AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೇಗಿದೆ ಈ ಬೆಕ್ಕಿನ ಸ್ಪೆಷಲ್ ‘ಬ್ಯಾಗ್​ಲಿಫ್ಟ್​’

Cat Lover : ಅಪಾರ್ಟ್​ಮೆಂಟ್​, ಅಥವಾ ಮಹಡಿಮನೆಗಳಲ್ಲಿ ಸಾಕಿರುವ ಬೆಕ್ಕುಗಳು ಸಾಮಾನ್ಯವಾಗಿ ಲಿಫ್ಟ್​ನಲ್ಲಿ ಓಡಾಡುವುದನ್ನು ನೋಡಿದ್ದೀರಿ. ಆದರೆ, ಈ ಬೆಕ್ಕು ಮಾತ್ರ ತನಗಾಗಿಯೇ ಸ್ಪೆಷಲ್​ ಲಿಫ್ಟ್​ ಮಾಡಿಸಿಕೊಂಡಿದೆ! ನೋಡಿ ವಿಡಿಯೋ.

Viral Video : ಹೇಗಿದೆ ಈ ಬೆಕ್ಕಿನ ಸ್ಪೆಷಲ್ ‘ಬ್ಯಾಗ್​ಲಿಫ್ಟ್​’
‘ಇರಿ ಈ ಚೀಲದೊಳಗೆ ಕೂತ್ಕೋಳ್ತೀನಿ’
TV9 Web
| Edited By: |

Updated on:Sep 17, 2022 | 3:25 PM

Share

Viral Video : ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಇನ್​ಸ್ಟಾಗ್ರಾಂನ ಪುಟಗಳಲ್ಲಿ ಸಾಕುಪ್ರಾಣಿಗಳ ವಿಡಿಯೋ ಪೋಸ್ಟ್ ಆಗುತ್ತಿರುತ್ತವೆ. ಅದರಲ್ಲೂ ಬೆಕ್ಕಿನ ವಿಡಿಯೋ ನೋಡುವುದೇ ಒಂದು ಖುಷಿ, ಉಲ್ಲಾಸ. ಇತ್ತೀಚೆಗೆ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮೇಲ್​ಮಹಡಿಯಲ್ಲಿರುವ ತನ್ನ ಮನೆಗೆ ಹೋಗಲು ಈ ಬೆಕ್ಕು ಏನು ಉಪಾಯ ಕಂಡುಕೊಂಡಿದೆ ನೋಡಿ. ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಅನ್ನು ಶನಿವಾರದಂದು ಇನ್​ಸ್ಟಾಗ್ರಾಂನಲ್ಲಿ ಮರುಹಂಚಿಕೆ ಮಾಡಲಾದ ನಂತರ ಸಾಕಷ್ಟು ಜನರನ್ನು ಆಕರ್ಷಿಸಿದೆ. ಕಾಂಪೌಂಡ್​ಮೇಲೆ ನಡೆದುಕೊಂಡು ಬರುವ ಈ ಬೆಕ್ಕು ತನ್ನ ಮುಂದೆ ಇಳಿಬಿಟ್ಟ ಚೀಲದೊಳಗೆ ನಿರಾಯಾಸವಾಗಿ ಕುಳಿತುಕೊಳ್ಳುತ್ತದೆ. ಮೇಲಿನಿಂದ ಅದರ ಪೋಷಕರು ಅದನ್ನು ಎತ್ತಿಕೊಳ್ಳುತ್ತಾರೆ. ಬಹುಶಃ ಇದು ಇವರ ನಿತ್ಯದಾಟ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Nextdoor (@nextdoor)

ಈಗಾಗಲೇ 35,000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 2,300 ಜನರು ಇದನ್ನು ಮೆಚ್ಚಿದ್ದಾರೆ. ಬೆಕ್ಕುಪ್ರಿಯರು ಈ ವಿಡಿಯೋಕ್ಕೆ ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಎಂಥ ಮುದ್ದಾಗಿದೆ’ ಎಂದು ಕೊಂಡಾಡಿದ್ದಾರೆ ಅನೇಕರು. ‘ಅಪಾರ್ಟ್​ಮೆಂಟ್​ನಲ್ಲಿ ವಾಸಿಸುವ ಈ ಬೆಕ್ಕು ಓಡಾಡಲು ಒಳ್ಳೆಯ ಉಪಾಯ ಹೂಡಿಕೊಂಡಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಗರಪ್ರದೇಶಗಳಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಮಕ್ಕಳನ್ನು ನೋಡಿಕೊಳ್ಳುವುದಕ್ಕಿಂತಲೂ ಕಠಿಣ! ಒಂದು ಹಂತದ ನಂತರ ಮಕ್ಕಳು ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ ಸ್ವಯಂ ಕಾಳಜಿಯನ್ನೂ ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಹಾಗಲ್ಲ. ಕೊನೆತನಕವೂ ಅವುಗಳನ್ನು ಮಕ್ಕಳಂತೆಯೇ ನೋಡಿಕೊಳ್ಳಬೇಕು. ಹಾಗಾಗಿ ಮಹಾನಗರ, ನಗರ ಪ್ರದೇಶಗಳಲ್ಲಿ ನಾಯಿ ಬೆಕ್ಕು ಸಾಕುವುದು ಸವಾಲೇ. ಆದ್ದರಿಂದ ಬೆಕ್ಕಿನ ಪೋಷಕರು ಇಂಥ ಕಂಡುಕೊಳ್ಳುವುದು ಅನಿವಾರ್ಯ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:21 pm, Sat, 17 September 22