AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರನ್ನು ನೆನಪಿಸುವಂತಿದೆ ಈ ವೈರಲ್ ವಿಡಿಯೋ

ಈ ವೈರಲ್ ವಿಡಿಯೋವನ್ನು ನೀವು ನೋಡಿದಾಗ ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರ ನೆನಪು ಆಗುವ ಸಾಧ್ಯತೆ ಇದೆ. ಯಾವುದಕ್ಕೂ ಒಮ್ಮೆ ವೀಕ್ಷಣೆ ಮಾಡಿನೋಡಿ.

Viral Video: ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರನ್ನು ನೆನಪಿಸುವಂತಿದೆ ಈ ವೈರಲ್ ವಿಡಿಯೋ
ಹಾವಿನ ಭಯಕ್ಕೆ ಜಿಗಿದ ಚಿಂಪಾಂಜಿಗಳು
TV9 Web
| Edited By: Rakesh Nayak Manchi|

Updated on:Sep 18, 2022 | 12:36 PM

Share

ಹುಡುಗಿಯರು ತಮ್ಮ ಮೈ ಮೇಲೆ ಜಿರಳೆ, ಹಲ್ಲಿ ಬಿದ್ದಾಗ ಕಿರುಚಾಡುತ್ತಾ ಕುಣಿದು ಕುಪ್ಪಳಿಸಿ  ಅದನ್ನು ಎಸೆಯುವ ಶೈಲಿ ನೋಡಿರುತ್ತೀರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವು ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರನ್ನು ನೆನಪಿಸುವಂತಿದೆ. ಆದರೆ ವಿಡಿಯೋದಲ್ಲಿ ಜಿರಳೆಯ ಬದಲು ಹಾವನ್ನು ನೋಡಬಹುದು. ಕಿತಾಪತಿ ಚಿಂಪಾಂಜಿಯೊಂದು ಹಾವನ್ನು ಮತ್ತೊಂದು ಚಿಂಪಾಂಜಿಯ ಮೈಮೇಲೆ ಎಸೆದಾಗ ಭಯದಿಂದ ಜಿಗಿಯುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ. ಹಾವು ಕಂಡರೆ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಭಯ ಇದೆ ಎಂಬುದನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಮೃಗಾಲಯದಲ್ಲಿ ಮೂರು ಚಿಂಪಾಂಜಿಗಳಿರುವ ಪ್ರದೇಶಕ್ಕೆ ಹಾವು ಬರುತ್ತದೆ. ಇದನ್ನು ನೋಡಿದ ಚಿಂಪಾಂಜಿಗಳು ಅದನ್ನು ಓಡಿಸುವ ಪ್ರಯತ್ನ ಮಾಡುತ್ತವೆ. ಇದ್ದಿದ್ದರಲ್ಲಿ ಸಣ್ಣ ಚಿಂಪಾಂಜಿಯೊಂದು ಮಾಡಿದ ಕಿತಾಪತಿಗೆ ವಯಸ್ಕ ಜಿಂಪಾಂಜಿಯು ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವಂತಾಯಿತು. ಅಷ್ಟಕ್ಕೂ ಆಗಿದ್ದೇನೆಂದರೆ, ಕಿತಾಪತಿ ಚಿಂಪಾಂಜಿಯು ಹಾವನ್ನು ಹಿಡಿದು ಹಿಂದಕ್ಕೆ ಎಸೆದಾಗ ಹಿಂದೆ ಇದ್ದ ವಯಸ್ಕ ಚಿಂಪಾಂಜಿಯ ಮೇಲೆ ಬೀಳುತ್ತದೆ. ಈ ವೇಳೆ ಅದು ಭಯದಿಂದ ಹಾವು ತನ್ನ ಮೈಮೇಲೆ ಬೀಳುವುದನ್ನು ತಪ್ಪಿಸಲು ಜಿಗಿಯುದು ಕಿರುಚಾಡಿ ಒಂದಷ್ಟು ದೂರಕ್ಕೆ ಓಡುತ್ತದೆ. ನಂತರ ಹಾವು ಎಸೆದ ಕಿತಾಪತಿ ಜಿಂಪಾಂಜಿ ಹಾವಿಗೆ ಕೈಯಲ್ಲಿ ಹೊಡೆಯಲು ಮುಂದಾಗುತ್ತದೆ. ಈ ವೇಳೆ ವಯಸ್ಕ ಚಿಂಪಾಂಜಿಯೂ ಹಾವನ್ನು ಓಡಿಸುತ್ತದೆ. ಕೊನೆಯಲ್ಲಿ ಹಾವು ನೀರಿಗೆ ಹೋಗುವ ಮೂಲಕ ವಿಡಿಯೋ ಮುಕ್ತಾಯಗೊಳ್ಳುತ್ತದೆ.

ಈ ವಿಡಿಯೋವನ್ನು ಸಂತೋಷ್ ಸಾಗರ್ ಎಂಬವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾವು ಕಂಡರೆ ಮನುಷ್ಯರಿಗೆ ಮಾತ್ರವಲ್ಲ ಭಯವಲ್ಲ ಎಂದು ಶೀರ್ಷಿಕೆ ಬರೆದಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಆಗಿವೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Sun, 18 September 22

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ