Viral Video : ಕೊಟ್ಟಿಗೆಯಲ್ಲಿ ಕಾಡುವ ಸೊಳ್ಳೆಗಳಿಗಾಗಿ ಹೀಗೊಂದು ದೇಸೀ ಉಪಾಯ
Desi Indian Jugaad : ಅನಿವಾರ್ಯತೆ, ಸೌಲಭ್ಯಗಳ ಕೊರತೆ ಇದ್ದಲ್ಲಿ ಹೊಸ ಅನ್ವೇಷಣೆಗಳು ಯಾವಾಗಲೂ ಚಾಲ್ತಿಯಲ್ಲಿರುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
Viral Video : ಹಸುವಿನ ಕೊಟ್ಟಿಗೆಯಲ್ಲಿ ಸೊಳ್ಳೆಗಳನ್ನು ಓಡಿಸಲು ಹಳ್ಳಿಗೊರೊಬ್ಬರು ಕಂಡುಕೊಂಡು ಈ ದೇಸೀ ತಂತ್ರವುಳ್ಳ ವಿಡಿಯೋ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ. ಎಲ್ಲಿ ಅನಿವಾರ್ಯತೆ ಮತ್ತು ಸೌಲಭ್ಯಗಳ ಕೊರತೆ ಇರುತ್ತದೆಯೋ ಅಲ್ಲಿಯೇ ಹೀಗೆ ಹೊಸಹೊಸ ಆಲೋಚನೆ, ಪ್ರಯೋಗಗಳು ಹುಟ್ಟಿಕೊಳ್ಳುವುದು. ಈ ವಿಡಿಯೋದಲ್ಲಿ ಹಸುಗಳು ತಮ್ಮ ಪಾಡಿಗೆ ಕೊಟ್ಟಿಗೆಯಲ್ಲಿ ಮೇಯುತ್ತಿವೆ. ಇತ್ತ ಬೇವಿನಸೊಪ್ಪಿನ ಹೊಗೆ ಹಾಕಿ ಅದರ ಪಕ್ಕದಲ್ಲಿ ಟೇಬಲ್ ಫ್ಯಾನ್ ಇರಿಸಲಾಗಿದೆ. ಆ ಫ್ಯಾನ್ಗಾಳಿಯಿಂದ ಹೊಗೆ ಕೊಟ್ಟಿಗೆ ಪೂರ್ತಿ ಹರಡಿ ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆನಂತರ ರೆಡ್ಡಿಟ್ನಲ್ಲಿ ಶುಕ್ರವಾರದಂದು ಮರುಪೋಸ್ಟ್ಗೊಂಡಿದೆ. ರೆಡ್ಡಿಟ್ ಖಾತೆದಾರರು, ಪ್ರಾಣಿಗಳ ರಕ್ಷಣೆಗೆ ಇಂಥ ದೇಸೀ ಉಪಾಯ ಕಂಡುಕೊಂಡ ಹಳ್ಳಿಗರನ್ನು ಪ್ರಶಂಸಿಸಿದ್ದಾರೆ.
‘ಎಂಥ ಪ್ರತಿಭಾವಂತ ಜನರು ನಮ್ಮಲ್ಲಿದ್ದಾರೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಸೃಜನಶೀಲತೆಗೆ ಇದೊಂದು ಉತ್ತಮ ಮಾದರಿ’ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ಈ ದೇಸೀ ಜುಗಾಡ್ ನನಗೆ ಬಹಳ ಇಷ್ಟವಾಯಿತು’ ಎಂದು ಮಗದೊಬ್ಬರು ಹೇಳಿದ್ದಾರೆ. ‘ಈ ಕಲ್ಪನೆಯೇ ಅದ್ಭುತ’ ಎಂದು ಇನ್ನೊಬ್ಬರು ಹೇಳಿದ್ದಾರೆ.
ಸೃಜನಶೀಲ ಮತ್ತು ರಚನಾತ್ಮಕ ಪ್ರಯೋಗಗಳಿಗೆ ಯಾವತ್ತೂ ಮನ್ನಣೆ ಇದ್ದೇ ಇದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ