AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre Shark: ಅಬ್ಬಾ! ಭಯಂಕರ ರೂಪದ ಈ ಶಾರ್ಕ್​ ನೋಡುವಾಗ ಭಯ ಹುಟ್ಟುತ್ತೆ

ಅಬ್ಬಾ! ಈ ಶಾರ್ಕ್​ನ ದೇಹದ ಆಕಾರ ಹಾಗೂ ಭಾಗಗಳನ್ನು ನೋಡಿದರೆ ಭಯವಾಗುತ್ತದೆ. ಈ ಶಾರ್ಕ್ ಅನ್ನು ಆಸ್ಟ್ರೆಲಿಯಾದ ಮೀನುಗಾರರೊಬ್ಬರು ಹಿಡಿದಿದ್ದು, ಇದರ ಫೋಟೋ ವೈರಲ್ ಆಗುತ್ತಿದೆ.

Bizarre Shark: ಅಬ್ಬಾ! ಭಯಂಕರ ರೂಪದ ಈ ಶಾರ್ಕ್​ ನೋಡುವಾಗ ಭಯ ಹುಟ್ಟುತ್ತೆ
ವಿಚಿತ್ರ ಶಾರ್ಕ್ ಹಿಡಿದ ಆಸ್ಟ್ರೇಲಿಯಾದ ಮೀನುಗಾರ
TV9 Web
| Updated By: Rakesh Nayak Manchi|

Updated on:Sep 18, 2022 | 3:02 PM

Share

ಪ್ರಪಂಚವು ರಹಸ್ಯಗಳಿಂದ ತುಂಬಿದ್ದು, ಮಾನವರು ಇನ್ನೂ ನಿಸರ್ಗದ ಗುಪ್ತ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ವಿಚಿತ್ರ ಘಟನೆಗಳನ್ನು ಕಂಡರೆ, ಕೆಲವೊಮ್ಮೆ ಹಿಂದೆಂದು ನೋಡಿರದ ವಿಚಿತ್ರವಾಗಿರುವುದನ್ನು ಕಾಣುತ್ತೇವೆ. ಇದೀಗ ಅಂತಹ ವಿಚಿತ್ರವಾದುದೊಂದನ್ನು ಆಸ್ಟ್ರೇಲಿಯಾದ ಮೀನುಗಾರರೊಬ್ಬರು ನೋಡಿ ಅಚ್ಚರಿಗೊಂಡಿದ್ದಾರೆ. ಹಿಂದೆಂದು ನೋಡಿರದ, ಹೀಗೂ ಒಂದು ಇರಬಹುದು ಎಂದು ಭಾವಿಸಿರದ ಶಾರ್ಕ್​ ಅನ್ನು ಮೀನುಗಾರ ನೋಡಿದ್ದು, ಇದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದ ನೆಟ್ಟಿಗರು ಅದರ ರೂಪವನ್ನು ನೋಡಿ ಅಚ್ಚರಿಗೊಂಡಿದ್ದಾರೆ.

ಸಿಡ್ನಿಯ ಮೀನುಗಾರ ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆಳ ಸಮುದ್ರದಿಂದ ಹಿಡಿದ ವಿಚಿತ್ರ ಶಾರ್ಕ್‌ನ  ಫೋಟೋವನ್ನು ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸಿಡ್ನಿ ಮೂಲದ ಮೀನುಗಾರ ಟ್ರೇಸ್‌ಮ್ಯಾನ್ ಬೆರ್ಮಗುಯಿ, ಭಯಂಕರವಾಗಿ ಕಾಣುವ ಶಾರ್ಕ್ ಅನ್ನು ಹಿಡಿದಿದ್ದಾರೆ. 2,133 ಅಡಿ (650 ಮೀಟರ್) ಆಳದಲ್ಲಿ ಬಲೆಗೆ ಸಿಕ್ಕಿಬಿದ್ದಿದೆ.

“ಆಳ ಸಮುದ್ರದಲ್ಲಿನ ಒರಟು ಚರ್ಮದ ಶಾರ್ಕ್‌ನ ಮುಖ. 650 ಮೀ. ಅಡಿಯಿಂದ ಹಿಡಿಯಲಾಗಿದೆ ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಶಾರ್ಕ್ ನೋಡಲು ವಿಚಿತ್ರವಾಗಿದ್ದು, ಚಾಚಿಕೊಂಡಿರುವ ಬಿಳಿ ಬಾಯಿ, ಚೂಪಾದ ಹಲ್ಲುಗಳು, ಮೊನಚಾದ ಮೂಗು ಮತ್ತು ದೊಡ್ಡ ಉಬ್ಬು ಕಣ್ಣುಗಳು ಇದ್ದು, ನೋಡುವಾಗ ಭೀತಿಗೊಳಿಸುತ್ತದೆ.

ಫೋಟೋವನ್ನು ಹಂಚಿಕೊಂಡ ನಂತರ ವೈರಲ್ ಪಡೆದುಕೊಂಡಿದ್ದು, ಒಂದುಷ್ಟು ಮಂದಿ ಶಾರ್ಕ್​ನ ಜಾತಿಯನ್ನು ಗುರುತಿಸಲು ಯತ್ನಿಸಿದ್ದಾರೆ. ಕೆಲವರು ಇದು ದೆವ್ವದ ಪುನರ್ಜನ್ಮ ಎಂದು ಹೇಳಿದರೆ, ಇತರರು ವೈಜ್ಞಾನಿಕ ವಿಧಾನದ ಬಗ್ಗೆ ತಿಳಿಸಿದರು. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಕರಾವಳಿ ಮತ್ತು ಸಾಗರ ಪ್ರಯೋಗಾಲಯದ ಸಹಾಯಕ ಸಂಶೋಧನಾ ನಿರ್ದೇಶಕ ಡೀನ್ ಗ್ರಬ್ಸ್ ಅವರು ಇದನ್ನು ಒರಟು ಚರ್ಮದ ನಾಯಿಮೀನು ಶಾರ್ಕ್ ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Sun, 18 September 22