Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ
Earning Sense : ಮಳೆ ಬರುತ್ತಿದೆ ಎಂದು ಎಲ್ಲೋ ಒಂದು ಕಡೆ ಕೈಕಟ್ಟಿ ನಿಲ್ಲಬಹುದಿತ್ತಿಲ್ಲವೆ? ಆದರೆ ಹಾಗೆ ಮಾಡದೆ ಆ ಸಮಯವನ್ನೂ ಹಣಗಳಿಕೆಯ ಉಪಾಯದಂತೆ ಪರಿವರ್ತಿಸಿಕೊಂಡಿದ್ದಾರೆ ಈ ವ್ಯಕ್ತಿ. ವಿಡಿಯೋ ನೋಡಿ.
Viral Video : ಇತ್ತೀಚೆಗೆ ಬೆಂಗಳೂರು ಮಳೆಯಿಂದಾಗಿ ಜಲಾವೃತಗೊಂಡಾಗ ಜನರು ಬೀದಿಯಿಂದ ಬೀದಿಗೆ ಸಂಚರಿಸಲು ಟ್ರ್ಯಾಕ್ಟರ್, ಬುಲ್ಡೋಜರ್ಗಳ ಮೊರೆ ಹೋಗಿರುವ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಮಳೆ ಎನ್ನುವುದು ಏನೆಲ್ಲ ಅಪಾಯ, ಉಪಾಯಕ್ಕೆ ನಾಂದಿ ಹಾಡುತ್ತದೆ ಅಲ್ಲವೆ? ಈಗಿಲ್ಲಿ ಈ ವಿಡಿಯೋದಲ್ಲಿರುವ ವ್ಯಕ್ತಿ, ನಿಂತಲ್ಲೇ ಹೀಗೊಂದು ‘ಅರ್ಥ’ಪೂರ್ಣ ಉಪಾಯ ಕಂಡುಕೊಂಡಿದ್ದಾರೆ. ಪಾದಚಾರಿ ಮಹಿಳೆಯರಿಬ್ಬರು ರಸ್ತೆ ದಾಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ವ್ಯಕ್ತಿ ಮರದಗಾಡಿಯೊಂದನ್ನು ತರುತ್ತಾರೆ. ಆಗ ಅವರಿಬ್ಬರೂ ಅದರ ಮೇಲೆ ಏರಿ ನಿಲ್ಲುತ್ತಾರೆ. ವ್ಯಕ್ತಿ ಗಾಡಿಯನ್ನು ತಳ್ಳಿ ಅವರನ್ನು ರಸ್ತೆ ದಾಟಿಸಿ, ಅವರಿಂದ ಹಣ ಪಡೆಯುತ್ತಾರೆ. ಇದನ್ನು ನೋಡಿದ ಉಳಿದ ಪಾದಚಾರಿಗಳೂ ಈ ವ್ಯಕ್ತಿಯ ಸಹಾಯ ಪಡೆಯುತ್ತಾ ಹೋಗುತ್ತಾರೆ; ಅನಿವಾರ್ಯತೆಗೆ ತಕ್ಕಂತೆ ಆಲೋಚಿಸುತ್ತಾ ಹೋದಾಗ ಇಂಥ ಕ್ರಿಯಾತ್ಮಕ ಉಪಾಯಗಳು ಖಂಡಿತ ಹೊಳೆಯುತ್ತವೆ ಎನ್ನುವುದಕ್ಕೆ ಮಾದರಿ ಈ ವಿಡಿಯೋ.
To earn money during inconvenience . from Damnthatsinteresting
ಗುರುವಾರದಂದು ಸಾಮಾಜಿಕ ಮಾಧ್ಯಮ, ರೆಡ್ಡಿಟ್‌ನಲ್ಲಿ BAlfonzo ಎಂಬ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹರಿಯುವ ನೀರಿನಲ್ಲಿ ಬರಿಗಾಲಿನಲ್ಲಿ ಓಡುತ್ತ ಪಾದಚಾರಿಗಳನ್ನು ಆ ಬದಿಗೆ ತಲುಪಿಸುತ್ತಾರೆ ಈ ವ್ಯಕ್ತಿ. ಪಡೆದ ಹಣವನ್ನಿಟ್ಟುಕೊಳ್ಳಲು ಈತ ಮಾಡಿದ ಉಪಾಯ ಗಮನಿಸಿದಿರಾ?; ಪ್ಲಾಸ್ಟಿಕ್ ಬಾಟಲಿ!
ಈ ವಿಡಿಯೋ ಒಂದು ದಿನದಲ್ಲಿ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. 800 ಕ್ಕೂ ಹೆಚ್ಚು ರೆಡ್ಡಿಟ್ ಖಾತೆದಾರರು ಈ ವಿಡಿಯೋ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಾರೆ.
‘ವ್ಯವಹಾರದ ಮೊದಲ ನಿಯಮ; ಅಗತ್ಯವನ್ನು ಕಂಡುಕೊಂಡು ಅದರಲ್ಲಿ ತೊಡಗಿಕೊಳ್ಳಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ‘ವ್ಯವಹಾರದ ಎರಡನೇ ನಿಯಮ; ಸಮಸ್ಯೆಯನ್ನು ಸೃಷ್ಟಿಸಿ, ಪರಿಹಾರವನ್ನು ಮಾರಾಟರೂಪಕ್ಕೆ ತಿರುಗಿಸಿಕೊಳ್ಳಿ (ಈ ಪರಿಸ್ಥಿತಿಗೆ ಇದು ಅನ್ವಯಿಸುವುದಿಲ್ಲ)’ ಎಂದಿದ್ದಾರೆ. ಹೀಗೆ ಅನೇಕರು ವ್ಯವಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತಿಕ್ರಿಯೆಗಳ ಮೂಲಕ ಪ್ರಸ್ತಾಪಿಸುತ್ತಾ ಚರ್ಚಿಸಿರುವುದು ಆಸಕ್ತಿಕರವಾಗಿದೆ.
ಮೈಚಳಿಬಿಟ್ಟರೆ ಬದುಕಲು ನೂರೆಂಟು ಉಪಾಯಗಳು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:05 pm, Sat, 17 September 22