ಹುಡುಗಿಯರು ತಮ್ಮ ಮೈ ಮೇಲೆ ಜಿರಳೆ, ಹಲ್ಲಿ ಬಿದ್ದಾಗ ಕಿರುಚಾಡುತ್ತಾ ಕುಣಿದು ಕುಪ್ಪಳಿಸಿ ಅದನ್ನು ಎಸೆಯುವ ಶೈಲಿ ನೋಡಿರುತ್ತೀರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವು ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರನ್ನು ನೆನಪಿಸುವಂತಿದೆ. ಆದರೆ ವಿಡಿಯೋದಲ್ಲಿ ಜಿರಳೆಯ ಬದಲು ಹಾವನ್ನು ನೋಡಬಹುದು. ಕಿತಾಪತಿ ಚಿಂಪಾಂಜಿಯೊಂದು ಹಾವನ್ನು ಮತ್ತೊಂದು ಚಿಂಪಾಂಜಿಯ ಮೈಮೇಲೆ ಎಸೆದಾಗ ಭಯದಿಂದ ಜಿಗಿಯುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ. ಹಾವು ಕಂಡರೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಭಯ ಇದೆ ಎಂಬುದನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.
ಮೃಗಾಲಯದಲ್ಲಿ ಮೂರು ಚಿಂಪಾಂಜಿಗಳಿರುವ ಪ್ರದೇಶಕ್ಕೆ ಹಾವು ಬರುತ್ತದೆ. ಇದನ್ನು ನೋಡಿದ ಚಿಂಪಾಂಜಿಗಳು ಅದನ್ನು ಓಡಿಸುವ ಪ್ರಯತ್ನ ಮಾಡುತ್ತವೆ. ಇದ್ದಿದ್ದರಲ್ಲಿ ಸಣ್ಣ ಚಿಂಪಾಂಜಿಯೊಂದು ಮಾಡಿದ ಕಿತಾಪತಿಗೆ ವಯಸ್ಕ ಜಿಂಪಾಂಜಿಯು ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವಂತಾಯಿತು. ಅಷ್ಟಕ್ಕೂ ಆಗಿದ್ದೇನೆಂದರೆ, ಕಿತಾಪತಿ ಚಿಂಪಾಂಜಿಯು ಹಾವನ್ನು ಹಿಡಿದು ಹಿಂದಕ್ಕೆ ಎಸೆದಾಗ ಹಿಂದೆ ಇದ್ದ ವಯಸ್ಕ ಚಿಂಪಾಂಜಿಯ ಮೇಲೆ ಬೀಳುತ್ತದೆ. ಈ ವೇಳೆ ಅದು ಭಯದಿಂದ ಹಾವು ತನ್ನ ಮೈಮೇಲೆ ಬೀಳುವುದನ್ನು ತಪ್ಪಿಸಲು ಜಿಗಿಯುದು ಕಿರುಚಾಡಿ ಒಂದಷ್ಟು ದೂರಕ್ಕೆ ಓಡುತ್ತದೆ. ನಂತರ ಹಾವು ಎಸೆದ ಕಿತಾಪತಿ ಜಿಂಪಾಂಜಿ ಹಾವಿಗೆ ಕೈಯಲ್ಲಿ ಹೊಡೆಯಲು ಮುಂದಾಗುತ್ತದೆ. ಈ ವೇಳೆ ವಯಸ್ಕ ಚಿಂಪಾಂಜಿಯೂ ಹಾವನ್ನು ಓಡಿಸುತ್ತದೆ. ಕೊನೆಯಲ್ಲಿ ಹಾವು ನೀರಿಗೆ ಹೋಗುವ ಮೂಲಕ ವಿಡಿಯೋ ಮುಕ್ತಾಯಗೊಳ್ಳುತ್ತದೆ.
ಈ ವಿಡಿಯೋವನ್ನು ಸಂತೋಷ್ ಸಾಗರ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾವು ಕಂಡರೆ ಮನುಷ್ಯರಿಗೆ ಮಾತ್ರವಲ್ಲ ಭಯವಲ್ಲ ಎಂದು ಶೀರ್ಷಿಕೆ ಬರೆದಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಆಗಿವೆ.
Fear of snakes is not only in humans???@susantananda3 @rupin1992 pic.twitter.com/94qMbvQZTu
— Santosh Sagar (@santoshsaagr) September 14, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sun, 18 September 22