Viral Video: ಬೆಂಗಳೂರು ರೈಲು ನಿಲ್ದಾಣದಲ್ಲಿ ಸಂಭವಿಸಬಹುದಾದ ಜೀವಹಾನಿ ತಪ್ಪಿಸಿದ ಆರ್​ಪಿಎಫ್​ ಸಿಬ್ಬಂದಿ, ವಿಡಿಯೋ ವೈರಲ್

| Updated By: Rakesh Nayak Manchi

Updated on: Jul 17, 2022 | 4:39 PM

ರೈಲು ಬರುತ್ತಿರುವಾಗ ಫ್ಲಾಟ್​ಫಾರ್ಮ್​ನ ಅಂಚಿಗೆ ಬಂದ ವ್ಯಕ್ತಿ ಕಾಲು ಜಾರಿ ಹಳಿಗೆ ಬಿದ್ದ ವ್ಯಕ್ತಿಯನ್ನು ಆರ್​ಪಿಎಫ್ ಸಿಬ್ಬಂದಿ ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಬೆಂಗಳೂರಿನ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ.

Viral Video: ಬೆಂಗಳೂರು ರೈಲು ನಿಲ್ದಾಣದಲ್ಲಿ ಸಂಭವಿಸಬಹುದಾದ ಜೀವಹಾನಿ ತಪ್ಪಿಸಿದ ಆರ್​ಪಿಎಫ್​ ಸಿಬ್ಬಂದಿ, ವಿಡಿಯೋ ವೈರಲ್
ರೈಲು ನಿಲ್ದಾಣದಲ್ಲಿ ತಪ್ಪಿದ ಅವಘಡ
Follow us on

ವೈರಲ್ ವಿಡಿಯೋ: ರೈಲು ಅಪಘಾತಗಳ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಯುವ ಅಚಾತುರ್ಯದ ಹಲವು ಘಟನೆಗಳು ನಡೆಯುತ್ತವೆ. ರೈಲು ಬರುವಾಗ ಹಳಿ ದಾಟಬಾರದು ಎಂದು ಜಾಗೃತಿ ಮೂಡಿಸುತ್ತಿದ್ದರೂ ಕೆಲವು ಜನರು ಅದನ್ನು ಲೆಕ್ಕಿಸದೆ ಹಳಿ ದಾಟಲು ಮುಂದಾಗುತ್ತಾರೆ. ಇನ್ನು ಕೆಲವರು ಅವಸರದಲ್ಲಿ ರೈಲು ಹತ್ತಲು ಹೋಗಿ ಹಳಿ ಮೇಲೆ ಬೀಳುತ್ತಾರೆ. ಇಂತಹ ಅನೇಕ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಬೆಂಗಳೂರಿನ ಕೆ.ಆರ್​.ಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಅವಘಡದ ವಿಡಿಯೋ ವೈರಲ್ ಆಗುತ್ತಿದೆ. ರೈಲು ಬರುತ್ತಿರುವಾಗ ಫ್ಲಾಟ್​ಫಾರ್ಮ್​ನ ಅಂಚಿಗೆ ಬಂದ ವ್ಯಕ್ತಿ ಕಾಲು ಜಾರಿ ಹಳಿಗೆ ಬೀಳುತ್ತಾನೆ ಮತ್ತು ಆತನ ರಕ್ಷಣೆ ಮಾಡುವುದನ್ನು ಈ ವೈರಲ್ ವಿಡಿಯೋ (Viral Video) ತೋರಿಸುತ್ತದೆ.

ವೈರಲ್ ಆಗಿರುವ ವೀಡಿಯೊದಲ್ಲಿ ಇರುವಂತೆ, ರೈಲು ನಿಲ್ದಾಣದಲ್ಲಿ ಜನಸಂಧಣಿಯ ನಡುವೆ ಇಬ್ಬರು ಆರ್​ಪಿಎಫ್ ಸಿಬ್ಬಂದಿಗಳು ನಡೆದುಕೊಂಡು ಹೋಗುತ್ತಿರುತ್ತಾರೆ. ರೈಲು ಬರುತ್ತಿದ್ದಾಗ ವ್ಯಕ್ತಿಯೊಬ್ಬ ಹಳಿ ಮೇಲೆ ಜಾರಿ ಬೀಳುತ್ತಾನೆ. ಮೇಲಕ್ಕೆ ಹತ್ತಲು ಯತ್ನಿಸಿದರೂ ಸಾಧ್ಯವಾಗಿದ್ದಾಗ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಗಾಬರಿಗೊಳಗಾದರು. ವಿಚಾರ ತಿಳಿಯುತ್ತಿದ್ದಂತೆ ನಡೆದುಕೊಂಡು ಹೋಗುತ್ತಿದ್ದ ಆರ್​ಪಿಎಫ್​ ಸಿಬ್ಬಂದಿಗಳ ಪೈಕಿ ಒಬ್ಬರು ಓಡಿ ಹೋಗಿ ವ್ಯಕ್ತಿಯನ್ನು ಮೇಲಕ್ಕೆತ್ತುತ್ತಾರೆ. ಇದಾಗಿ ಒಂದೆರಡು ಸೆಕೆಂಡುಗಳಲ್ಲಿ ರೈಲು ಪಾಸಾಗುತ್ತದೆ.

ಈ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ರೈಲು ಬರುವ ಕೆಲವೇ ನಿಮಿಷಗಳಲ್ಲಿ ಹಳಿಗಳ ಮೇಲೆ ಜಾರಿ ಬಿದ್ದ ವ್ಯಕ್ತಿಯ ಅಮೂಲ್ಯ ಜೀವವನ್ನು ಆರ್‌ಪಿಎಫ್ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆಯಿಂದ ರಕ್ಷಿಸಲಾಗಿದೆ” ಎಂದು ಶೀರ್ಷಿಕೆ ನೀಡಿದೆ. ವಿಡಿಯೋ ವೈರಲ್ ಪಡೆದು ಇದುವರೆಗೆ 3.63 ಲಕ್ಷ ವೀಕ್ಷಣೆಗಳನ್ನು ಪಡೆದಿದ್ದು, 15ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಈ ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡರೂ ಹಳಿಗೆ ಬಿದ್ದ ವ್ಯಕ್ತಿ ಪ್ರಾಣ ಹೋಗುತ್ತಿತ್ತು ಎಂದು ಹೇಳಿರುವ ನೆಟ್ಟಿಗರು, ಆರ್​ಪಿಎಫ್​ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Published On - 4:37 pm, Sun, 17 July 22