ನಾಲ್ಕು ವರ್ಷದ ಮಗುವಿಗೆ ಕಚ್ಚಿದ 30 ಸೆಕೆಂಡ್​ಗಳಲ್ಲಿ ಸಾವನ್ನಪ್ಪಿದ ಹಾವು! ಇದು ಸಾಧ್ಯವೇ? ಇಲ್ಲಿದೆ ಮಾಹಿತಿ

ಮಗುವಿಗೆ ಕಚ್ಚಿದ ನಂತರ ನಾಗರಹಾವು ಸಾವನ್ನಪ್ಪಿದೆ ಎನ್ನಲಾಗುವ ವಿಡಿಯೋ ವೈರಲ್ ಆಗುತ್ತಿದೆ. ಹೌದಾ? ಇದು ಸಾಧ್ಯವೇ? ವೈರಲ್ ವಿಡಿಯೋದ ಹಿಂದಿನ ಅಸಲಿಯತ್ತೇನು? ಇಲ್ಲಿದೆ ನೋಡಿ ಮಾಹಿತಿ.

ನಾಲ್ಕು ವರ್ಷದ ಮಗುವಿಗೆ ಕಚ್ಚಿದ 30 ಸೆಕೆಂಡ್​ಗಳಲ್ಲಿ ಸಾವನ್ನಪ್ಪಿದ ಹಾವು! ಇದು ಸಾಧ್ಯವೇ? ಇಲ್ಲಿದೆ ಮಾಹಿತಿ
4 ವರ್ಷದ ಮಗು ಮತ್ತು ಸಾವನ್ನಪ್ಪಿದ ಹಾವು
Updated By: Rakesh Nayak Manchi

Updated on: Jun 23, 2022 | 5:47 PM

ವೈರಲ್ ವಿಡಿಯೋದ ಅಸಲಿಯತ್ತು: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಾಲ್ಕು ವರ್ಷದ ಮಗುವನ್ನು ಕಚ್ಚಿದ ನಂತರ ವಿಷಪೂರಿತ ಹಾವು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, ಬಾಲಕ ಹೊಲದಲ್ಲಿ ಆಡುತ್ತಿದ್ದಾಗ ಹಾವು ಕಚ್ಚಿದ್ದು, ನಂತರದ 30 ಸೆಕೆಂಡ್​ಗಳಲ್ಲಿ ನಾಗರಹಾವು ಸಾವನ್ನಪ್ಪಿದೆ. ಈ ಸುದ್ದಿ ತಿಳಿದ ಸ್ಥಳೀಯರು ಹಾವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಇದನ್ನೂ ಓದಿ: Viral Video: ರಸ್ತೆ ಮಧ್ಯೆ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು! ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ

ಮಕ್ಕಳು ಹೊದಲ್ಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮಗುವಿಗೆ ನಾಗರಹಾವು ಕಚ್ಚಿದೆ. ಕೂಡಲೇ ಮಗು ತನ್ನ ಮನೆಯವರಿಗೆ ಮಾಹಿತಿ ನೀಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜನರು ಹಾವನ್ನು ಕೋಲುಗಳಿಂದ ಹೊಡೆದು ಕೊಲ್ಲಲು ಹೋದಾಗ ಹಾವು ತಾನಾಗಿಯೇ ಸಾವನ್ನಪ್ಪಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ: Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್

ಇದು ನಿಜವೇ? ಇದರ ಹಿಂದಿನ ಸತ್ಯವೇನು?

ಮಗುವಿಗೆ ಕಚ್ಚಿ ಹಾವು ಸಾವನ್ನಪ್ಪಿದ ಘಟನೆ ಬಗ್ಗೆ ಪರಿಶೀಲಿಸುವಂತೆ ವೈದ್ಯರಿಗೆ ತಿಳಿಸಿದಾಗ, ಹಾವು ಮಗುವಿಗೆ ಕಚ್ಚಿಲ್ಲ ಎಂದು ದೃಢಪಡಿಸಿದ್ದಾರೆ. ನಿವಾಸಿಗಳು ಹಾವನ್ನು ಕೋಲುಗಳಿಂದ ಹೊಡೆದು ಕೊಂದಿರುವ ಸಾಧ್ಯತೆಯಿದೆ, ಬಹುಶಃ ಅದರ ಸಾವಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸ್ವತಃ ಅದೇ ಸತ್ತಿದೆ ಎಂದು ಹೇಳಿರಬಹುದು. ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು