Viral Video: ಕಾರಿನಲ್ಲಿ ಕುಳಿತು ಬರ್ಗರ್ ತಿನ್ನುವುದು ಅಪರಾಧವಾ? ಮತ್ತೆ ಅಮೆರಿಕ ಪೊಲೀಸರು ಯಾಕೆ ಗುಂಡು ಹಾರಿಸಿದರು?
James Brennand: ಕಾರಿನಲ್ಲಿ ಕುಳಿತು ಬರ್ಗರ್ ತಿನ್ನುವುದು ಅಪರಾಧವಾ? ಅಷ್ಟಕ್ಕೇ ಅಮೆರಿಕ ಪೊಲೀಸರು ಆ ಅಮಾಯಕ ಬಾಲಕನ ಮೇಲೆ ಗುಂಡು ಹಾರಿಸಿಬಿಡುವುದಾ? ಎರಿಕ್ ಕ್ಯಾಂಟು, 17, ಮೆಕ್‌ಡೊನಾಲ್ಡ್ಸ್ ಕಾರ್ ಪಾರ್ಕ್‌ನಲ್ಲಿ ತನ್ನ ವಾಹನದಲ್ಲಿದ್ದಾಗ ಸ್ಯಾನ್ ಆಂಟೋನಿಯೊ ಪೊಲೀಸ್ ಅಧಿಕಾರಿ ಜೇಮ್ಸ್ ಬ್ರೆನಾಂಡ್ ಆ ಹದಿಹರೆಯದ ಬಾಲಕನ ಮೇಲೆ ಅನೇಕ ಸುತ್ತು ಗುಂಡು ಹಾರಿಸಿ, ದರ್ಪ ಮೆರೆದಿದ್ದಾನೆ.
Burger: ಕಾರಿನಲ್ಲಿ ಕುಳಿತು ಬರ್ಗರ್ ತಿನ್ನುವುದು ಅಪರಾಧವಾ? ಅಷ್ಟಕ್ಕೇ ಅಮೆರಿಕ ಪೊಲೀಸರು ಆ ಅಮಾಯಕ ಬಾಲಕನ ಮೇಲೆ ಗುಂಡು ಹಾರಿಸಿಬಿಡುವುದಾ? ಎರಿಕ್ ಕ್ಯಾಂಟು, 17, ಮೆಕ್‌ಡೊನಾಲ್ಡ್ಸ್ ಕಾರ್ ಪಾರ್ಕ್‌ನಲ್ಲಿ ತನ್ನ ವಾಹನದಲ್ಲಿದ್ದಾಗ ಸ್ಯಾನ್ ಆಂಟೋನಿಯೊ ಪೊಲೀಸ್ ಅಧಿಕಾರಿ ಜೇಮ್ಸ್ ಬ್ರೆನಾಂಡ್ (James Brennand) ಆ ಹದಿಹರೆಯದ ಬಾಲಕನ ಮೇಲೆ (Erick Cantu) ಅನೇಕ ಸುತ್ತು ಗುಂಡು ಹಾರಿಸಿ, ದರ್ಪ ಮೆರೆದಿದ್ದಾನೆ. ಹದಿಹರೆಯದ ಬಾಲಕನ ಮೇಲೆ ಪೊಲೀಸರೇ ಗುಂಡು ಹಾರಿಸಿರುವ ಈ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಕಳೆದ ಭಾನುವಾರದಂದು ಈ ಘಟನೆ ನಡೆದಿದ್ದು, ಅದಾದನಂತರ ಶುಕ್ರವಾರದಂದು ಆ ಯುಎಸ್ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬಾಲಕ ನಮ್ಮ ಮೇಲೆ ಹಲ್ಲೆ ಮಾಡಿದ್ದ. ಅದಾದ ಮೇಲೆ ನಮ್ಮಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಇದೇ ಅಮೆರಿಕ ಪೊಲೀಸರು ಬಾಧಿತ ಬಾಲಕ ಎರಿಕ್ ಕ್ಯಾಂಟು ಮೇಲೆ ಸುಳ್ಳು ಆರೋಪ ಮಾಡಿದ್ದರು ಎಂಬುದು ದಾಖಲಾರ್ಹ ಸಂಗತಿ. ಅಂದಹಾಗೆ ತಪ್ಪಿತಸ್ಥ ಪೊಲೀಸ್ ಅಧಿಕಾರಿಯನ್ನು ಸದ್ಯಕ್ಕೆ ವಜಾ ಮಾಡಲಾಗಿದ್ದು, ಬಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಪೊಲೀಸರ ದೇಹ-ಕ್ಯಾಮ್ ದೃಶ್ಯಗಳನ್ನು ಬಿಡುಗಡೆ ಮಾಡಿದ ನಂತರ ಬಾಲಕನ ವಿರುದ್ಧದ ಆರೋಪಗಳನ್ನು ಕೈಬಿಡಲಾಯಿತು ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ನಿಲುಗಡೆ ಮಾಡಿದ ವಾಹನವನ್ನು ಸಮೀಪಿಸುತ್ತಿರುವ ಪೊಲೀಸರು ಥಟ್ಟನೆ ಅದರ ಬಾಗಿಲು ತೆರೆಯುವುದನ್ನು ಪೊಲೀಸರ ದೈಹಿಕ ಕ್ಯಾಮರಾದಲ್ಲಿನ ವೀಡಿಯೊ ದೃಶ್ಯಾವಳಿಗಳು ತೋರಿಸುತ್ತದೆ. ನಂತರ ಅವರು ಒಳಗೆ ಬರ್ಗರ್ ತಿನ್ನುತ್ತಿದ್ದ ಹದಿಹರೆಯದ ಬಾಲಕನನ್ನು ಹೊರಗೆ ಹೆಜ್ಜೆ ಹಾಕಲು ಹೇಳಿದರು. ಎರಿಕ್ ಕ್ಯಾಂಟು ಏಕೆ ಹೀಗೆ ಆದೇಶಿಸಲಾಗಿದೆ ಎಂದು ಪೊಲೀಸರನ್ನು ಪ್ರಶ್ನಿಸಿದಾಗ, ಪೊಲೀಸ್ ಬಾಲಕನನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಮತ್ತು ಬಾಗಿಲು ಇನ್ನೂ ತೆರೆದಿರುವಂತೆಯೇ ಕಾರು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ, ಬಾಲಕ ಕಾರು ಬಾಗಿಲು ಮುಚ್ಚಿಕೊಂಡು, ಸ್ಥಳದಿಂದ ಪರಾರಿಯಾಗುತ್ತಾನೆ. ಆದರೂ ಪೊಲೀಸರು ಆ ಕಾರಿನ ದಿಕ್ಕಿನಲ್ಲಿ ಅನೇಕ ಸುತ್ತು ಗುಂಡುಗಳನ್ನು ಹಾರಿಸಿದರು.
ಪೊಲೀಸರ ದಾಳಿಯಿಂದ ಪರಾರಿಯಾದ ಕಾರು ಪಕ್ಕದ ಬಡಾವಣೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸಂತ್ರಸ್ತ ಬಾಲಕನು ಅನೇಕ ಸುತ್ತಿನ ಗುಂಡಿನ ದಾಳಿಯಿಂದ ಪೆಟ್ಟು ತಿಂದಿದ್ದನು. ಈ ಮಧ್ಯೆ ಕಾರಿನ ಹಿಂದಿನ ಸೀಟಿನಲ್ಲಿದ್ದ 17 ವರ್ಷದ ಯುವತಿ ಗಾಯಗೊಳ್ಳದೆ ಬಚಾವಾಗಿದ್ದಾಳೆ.
Earlier this week, a San Antonio cop abruptly confronted a teen eating in a McDonalds parking lot & demanded the teen exit his vehicle.
When the teen asked why, the cop immediately assaulted & then shot him MULTIPLE TIMES. Cop tried to (falsely) claim the teen had struck him 1st pic.twitter.com/ATNKj4fVgi
— Kendall Brown (@kendallybrown) October 7, 2022