AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಾನವೀಯ ಮೌಲ್ಯವನ್ನು ಈ ದಂಪತಿಗಳನ್ನು ನೋಡಿ ನಾವು ಕಲಿಯಬೇಕು ನೋಡಿ

ಇಂದಿನ ಕಾಲದಲ್ಲಿ ತಮ್ಮ ಸ್ವಂತದವರಿಗೆಯೇ ಸಹಾಯ ಮಾಡಲು ಹಿಂದು ಮುಂದು ನೋಡುವವರು, ರಸ್ತೆ ಬದಿಗಳಲ್ಲಿ ಅಸಹಾಯಕವಾಗಿ ಜೀವನ ನಡೆಸುವ ನಿರ್ಗತಿಕರಿಗೆ ಸಹಾಯ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ, ಅಂತಹವರನ್ನು ಕಸಕ್ಕಿಂತ ಕೀಳಾಗಿ ನೋಡುವವರೆ ಹೆಚ್ಚು. ಇಂತಹ ಜನಗಳ ಮಧ್ಯೆ ಇಲ್ಲೊಂದು ದಂಪತಿ  ನಿರ್ಗತಿಕ ವೃದ್ಧೆಯೊಬ್ಬರಿಗೆ ಧನ ಸಹಾಯ ಮಾಡಿದ್ದು ಮಾತ್ರವಲ್ಲದೆ ಆ ವೃದ್ಧೆಯ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುವ ಮೂಲಕ ನಿಜವಾದ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

Viral Video: ಮಾನವೀಯ ಮೌಲ್ಯವನ್ನು ಈ ದಂಪತಿಗಳನ್ನು ನೋಡಿ ನಾವು ಕಲಿಯಬೇಕು ನೋಡಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 19, 2024 | 5:17 PM

ನಮ್ಮಲ್ಲಿ ದಯೆ ಮತ್ತು ಕರುಣೆ ತುಂಬಿದ್ದರೆ ಮಾತ್ರ ನಾವು ನಿಜವಾಗಿಯೂ ಮನುಷ್ಯರು ಎಂದೆನಿಸಿಕೊಳ್ಳುತ್ತೇವೆ.  ಆದರೆ ಇಂದು ಜನರಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದೆ ಅಂತಾನೇ ಹೇಳಬಹುದು. ತಮ್ಮ ಸ್ವಂತದವರಿಗೆಯೇ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವವರು, ಹೆತ್ತ ತಂದೆ ತಾಯಿಯನ್ನೇ ವೃದ್ಧಾಶ್ರಮಕ್ಕೆ ಕಳುಹಿಸುವವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ತೋರ್ಪಡಿಕೆಗಾಗಿ ಕೈಲಾಗದವರಿಗೆ ಸಹಾಯ ಮಾಡುತ್ತಾ, ಆ ವಿಡಿಯೋ ತುಣುಕುಗಳನ್ನು ಸಾಮಾಜಿಕ  ಜಾಲತಾಣದಲ್ಲಿ ಹರಿಬಿಡುತ್ತಾರೆ. ಇಂತಹ ಜನರ ಮಧ್ಯೆ ನಿಜವಾದ ಮಾನವೀಯತೆ ಅಂದ್ರೆ ಏನು ಎಂಬುದನ್ನು ಈ ದಂಪತಿ ಕಲಿಸಿಕೊಟ್ಟಿದ್ದಾರೆ.  ಹೌದು ರಸ್ತೆ ಬದಿಗಳಲ್ಲಿ ಅಸಹಾಯಕವಗಾಗಿ ಜೀವನ ನಡೆಸುವ ನಿರ್ಗತಿಕರನ್ನು ಕಂಡು ಮುಖಸಿಂಡರಿಸಿ, ಅವರು ಅಸಹ್ಯವೇನೋ ಎಂಬಂತೆ ನೋಡುವ ಜನಗಳ ಮಧ್ಯೆ, ಈ ದಂಪತಿ ನಿರ್ಗತಿಕ ವೃದ್ಧೆಯೊಬ್ಬರಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದು ಮಾತ್ರವಲ್ಲದೆ, ಆ ವೃದ್ಧೆಯ ಕಾಲಿಗೆ ಬಿದ್ದು ಆಶಿರ್ವಾದವನ್ನು ತೆಗೆದುಕೊಂಡಿದ್ದಾರೆ.  ಈ ದಂಪತಿಯನ್ನು ನೋಡಿ ನಾವುಗಳು ಮಾನವೀಯ ಮೌಲ್ಯವನ್ನು ಕಲಿಯುವುದು ತುಂಬಾನೇ ಇದೆ ಅನ್ನುತ್ತಿದ್ದಾರೆ ನೆಟ್ಟಿಗರು.

ಬಾಲಿವುಡ್ ಕೊರಿಯೋಗ್ರಾಫರ್ ಹಾಗೂ ಡೈರೆಕ್ಟರ್ ರೆಮೋ ಡಿಸೋಜಾ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ದಂಪತಿ ಯಾರೆಂದು ನನಗೆ ಗೊತ್ತಿಲ್ಲ, ಆದ್ರೆ ಇವರ ಸದ್ಗುಣವನ್ನು ಕಂಡು ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದೇನೆ; ದಯೆಯ ಒಂದು ಸಣ್ಣ ಕಾರ್ಯವು ಹೆಚ್ಚು ಮೌಲ್ಯಯುತವಾದುದು. ಇದು ಇನ್ನೊಬ್ಬರ ಜೀವನದ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಈ ಮಾನವೀಯ ಗುಣ ಈ ದಂಪತಿಯಲ್ಲಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

View this post on Instagram

A post shared by Remo Dsouza (@remodsouza)

ಈ ಘಟನೆ ರೆಮೋ ಡಿಸೋಜಾ ಅವರ ಮನೆಯ ಮುಂಭಾಗದ ಬೀದಿಯಲ್ಲಿ ನಡೆದಿದ್ದು, ಒಂದೊಳ್ಳೆ ವಿಚಾರವಿರುವ ಈ ದೃಶ್ಯವನ್ನು ಏಕೆ ವಿಡಿಯೋ ರೆಕಾರ್ಡ್ ಮಾಡಬಾರದೆಂದು ಅಂದುಕೊಂಡು, ರೆಮೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ  ವೃದ್ಧೆಯೊಬ್ಬರು ರಸ್ತೆ ಬದಿಯಲ್ಲಿ ಕೈಲಾಗದ ಸ್ಥಿತಿಯಲ್ಲಿ ನಿಂತಿರುತ್ತಾರೆ. ಅವರನ್ನು ಕಂಡ ದಂಪತಿಗಳಿಬ್ಬರು ವೃದ್ಧೆಯ ಬಳಿ ಹೋಗಿ, ಅವರ ಕೈಯಲ್ಲಿ ಸ್ವಲ್ಪ ಹಣವನ್ನಿಟ್ಟು ನಿರ್ಗತಿಕರನ್ನು ಅಸಹ್ಯವೇನೋ ಎಂಬಂತೆ ಭಾವಿಸುವ ಜನರ ಮಧ್ಯೆ ಈ ದಂಪತಿ, ಆ ವೃದ್ಧೆಯ ಕಾಲಿಗೆ ಬಿದ್ದು ಆಶಿರ್ವಾದವನ್ನು ಸಹ ಪಡೆಯುತ್ತಾರೆ. ಇಂದಿನ  ಕಾಲದಲ್ಲಿ ಕ್ಯಾಮೆರಾ ಮುಂದೆ  ತೋರ್ಪಡಿಕೆಗಾಗಿ  ಸಹಾಯ ಮಾಡುವವರ ಮಧ್ಯದಲ್ಲಿ ಈ ದಂಪತಿಯ ಮಾನವೀಯ ಗುಣ ಎಲ್ಲರ ಮನ ಗೆದ್ದಿದೆ.

ಇದನ್ನೂ ಓದಿ: ರೈಲಿನಲ್ಲಿ ಯುವಕನಿಗೆ ಮನ ಬಂದಂತೆ ಥಳಿಸಿದ ಟಿಕೆಟ್ ಕಲೆಕ್ಟರ್ 

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11.7 ಮಿಲಿಯನ್ ವೀಕ್ಷಣೆಗಳನ್ನು  ಹಾಗೂ ಏಳು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಹಾಗೂ ನೆಟ್ಟಿಗರು ಕಮೆಂಟ್ಸ್ ಮೂಲಕ ದಂಪತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಒಬ್ಬ ಬಳಕೆದಾರರು ʼಅವರು ಅಂಧೇರಿಯ ಡಿ.ನ್ ನಗರ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್. ಅವರ ಮಾನವೀಯ ಗುಣಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದಂಪತಿಗಳು ತೋರ್ಪಡಿಕೆಗೆ ಸಹಾಯ ಮಾಡದೆ ಮನಃಪೂರ್ವಕವಾಗಿ ಸಹಾಯ ಮಾಡಿದ್ದಾರೆ. ನಿಜವಾದ ಮಾನವೀಯ ಗುಣ ಇವರಲ್ಲಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರಿಬ್ಬರೂ ವೃದ್ಧೆಯ ಪಾದ ಮುಟ್ಟಿ ನಮಸ್ಕರಿಸುವ ದೃಶ್ಯ ನನ್ನನ್ನು ಭಾವುಕನನ್ನಾಗಿಸಿತುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Fri, 19 January 24

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ