Viral Video: ಕಾರು ಖರೀದಿಸಿ ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟ ಶೈಲಿ ನೋಡಿ

| Updated By: Rakesh Nayak Manchi

Updated on: Oct 09, 2022 | 10:38 AM

ವ್ಯಕ್ತಿಯೊಬ್ಬರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಮನೆಯಂಗಳದಲ್ಲಿ ಪಾರ್ಕಿಂಗ್ ಮಾಡಿದ ಶೈಲಿಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

Viral Video: ಕಾರು ಖರೀದಿಸಿ ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟ ಶೈಲಿ ನೋಡಿ
ಬೈಕ್​ಗಳಿಗೆ ಗುದ್ದಿದ ಕಾರು
Follow us on

ಕಾರು ಖರೀದಿಸುವುದು ಪ್ರತಿಯೊಬ್ಬರು ಕನಸು. ಈ ಕನಸು ನನಸು ಮಾಡಿಕೊಂಡವು ಕಾರನ್ನು ಬಹಳ ಜಾಗರೂಕತೆಯಿಂದ ಮನೆಗೆ ತಂದು ಮಗುವಿನಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವರ ಹಿಂದೆ ದುರದೃಷ್ಟ ಅಡಗಿರುತ್ತದೆ. ಹೀಗಿದ್ದಾಗ ಹೊಸ ಕಾರು ಖರೀದಿಸಿ ಮನೆಗೆ ತಲುಪುವಷ್ಟರಲ್ಲಿ ಅಪಘಾತವಾಗುತ್ತದೆ. ಇಂತಹ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. Sqn Ldr ವಿನೋದ್ ಕುಮಾರ್ (ನಿವೃತ್ತ) ಅವರು “ಮನೆಗೆ ಎಂತಹ ಅದ್ದೂರಿ ಆಗಮನ?” ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ಅವರು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ವಸತಿ ಸಮುಚ್ಚಯದ ಮುಖ್ಯ ಗೇಟ್ ಅನ್ನು ತೆರೆದು ಕಾರು ಒಳಗೆ ಬರಲು ಸೂಚಿಸುತ್ತಿರುವಲ್ಲಿಂದ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ಸ್ವಲ್ಪ ಸಮಯದ ನಂತರ ವ್ಯಕ್ತಿ ಹೂವಿನ ಹಾರ ಹಾಕಿ ತಂದ ಕಾರನ್ನು ಬಹಳ ಜಾಗರೂಕತೆಯಿಂದ ಗೇಟ್ ಒಳಗೆ ತರುತ್ತಾರೆ. ಅದಾಗ್ಯೂ ಚಾಲಕನ ನಿಯಂತ್ರಣ ಕಳೆದುಕೊಂಡು ಅಂಗಳದಲ್ಲಿ ಸಾಲಾಗಿ ಪಾರ್ಕ್ ಮಾಡಿದ್ದ ಬೈಕ್​ಗಳ ಮೇಲೆ ಹತ್ತಿ ಕಾರು ಅರ್ಧ ಮಗುಚಿ ನಿಲ್ಲುತ್ತದೆ. ಈ ವೇಳೆ ಭದ್ರತಾ ಸಿಬ್ಬಂದಿ ಓಡೋಡಿ ಬಂದು ಕಾರು ಪೂರ್ಣ ಮಗುಚಿ ಬೀಳದಂತೆ ಹಿಡಿಯಲು ಮುಂದಾಗುವುದು ವಿಡಿಯೋದನ್ನು ಕಾಣಬಹುದು. ಈ ಎಲ್ಲಾ ದೃಶ್ಯಾವಳಿಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಅಪ್‌ಲೋಡ್ ಮಾಡಿದ ನಂತರ 6,22,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13,000 ಕ್ಕೂ ಹೆಚ್ಚು ಇಷ್ಟಗಳನ್ನು ಸಂಗ್ರಹಿಸಿದೆ. ಇಂಟರ್ನೆಟ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಅಪಘಾತವನ್ನು “ದುರಂತ” ಎಂದು ಕಂಡುಕೊಂಡರೆ, ಇತರರು ಅಪಘಾತ ಹೇಗೆ ಸಂಭವಿಸಬಹುದು ಎಂಬುದರ ವಿವರಣೆಯೊಂದಿಗೆ ಬರಲು ಪ್ರಯತ್ನಿಸಿದ್ದಾರೆ.
“ಇಂತಹ ರೋಚಕ ಆಗಮನವನ್ನು ಇಲ್ಲಿಯವರೆಗೆ ನೋಡಿಲ್ಲ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ಬ್ರೇಕ್ ಒತ್ತಿ ಮತ್ತು ಸ್ಟೀರಿಂಗ್ ಅನ್ನು ನೇರಗೊಳಿಸುವ ಬದಲು ಚಾಲಕ ಗಾಬರಿಗೊಂಡು ಎಕ್ಸಲೇಟರ್ ಅನ್ನು ಒತ್ತಿದನು’’ ಎಂದು ಇನ್ನೊಬ್ಬರು ಹೇಳಿದರು.

ಮೂರನೆಯವರು, “ಬಡ ನಿರ್ಜೀವ ದ್ವಿಚಕ್ರ ವಾಹನಗಳು ಮತ್ತು ಅವುಗಳ ಮಾಲೀಕರ ಭವಿಷ್ಯವು ದುರದೃಷ್ಟಕರವಾಗಿದೆ” ಹೇಳಿದ್ದಾರೆ. “ತೀಕ್ಷ್ಣವಾದ ತಿರುವು ತೆಗೆದುಕೊಂಡ ಕ್ಷಣ ನನಗೆ ತಿಳಿಯಿತು ಅದು ಚೆನ್ನಾಗಿ ಕೊನೆಗೊಳ್ಳುವುದಿಲ್ಲ. ಅದೃಷ್ಟವಶಾತ್ ಯಾರೂ ಇರಲಿಲ್ಲ” ಎಂದು ನಾಲ್ಕನೆಯವರು ಹೇಳಿದರು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ