ಇನ್ನು ಇಂಧನದ ಚಿಂತೆ ಬಿಡಿ, ಸಿದ್ಧವಾಯ್ತು ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರು!

ಸುಮಾರು 11 ವರ್ಷಗಳ ಕಠಿಣ ಪರಿಶ್ರಮದ ಮೂಲಕ ಕಾಶ್ಮೀರದ ಶಿಕ್ಷಕರೊಬ್ಬರು ಇಂಧನದ ಪರ್ಯಾಯವಾಗಿ ಸೋಲಾರ್ ಕಾರನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. ಈ ಕಾರಿಗೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

ಇನ್ನು ಇಂಧನದ ಚಿಂತೆ ಬಿಡಿ, ಸಿದ್ಧವಾಯ್ತು ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರು!
ಸೋಲಾರ್ ಕಾರು
Follow us
TV9 Web
| Updated By: Rakesh Nayak Manchi

Updated on:Jun 24, 2022 | 10:08 AM

ಪ್ರಸ್ತುತ ಇಂಧನಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನಸಾಮಾನ್ಯರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ನಡುವೆ ಕಾಶ್ಮೀರಿ ಶಿಕ್ಷಕರೊಬ್ಬರು ಸತತ 11 ವರ್ಷಗಳ ಕಠಿಣ ಪರಿಶ್ರಮದೊಂದಿಗೆ ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರ್‌ (Fully-Automatic Solar Car) ಅನ್ನು ಸಿದ್ಧಪಡಿಸಿ ವ್ಯಾಪಕ ಪ್ರಶಂಸೆಗೆ ಕಾರಣರಾಗಿದ್ದಾರೆ.

ಶ್ರೀನಗರದ ಗಣಿತ ಶಿಕ್ಷಕ ಬಿಲಾಲ್ ಅಹ್ಮದ್ ಅವರು ಅಭಿವೃದ್ಧಿಪಡಿಸಿದ ಕಾರು ನೋಡಲು ಸಣ್ಣದಾಗಿದ್ದರೂ ಐಷಾರಾಮಿ ಕಾರುಗಳಂತೆ ಕಾಣುತ್ತಿರುವುದು ವಿಶೇಷವಾಗಿದೆ. ಆರಂಭದಲ್ಲಿ ಅವರು ಅಂಗವಿಕಲರಿಗೆ ವಾಹನ ಸಿದ್ಧಪಡಿಸಲು ಯೋಜಿಸಿದ್ದರು. ಆದರೆ ಹಣದ ಕೊರತೆ ಎದುರಾದ ಹಿನ್ನೆಲೆ ಸೌರಶಕ್ತಿಯಿಂದ ಚಲಿಸುವ ಕಾರನ್ನು ಪರಿವರ್ತಿಸುವ ಯೋಜನೆಯನ್ನು ಕೈಗೊಂಡು ಯಶಸ್ವಿಯಾದರು.

ಇದನ್ನೂ ಓದಿ: Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್

ಸೋಲಾರ್ ಕಾರು ಐಷಾರಾಮಿ ಕಾರಿನಂತೆ ಇದ್ದು, ಬಾಗಿಲುಗಳನ್ನು ಮೇಲಕ್ಕೆ ತೆರೆಯುವ ವ್ಯವಸ್ಥೆ ನೋಡುಗರನ್ನು ಅಚ್ಚರಿಗೊಳಿಸಿದೆ. ಇದರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಕಾರಿನ ಮೇಲ್ಮೈಗಳಲ್ಲಿ ಬಾನೆಟ್‌ನಿಂದ ಹಿಂದಿನ ವಿಂಡ್‌ಶೀಲ್ಡ್‌ವರೆಗೆ ಸೋಲಾರ್ ಫಲಕಗಳನ್ನು ತೋರಿಸುತ್ತವೆ.

ಈ ಕಾರು ಆನ್‌ಲೈನ್‌ನಲ್ಲಿ ಕುತೂಹಲ ಕೆರಳಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಯೋಜನೆಯಲ್ಲಿ ಕೆಲಸ ಮಾಡಿದ ಅಹ್ಮದ್ ಅವರು ತಮ್ಮ ಕನಸನ್ನು ಈಡೇರಿಸಿಕೊಂಡಿದ್ದು, ಈ ಕಾರನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಆವೃತ್ತಿಯನ್ನಾಗಿ ಮಾಡಲು ಬಯಸುತ್ತಿದ್ದಾರೆ. ಈ ಬಗ್ಗೆ ರೈಸಿಂಗ್ ಕಾಶ್ಮೀರದ ಜೊತೆ ಮಾತನಾಡಿದ ಅಹ್ಮದ್, “ಮರ್ಸಿಡಿಸ್, ಫೆರಾರಿ, ಬಿಎಂಡಬ್ಲ್ಯು ಕಾರುಗಳು ಸಾಮಾನ್ಯ ವ್ಯಕ್ತಿಗೆ ಕೇವಲ ಕನಸು. ಸಾಮಾನ್ಯ ಜನರಿಗೆ ಐಷಾರಾಮಿ ಅನುಭವವನ್ನು ನೀಡಲು ನಾನು ಏನನ್ನಾದರೂ ಯೋಚಿಸಬೇಕೆಂದು ಈ ರೀತಿಯ ಕಾರನ್ನು ಸಿದ್ಧಪಡಿಸಿದ್ದೇನೆ” ಎಂದರು.

ಇದನ್ನೂ ಓದಿ: Automobile: ಜೂನ್ 30 ರಂದು ಹೊಸ ಮಾರುತಿ ಬ್ರೆಝಾ ಬಿಡುಗಡೆ, ಬುಕ್ಕಿಂಗ್, ಫೀಚರ್ಸ್ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ

“ತಮ್ಮ ವಾಹನಕ್ಕೆ ಕಡಿಮೆ ಸೌರಶಕ್ತಿಯಿಂದ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಮೊನೊಕ್ರಿಸ್ಟಲಿನ್ ಸೌರ ಫಲಕಗಳನ್ನು ಬಳಸಲಾಗಿದೆ.  ಇವುಗಳು ಹೆಚ್ಚು ಪರಿಣಾಮಕಾರಿಯಾಗಿದೆ” ಎಂದು ಡೈಲಿ ಎಕ್ಸೆಲ್ಸಿಯರ್‌ನೊಂದಿಗೆ ಅಹ್ಮದ್ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸ್ಪೋರ್ಟ್ಸ್ ಕಾರುಗಳು ಕೇವಲ ಎರಡರ ಆಸನ ಸಾಮರ್ಥ್ಯವನ್ನು ಹೊಂದಿದ್ದರೂ ಇದರ ಬೆಲೆ ದುಬಾರಿಯಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರು ನಾಲ್ಕು ಜನರಿಗೆ ಅವಕಾಶ ಕಲ್ಪಿಸಲು ತಮ್ಮ ವಾಹನವನ್ನು ಸಿದ್ಧಪಡಿಸಿದ್ದಾರೆ. ಈ ಕಾರನ್ನು ಅಹ್ಮದ್ ಅವರು ಯಾವುದೇ ವಲಯದಿಂದ ಆರ್ಥಿಕ ಸಹಾಯ ಇಲ್ಲದೆ ಒಟ್ಟು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿದ್ದಾರೆ. ನನಗೆ ಅಗತ್ಯವಾದ ಬೆಂಬಲ ಸಿಕ್ಕಿದ್ದಿದ್ದರೆ ಬಹುಶಃ ನಾನು ಭಾರತದ ಎಲೋನ್ ಮಸ್ಕ್ ಆಗುತ್ತಿದ್ದೆ ಎಂದು ಅಹ್ಮದ್ ಹೇಳುತ್ತಾರೆ.

ಇದನ್ನೂ ಓದಿ: ನಾಲ್ಕು ವರ್ಷದ ಮಗುವಿಗೆ ಕಚ್ಚಿದ 30 ಸೆಕೆಂಡ್​ಗಳಲ್ಲಿ ಸಾವನ್ನಪ್ಪಿದ ಹಾವು! ಇದು ಸಾಧ್ಯವೇ? ಇಲ್ಲಿದೆ ಮಾಹಿತಿ

Published On - 10:04 am, Fri, 24 June 22

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ