ಚಹಾಕ್ಕೆ ಭಾರತದಲ್ಲಿ ತನ್ನದೇ ಆದ ಸ್ಥಾನವಿದೆ, ವಿಶ್ರಾಂತಿ ವೇಳೆ ಜ್ಯೂಸ್ ಕುಡಿಯುವವರಿಗಿಂತ ಒಂದು ಕಪ್ ಚಹಾ ಕುಡಿಯುವವರೇ ಹೆಚ್ಚು. ಇನ್ನು ಯುವಕರಾದರೆ ಬೈಕ್ ಮೂಲಕ ಹೋಗಿ 10 ರೂಪಾಯಿ ಚಹಾ ಕುಡಿದು ಬರುತ್ತಾರೆ. ಇಂತಹ ಚಹಾದಲ್ಲೂ ಶುಂಠಿ ಚಹಾ, ಲೆಮೆನ್ ಟೀ, ಚಾಕಲೇಟ್ ಟೀ, ಗ್ರೀನ್ ಟೀ ಸೇರಿದಂತೆ ಅನೇಕ ಫ್ಲೇವರ್ಗಳನ್ನು ಕಾಣಬಹುದಾಗಿದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಿಮ್ಮನ್ನು ಅಚ್ಚರಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಯಾವುದನ್ನು ನೀವು ಸಕ್ಕರೆ ಪಾಕದಲ್ಲಿ ಹಾಕಿ ತಿನ್ನುತ್ತೀರೋ ಅದೇ ರಸಗುಲ್ಲಾದ ಉಂಡೆಯನ್ನು ಬೆರೆಸಿ ಚಹಾವನ್ನು ತಯಾರಿಸಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ವಿಲಕ್ಷಣ ಸಂಯೋಜನೆಯ ರಸಗುಲ್ಲಾ ಚಹಾ ಮಾಡುತ್ತಿರುವ ದೃಶ್ಯಾವಳಿಯನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಆಹಾರ ಬ್ಲಾಗರ್ kolkatadelites ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸೌತ್ ಸಿಟಿ ಮಾಲ್ ಪಕ್ಕದಲ್ಲಿರುವ ಚುಮುಕ್ ಚೋಮೊಕ್ ಎಂಬಲ್ಲಿ ಈ ಚಹಾ ಸಿಗುತ್ತದೆ, ಪ್ರತಿ ಕಪ್ಗೆ 35ರೂಪಾಯಿ ಬೆಲೆ ಇದೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಕಾಣುವಂತೆ, ಚಹಾ ಮಾಡುವ ಅಂಗಡಿ ಮಾಲೀಕ, ಮಣ್ಣಿನ ಲೋಟದಲ್ಲಿ ರಸಗುಲ್ಲಾದ ಉಂಡೆಯನ್ನು ಹಾಕುತ್ತಾರೆ, ನಂತರ ಅದಕ್ಕೆ ಚಹಾವನ್ನು ಬೆರೆಸುತ್ತಾರೆ. ಅಂತಿಮವಾಗಿ ಸ್ವಲ್ಪ ಬೆಣ್ಣೆ ಕೂಡ ಹಾಕಿ ಮಿಶ್ರಣ ಮಾಡುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಪಡೆದಿದ್ದು, 11ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಈ ವಿಡಿಯೋ ಇಲ್ಲಿದೆ ನೋಡಿ:
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 am, Sun, 21 August 22