AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಲಕಿ ಡಾನ್ಸ್ ಮಾಡಿದ್ದನ್ನು ನೋಡಿದ ಆನೆ ಮಾಡಿದ್ದೇನು ಗೊತ್ತಾ?

ಬಾಲಕಿಯೊಬ್ಬಳು ಆನೆ ಮುಂದೆ ನಿಂತುಕೊಂಡು ನೃತ್ಯ ಮಾಡಿದ್ದಾಳೆ. ಇದನ್ನು ಕಂಡ ಆ ಆನೆ ಸಖತ್ ಆಗಿಯೇ ರೆಸ್ಪಾನ್ಸ್ ಮಾಡಿದೆ. ಬಾಲಕಿಯ ಕ್ರಿಯೆಗೆ ಆನೆ ನೀಡಿದ ಪ್ರತಿಕ್ರಿಯೆಯ ವಿಡಿಯೋ ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿದೆ.

Viral Video: ಬಾಲಕಿ ಡಾನ್ಸ್ ಮಾಡಿದ್ದನ್ನು ನೋಡಿದ ಆನೆ ಮಾಡಿದ್ದೇನು ಗೊತ್ತಾ?
ಡಾನ್ಸ್ ಮಾಡುವಾಗ ಬಾಲಕಿಯನ್ನು ಅನುಕರಣೆ ಮಾಡಿದ ಆನೆ
TV9 Web
| Updated By: Rakesh Nayak Manchi|

Updated on:Sep 18, 2022 | 10:15 AM

Share

ವೀಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ಪ್ರಾಣಿಗಳ ವರ್ತನೆಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದಕ್ಕೆ ಸಂಬಂಧಿಸಿದ ಅನೇಕ ರೀತಿಯ ವಿಡಿಯೋಗಳು ಹರಿದಾಡಿದ್ದು, ಈಗಾಗಲೇ ನೀವು ಅವುಗಳಲ್ಲಿ ಹಲವು ವಿಡಿಯೋಗಳನ್ನು ವೀಕ್ಷಿಸಿರುತ್ತೀರಿ. ಆದರೆ ರಜಾ ದಿನವಾದ ಇಂದು ವಿಶ್ರಾಂತಿ ಪಡೆಯುತ್ತಿರುವ ನಿಮ್ಮ ಮನಸ್ಸನ್ನು ಖುಷಿಯಾಗಿಸುವಂತೆ ಮಾಡುವ ವಿಡಿಯೋವೊಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಬಾಲಕಿ ಡಾನ್ಸ್ ಮಾಡುವಾಗ ಆನೆಯೂ ಅನುಕರಣೆ ಮಾಡುವುದನ್ನು ಈ ವೈರಲ್ ವಿಡಿಯೋ (Viral Video)ದಲ್ಲಿ ಕಾಣಬಹುದಾಗಿದೆ.

ವೈರಲ್ ವಿಡಿಯೋದಲ್ಲಿ ಮಾವುತನೊಂದಿಗೆ ದೈತ್ಯ ಆನೆ ಮತ್ತು ಸಣ್ಣ ಬಾಲಕಿಯನ್ನು ಕಾಣಬಹುದು. ಆನೆ ಮುಂದೆ ನಿಂತುಕೊಂಡ ಬಾಲಕಿ ನೃತ್ಯದ ಹೆಜ್ಜೆಗಳನ್ನು ಹಾಕುತ್ತಾಳೆ. ಈ ವೇಳೆ ಬಾಲಕಿಯನ್ನು ನೋಡಿದ ಆನೆ ಖುಷಿಯಲ್ಲಿ ಅದುಕೂಡ ಅನುಕರಣೆಗೆ ಮುಂದಾಗುತ್ತದೆ. ಅದರಂತೆ ಆನೆಯೂ ತಲೆ ಅಲ್ಲಾಡಿಸುವುದನ್ನು ವಿಡಿಯೋದನ್ನು ನೋಡಬಹುದು.

ಐಪಿಎಸ್ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಯಾರು ಉತ್ತಮವಾಗಿ ಮಾಡಿದರು?” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋವನ್ನು ಶನಿವಾರ ಹಂಚಿಕೊಳ್ಳಲಾಗಿದ್ದು, ಕೆಲವೇ ಗಂಟೆಗಳಲ್ಲಿ 15ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸದ್ಯ ಇದರ ಸಂಖ್ಯೆ 27 ಸಾವಿರಕ್ಕೂ ಹೆಚ್ಚು ದಾಟಿದ್ದು, ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ವಿಡಿಯೋ ನೋಡಿದ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಎರಡೂ ಚೆನ್ನಾಗಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಈ ವಿಡಿಯೋ ನನ್ನನ್ನು ಫ್ರೆಶ್ ಮಾಡುತ್ತಿದೆ” ಎಂದಿದ್ದಾರೆ.

ಇತ್ತೀಚೆಗೆ ಭಾರತೀಯ ಅರಣ್ಯ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆನೆಗಳನ್ನು ಅರಣ್ಯಗಳ ಸಿವಿಲ್ ಇಂಜಿನಿಯರ್‌ಗಳು ಎಂದು ಉಲ್ಲೇಖಿಸಿದ್ದಾರೆ. ಏಕೆಂದರೆ ಅವುಗಳ ಕಾಲ್ನಡಿಗೆಗಳು ಪೊದೆಯಲ್ಲಿ ರಸ್ತೆಮಾರ್ಗಗಳನ್ನು ಸೃಷ್ಟಿಸುತ್ತವೆ.

“ನಿಮಗೆ ಗೊತ್ತಾ ಆನೆಗಳು ಕಾಡಿನ ಸಿವಿಲ್ ಇಂಜಿನಿಯರ್‌ಗಳು, ಅವು ತಮ್ಮ ಹೆಜ್ಜೆಗಳ ಮೂಲಕ ರಸ್ತೆಗಳನ್ನು ನಿರ್ಮಿಸುತ್ತವೆ. ಅವುಗಳು ನಡೆದು ನದಿಗಳನ್ನು ನಿರ್ಮಿಸುತ್ತವೆ. ಅವು ಪುನರುತ್ಪಾದನೆಯಲ್ಲಿ ಸಹಾಯ ಮಾಡುವ ಮತ್ತು ಮಣ್ಣಿನ ಸವಕಳಿಯನ್ನು ಪರೀಕ್ಷಿಸಲು ಸಹಾಯ ಮಾಡುವ ರೈತರು, ಪ್ರಾಚೀನ ಭಾರತದಲ್ಲಿ ಅವುಗಳು ದೇವಾಲಯಗಳನ್ನು ನಿರ್ಮಿಸುವವರಾಗಿದ್ದರು” ಎಂದು ಶೀರ್ಷಿಕೆ ಬರೆದಿದ್ದರು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 10:15 am, Sun, 18 September 22