ಮದುವೆ ಮಂಟಪದಲ್ಲಿ ಮದುಮಗಳು ಸೂರ್ಯವಂಶ ಚಲನಚಿತ್ರದ ಸೇವಂತಿಯೇ… ಸೇವಂತಿಯೇ… ಎಂಬ ಹಾಡನ್ನು ಹಾಡಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಅಪ್‌ಲೋಡ್ ಆಗಿರುವ ಕೇವಲ ನಾಲ್ಕು ದಿನಕ್ಕೆ 1.3 ಮಿಲಿಯನ್ ವೀಕ್ಷಣೆಯನ್ನು ಪಡೆದು ನೆಟ್ಟಿಗರ ಮನ ಗೆದ್ದಿದೆ. ಮದುವೆ ಎಂದರೆ ಎಲ್ಲರಿಗೂ ಅದೊಂದು ಸಂಭ್ರಮದ ದಿನ. ಎಷ್ಟೇ ಸಂಭ್ರಮವಿದ್ದರೂ ವಧು ಮತ್ತು ಆಕೆಯ ಹೆತ್ತವರಿಗೆ ಮನಸ್ಸಿನ ಮೂಲೆಯಲ್ಲಿ ದುಃಖ ಇದ್ದೇ ಇರುತ್ತದೆ. ಮಧುಮಗಳಿಗೆ ನಾವು ಹುಟ್ಟಿದ ಮನೆ, ತನ್ನನ್ನು ರಾಜಕುಮಾರಿಯಂತೆ ಸಾಕಿದ ತಂದೆತಾಯಿಯನ್ನು ಬಿಟ್ಟು ಹೋಗುತ್ತಿದ್ದೇನೆ ಎಂಬ ದುಃಖವಾದರೆ ಹೆತ್ತ ತಂದೆತಾಯಿಗೆ ಕಣ್ಣ ರೆಪ್ಪೆಯಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದ ಮಗಳನ್ನು ಇನ್ನೊಬ್ಬರ ಮನೆಗೆ ಕಳುಹಿಸಬೇಕಲ್ಲವೇ ಎಂಬ ನೋವು. ಈ ಭಾವನೆಗಳ ನೋವಿದ್ದರೂ ಎಲ್ಲೂ ಅದನ್ನು ತೋರ್ಪಡಿಸದೆ ಸಂತೋಷದಿಂದ ಮದುವೆ ಮನೆಯಲ್ಲಿ ನಗುನಗುತ್ತಾ ಇರುತ್ತಾರೆ.
ಮಧು ಮಗಳು ಮದುವೆ ಮಂಟಪದಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಅಳುತ್ತಾ ಮನೆಯವರನ್ನು ನೆನೆಸುತ್ತಾ ಕಣ್ಣೀರು ಹಾಕುತ್ತಾ ಹೋಗುತ್ತಾಳೆ. ಆದರೆ ಇಲ್ಲೊಬ್ಬಳು ಮಧು ಮಗಳು ತನ್ನ ಮದುವೆಯ ದಿನ ವಿಷ್ಣುವರ್ಧನ್ ಸರ್ ಅಭಿನಯದ ಸೂರ್ಯವಂಶ ಚಲನಚಿತ್ರದ ಹಾಡು ‘ಯಾರು ಇರದ ಆ ಊರಲ್ಲಿ ನಾನೇ ನಿನ್ನವಳಾಗಿರುವೆ’….. ಹಾಡನ್ನು ಹಾಡುತ್ತಾ ಮನೆಯವರಿಗೆ ವಿದಾಯ ಹೇಳುವ ವಿಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. 5 ನಿಮಿಷವಿರುವ ಈ ವಿಡಿಯೋವನ್ನು ನೀವು ಸ್ಕಿಪ್ ಮಾಡದೆ ನೋಡುವುದಂತೂ ನಿಜ. ಯಾಕೆಂದರೆ ವಧು ತನ್ನೆಲ್ಲಾ ನೋವುನ್ನು ಮುಚ್ಚಿಟ್ಟು ಬಹಳ ಸೊಗಸಾಗಿ ಹಾಡನ್ನು ಹಾಡಿದ್ದಾಳೆ.
ಇದನ್ನೂ ಓದಿ: Viral Video : ಚಿರತೆಯೊಂದಿಗೆ ಸೆಲ್ಫೀ ತೆಗೆದುಕೊಂಡ ಗೈಡ್, ಕೋಪಗೊಂಡ ನೆಟ್ಟಿಗರು
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ 1.3ವಿಲಿಯನ್ ವೀಕ್ಷಣೆಯನ್ನು ಪಡೆದು ನೆಟ್ಟಿಗರ ಮನಗೆದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಸ್ ಮತ್ತು ಕಮೆಂಟ್‌ಗಳು ಕೂಡಾ ಹರಿದು ಬಂದಿದೆ. ವಧುವಿನ ಗಾಯನ ಕಲೆಯನ್ನು ಹೊಗಳುತ್ತಾ, ನಿನ್ನ ಮುಂದಿನ ಜೀವನ ಸುಖಮಯವಾಗಲಿ ಎಂದು ಹೆಚ್ಚಿನವರು ಕಮೆಂಟ್ ಮಾಡುವ ಮೂಲಕ ವಧುವಿಗೆ ಮದುವೆಯ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.
Published On - 7:01 pm, Fri, 24 February 23