
ಯಾವುದೇ ಮಕ್ಕಳಲ್ಲಿ ಕೇಳಿದರೂ ಕೂಡ ತಂದೆಯೇ ಸೂಪರ್ ಹೀರೋ ಎಂದು ಹೇಳುವುದನ್ನು ಕೇಳಿರುತ್ತೇವೆ. ತಾಯಿಯು ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ ಮಾತ್ರ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆನೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ತಂದೆಯೆಂದರೆ ಅಚ್ಚು ಮೆಚ್ಚು. ತಂದೆಗೂ ಕೂಡ ಹೆಣ್ಣು ಮಕ್ಕಳೆಂದರೆ ಪ್ರಾಣಕ್ಕಿಂತ ಹೆಚ್ಚು. ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಅಪ್ಪನನ್ನು ನಾವೆಲ್ಲರೂ ನೋಡಿರುತ್ತೇವೆ. ಇಲ್ಲೊಬ್ಬ ತಂದೆಯು ಮಗಳ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾನೆ. ಈ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೋ ವಾಲಾ ತನ್ನ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಆಟೋವನ್ನು ಗುಲಾಬಿ ಬಣ್ಣದ ಬಲೂನ್ಗಳಿಂದ ಅಲಂಕರಿಸಿದ್ದಾನೆ. ಈ ವಿಡಿಯೋವನ್ನು ‘ಸುಮೇಧಉಪ್ಪಲ್’ ಹೆಸರಿನ ಬಳಕೆದಾರರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಗರದ ನಿವಾಸಿಯೊಬ್ಬರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ 2.6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ಲೈಕ್ಗಳೊಂದಿಗೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹಲವು ನೆಟ್ಟಿಗರು ಮಗಳ ಮೇಲಿನ ತಂದೆಯ ಪ್ರೀತಿಗೆ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ಡೆಡ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸರಾಗವಾಗಿ 50 ಕೆಜಿ ಎತ್ತಿದ 82ರ ಅಜ್ಜಿ
ಬಳಕೆದಾರರೊಬ್ಬರು ‘ಇದು ತುಂಬಾ ಸುಂದರವಾಗಿದೆ. ಚಿಕ್ಕ ಸಮಾರಂಭವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅವರು ನಿಜಕ್ಕೂ ಗ್ರೇಟ್ ಫಾದರ್” ಎಂದಿದ್ದಾರೆ. ಮತ್ತೊಬ್ಬರು, ‘ಇವತ್ತಿನ ಬ್ಯುಸಿ ಲೈಫ್ ನಲ್ಲಿ ಮಗಳ ಹುಟ್ಟುಹಬ್ಬವನ್ನು ಇಷ್ಟು ಮುದ್ದಾಗಿ ಆಚರಿಸಿರುವುದು ಅಚ್ಚರಿ ಮೂಡಿಸಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಇಂತಹ ಸಣ್ಣ ಕೆಲಸಗಳು ಯಾವುದೇ ದೊಡ್ಡ ಸಂಭ್ರಮಾಚರಣೆಗಿಂತ ಹೆಚ್ಚು ಪರಿಣಾಮಕಾರಿ’ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ