AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೆಡ್ಡಿಂಗ್ ಕೇಕ್​ನಲ್ಲಿ ಪುಟ್ಟನಾಯಿ; ವರನನ್ನು ಅಚ್ಚರಿಗೊಳಿಸಿದ ವಧು

Dog Love: ಮದುವೆಯಲ್ಲಿ ಕುಟುಂಬದವರು ಸ್ನೇಹಿತರು ವಧುವರರಿಗೆ ನೀಡುವ ಅಚ್ಚರಿಗಳು ಒಂದೆಡೆಯಾದರೆ ವಧು ಮತ್ತು ವರರು ಪರಸ್ಪರ ನೀಡುವ ಅಚ್ಚರಿಗಳು ಯಾವತ್ತೂ ವಿಶೇಷವಾಗಿರುತ್ತವೆ ಮತ್ತು ಇತರರ ಊಹೆಗೆ ಸುಲಭವಾಗಿ ನಿಲುಕಲಾರವು. ಇದೀಗ ವಧುವೊಬ್ಬಳು ವರನ ನೆಚ್ಚಿನ ನಾಯಿಮರಿಯನ್ನು ಪುಟ್ಟದಾಗಿ ಕೇಕ್​ನಲ್ಲಿ ಅರಳಿಸಿ ಅವನನ್ನು ಮದುಗೊಳಿಸಿದ್ದಾಳೆ.

Viral Video: ವೆಡ್ಡಿಂಗ್ ಕೇಕ್​ನಲ್ಲಿ ಪುಟ್ಟನಾಯಿ; ವರನನ್ನು ಅಚ್ಚರಿಗೊಳಿಸಿದ ವಧು
ವರನ ನಾಯಿಯ ಪುಟ್ಟ ಪ್ರತಿಕೃತಿಯನ್ನು ವೆಡ್ಡಿಂಗ್​ ಕೇಕ್​ನಲ್ಲಿ ಅರಳಿಸಿದ ವಧು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 23, 2023 | 10:05 AM

Share

Wedding Cake: ವಧು ವರನನ್ನು ಕರೆದುಕೊಂಡು ಕೇಕ್​ ಇದ್ದಲ್ಲಿಗೆ ಕರೆದುಕೊಂಡು ಬರುತ್ತಾಳೆ. ಕೇಕ್ ನೋಡುತ್ತಿದ್ದಂತೆ ವರ ಅಚ್ಚರಿಗೆ ಒಳಗಾಗುತ್ತಾನೆ. ಏಕೆಂದರೆ ಆ ಕೇಕ್​ನಲ್ಲಿ ವರನ ನಾಯಿಮರಿಯ (Dog) ಪುಟ್ಟ ಆಕೃತಿ ಅರಳಿರುತ್ತದೆ. ಈ ಮೂಲಕ ವಧು ವರನಿಗೆ ಸರ್ಪ್ರೈಝ್ ಕೊಡುವ ವಧುವಿನ ಉದ್ದೇಶ ಈಡೇರಿ ಇಬ್ಬರ ಮುಖದಲ್ಲೂ ಸಂತಸ ಮೂಡುತ್ತದೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿದ್ದು ನೆಟ್ಟಿಗರು ಕುತೂಹಲದಿಂದ ಮುದ್ದಾದ ಈ ಕೇಕ್​ ಅನ್ನು ನೋಡುತ್ತಿದ್ದಾರೆ. ವೆಡ್ಡಿಂಗ್ ಕಂಟೆಂಟ್ ಕ್ರಿಯೇಟರ್ ಯುಕೆ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ : Viral: ‘ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್​’ ಹೆಮ್ಮೆಪಟ್ಟ ನಟ ಮಾಧವನ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಆ. 21ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 3 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. 2.7 ಲಕ್ಷ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ವಧುವಿನ ಇಚ್ಛೆ ಪೂರ್ಣಗೊಂಡ ಬಗ್ಗೆ ಮತ್ತು ವರನ ಮುಖದಲ್ಲಿ ಆ ಕೇಕ್​​ ನೋಡಿ ಅರಳಿದ ಅಚ್ಚರಿಯ ಭಾವದ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ವೆಡ್ಡಿಂಗ್​ ಕೇಕ್​ನಲ್ಲಿ ವಧುವಿನ ನಾಯಿ

ಅವನು ನಾಯಿಯನ್ನು ನೋಡುತ್ತಿದ್ದಂತೆ ಅವನ ಮುಖಭಾವವೇ ಬದಲಾಯಿತು ಎಂದಿದ್ದಾರೆ ಒಬ್ಬರು. ಅವಳಿಗೆ ಪ್ರೀತಿ ಬಿಟ್ಟರೆ ಬೇರೆ ಏನೂ ಬೇಕಿಲ್ಲ ಬದುಕಿನಲ್ಲಿ ಎನ್ನುವುದು ಅವನಿಗೆ ಈ ಮೂಲಕ ಮನದಟ್ಟಾಯಿತು ಎಂದಿದ್ದಾರೆ ಇನ್ನೊಬ್ಬರು. ಅವನಿಗೆ ಎಷ್ಟು ಖುಷಿಯಾಗಿದೆ ಎಂದರೆ, ಆ ಇಡೀ ರಾತ್ರಿ ಅವನು ನಿದ್ರಿಸಿರುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ತನ್ನ ಅಚ್ಚುಮೆಚ್ಚಿನ ‘ಜೀವಂತ ತಲೆದಿಂಬಿನೊಂದಿಗೆ’ ತಪ್ಪಿಸಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು

ಅವನಿನ್ನು ಆಕೆಗೆ ಒಂದಿಷ್ಟು ಸಾಕುಪ್ರಾಣಿಗಳನ್ನು ಉಡುಗೊರೆಯಾಗಿ ಕೊಡಬಹುದು ಎಂದಿದ್ಧಾರೆ ಒಬ್ಬರು. ಆಕೆ ಅವನನ್ನು ಮತ್ತು ಅವನ ಇಂಗಿತವನ್ನು ಎಷ್ಟು ಪ್ರೀತಿಸುತ್ತೇನೆ ಎಂದು ತೋರಿಸುವುದರ ದ್ಯೋತಕ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Follow Us
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್