40 ರಿಂದ 50 ಅಂತಸ್ತಿನ ಕಟ್ಟಡಗಳು ಜೋರಾಗಿ ಗಾಳಿ ಬೀಸಿದಾಗ ಹೇಗಿರುತ್ತವೆ ಎಂದು ಯೋಚಿಸಿದ್ದೀರಾ? ಈಗ ಅನೇಕ ಗಗನಚುಂಬಿ ಕಟ್ಟಡಗಳಲ್ಲಿ ವಿಶೇಷ ತಂತ್ರಜ್ಞಾನವನ್ನು ಬಳಸಿರುವುದರಿಂದ ಅವುಗಳಿಗೆ ಬಿರುಗಾಳಿ ಹಾಗೂ ಭೂಕಂಪವನ್ನು ತಡೆಯುವ ಶಕ್ತಿ ಇರುತ್ತದೆ. ಆದರೆ ಇದೀಗಾ ಗಗನ ಚುಂಚಿ ಕಟ್ಟಡವೊಂದು ಗಾಳಿಗೆ ತೂಗಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದಂತೆ ನಿಮ್ಮ ಎದೆಯಲ್ಲಿ ನಡುಕ ಹುಟ್ಟುವುದಂತೂ ಖಂಡಿತಾ.
ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ಟವರ್ ಬಿರುಗಾಳಿ ಅಳುಗಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೀಡಿಯೊವನ್ನು ಅದರ ಮುಂಭಾಗದಲ್ಲಿರುವ ಕಟ್ಟಡದಿಂದ ವಿಡಿಯೊ ಮಾಡಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗಿದೆ. ವಿಡಿಯೋದಲ್ಲಿ ಕಟ್ಟಡ ಈ ರೀತಿ ಅಲುಗಾಡುತ್ತಿರುವುದನ್ನು ಕಂಡು ಬಹುತೇಕ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Timelapse of the Brooklyn Tower swaying in last nights 60mph wind gusts #whatisnewyork pic.twitter.com/SNoLzFBIT7
— WhatIsNewYork (@whatisny) January 10, 2024
ಇದನ್ನೂ ಓದಿ: ಹೋಟೆಲ್ ಕೊಠಡಿಗೆ ಏಕಾಏಕಿ ನುಗ್ಗಿದ ಚಿರತೆ; ವಿಡಿಯೋ ವೈರಲ್
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ “ಈ ಕಟ್ಟಡವನ್ನು ಎಲ್ಲಾ ಎತ್ತರದ ಕಟ್ಟಡಗಳಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಭಯಪಡುವಂಥದ್ದೇನೂ ಇಲ್ಲ. ಅದರಲ್ಲಿರುವ ತಂತ್ರಜ್ಞಾನದಿಂದ, ಭಾರೀ ಬಿರುಗಾಳಿ, ಸುನಾವಿಯನ್ನು ತಡೆಯುವ ಶಕ್ತಿಯಿದೆ” ಎಂದು ಬ್ರೂಕ್ಲಿನ್ ಟವರ್ಸ್‌ನ ನಿರ್ವಹಣಾ ಕಂಪನಿಯಾದ ಜೆಡಿಎಸ್ ಡೆವಲಪ್‌ಮೆಂಟ್ ಗ್ರೂಪ್ ಹೇಳಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ