು ಈ ವಿಧಾನವನ್ನು ಬಳಸಲಾಗುವುದಿಲ್ಲ ಎಂದು ಅವರು ಹೇಳಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Fri, 31 March 23