ಅದು ಖ್ಯಾತ ಶರವಣ ಭವನ್ ಹೋಟೆಲ್. ತಮಿಳುನಾಡಿನ ತಿರುವಳ್ಳೂರು (tiruvallur) ಜಿಲ್ಲೆಯ ತಿರುತ್ತಣಿ (Thiruthani) ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್ (Hotel) ಅದು. ಅಲ್ಲಿನ ಅಡುಗೆಮನೆಯಿಂದ ಆತಂಕಕಾರಿ ಶಬ್ದ ಒಂದೇ ಸಮನೆ ಕೇಳಿಬಂದಿತ್ತು. ಭಯಗೊಂಡ ಹೋಟೆಲ್ ಕಾರ್ಮಿಕರು ಒಳಗಡೆ ಕಣ್ಣಾಡಿಸಿದಾಗ ನಖಶಿಖಾಂತ ಷೇಕ್ ಆಗಿಬಿಟ್ಟಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿ, ಕಾಪಾಡಿ ಅಂದಿದ್ದಾರೆ. ವೈರಲ್ ವಿಡಿಯೋ ಇದೆ (Viral Video).
ಎಂದಿನಂತೆ ಹೋಟೆಲಿನ ಅಡುಗೆ ಮನೆಯಲ್ಲಿ ಕೆಲಸಗಾರರು ಚುರುಕಾಗಿ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಅವರೆಲ್ಲರಿಗೂ ವಿಚಿತ್ರವಾದ ಶಬ್ದಗಳು ಕೇಳತೊಡಗಿದವು. ಮೊದಮೊದಲು ಅವರು ಅದರ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಅದು ದೊಡ್ಡದಾಗಿ ಬರಲು ಆರಂಭಿಸಿದಾಗ ಒಳಗಡೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಾರೆ.
ಆಗ ಕಣ್ಣಿಗೆ ಬಿದ್ದಿದೆ. ಸುಮಾರು 5 ಅಡಿ ಉದ್ದದ ನಾಗರಹಾವು. ಗಾಬರಿಗೊಂಡ ಕಾರ್ಮಿಕರು ಕೂಡಲೇ ಅಲ್ಲಿಂದ ಓಡಿ ಹೊರಹೋದರು. ಈ ಮಧ್ಯೆ, ಇದ್ದಬದ್ದ ಗ್ರಾಹಕರೂ ಸಹ ಎದ್ನೋಬಿದ್ನೋ ಅಂತಾ ಕಾಲ್ಕಿತ್ತಿದ್ದಾರೆ.
ಅದು ಹೇಗೋ 5 ಅಡಿ ಉದ್ದದ ನಾಗರ ಹಾವೊಂದು (Cobra Snake) ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಸ್ ನಿಲ್ದಾಣದ ಬಳಿ ಹೋಟೆಲ್‌ನ ಅಡುಗೆ ಕೋಣೆಗೆ ನುಗ್ಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ವಿಷಯ ತಿಳಿದಾಗ ಗಾಬರಿಗೊಂಡಿದ್ದಾರೆ. ಆದರೆ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹಾವನ್ನು ಜಾಣ್ಮೆಯಿಂದ ಹಿಡಿದಿದ್ದಾರೆ. ಬುಸುಗುಡುತ್ತಿದ್ದ ಹಾವನ್ನು ನಂತರ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಅದುವರೆಗೂ ಉಸಿರುಬಿಗಿಹಿಡಿದು ನಿಂತಿದ್ದ ಹೋಟೆಲ್ ಸಿಬ್ಬಂದಿ, ಗ್ರಾಹಕರು ಮತ್ತು ಸ್ಥಳೀಯರು ಒಮ್ಮೆ ಮೈಕೊಡವಿಕೊಂಡು, ನಿಟ್ಟುಸಿರುಬಿಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ