Viral Video: ಮದುವೆ ಮನೆಯಲ್ಲಿ ಮೋಜು ಮಸ್ತಿ ವೇಳೆ ಕೈಯಲ್ಲಿ ಪಟಾಕಿ ಹಿಡಿದುಕೊಂಡು ಅವಾಂತರ ಸೃಷ್ಟಿಸಿದ ಕುಡುಕ

ಮದುವೆ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ಕುಡಿದ ಮತ್ತಿನಲ್ಲಿ ಡಾನ್ಸ್ ಮಾಡುತ್ತಾ ಅಲಂಕಾರಿಕ ವಸ್ತುವಿಗೆ ಹಚ್ಚಿ ಅವಾಂತರ ಸೃಷ್ಟಿಸಿದ ವಿಡಿಯೋ ವೈರಲ್ ಆಗುತ್ತಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಮದುವೆ ಮನೆಯಲ್ಲಿ ಮೋಜು ಮಸ್ತಿ ವೇಳೆ ಕೈಯಲ್ಲಿ ಪಟಾಕಿ ಹಿಡಿದುಕೊಂಡು ಅವಾಂತರ ಸೃಷ್ಟಿಸಿದ ಕುಡುಕ
ಡಾನ್ಸ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅಲಂಕಾರಿಕ ವಸ್ತುವಿಗೆ ತಗುಲಿದ ಬೆಂಕಿ
Edited By:

Updated on: Jul 08, 2022 | 11:51 AM

ಮದುವೆಯ ಮನೆಯಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತದೆ, ಒಂದಷ್ಟು ಮದುವೆ ಸಂಭ್ರಮದಲ್ಲಿ ಡ್ರಿಂಕ್ ಪಾರ್ಟಿ, ಪಟಾಕಿ ಸಿಡಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ. ಅದರಂತೆ ಮದುವೆ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ಕುಡಿದ ಮತ್ತಿನಲ್ಲಿ ಕೈಯಲ್ಲಿ ಪಟಾಕಿ ಹಿಡಿದುಕೊಂಡು ಅವಾಂತರವೊಂದನ್ನು ಸೃಷ್ಟಿಸಿದ್ದಾನೆ. ಇದರ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಅಷ್ಟಕ್ಕೂ ಮದುವೆ ಮನೆಯಲ್ಲಿ ನಡೆದಿದ್ದೇನು ಎಂದು ಹೇಳುತ್ತೇವೆ, ಈ ಸುದ್ದಿ ಓದಿ. 

ಇದನ್ನೂ ಓದಿ: Viral Pic: ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಸ್ನೇಹದ ಫೋಟೋ ವೈರಲ್, ಇದರಲ್ಲಿ ವಿಶೇಷ ಏನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಅದರಂತೆ ಅತಿಥಿಯೊಬ್ಬರಿಂದ ಅಲಂಕಾರಿಕ ವಸ್ತುವಿಗೆ ಆಕಸ್ಮಿಕವಾಗಿ ಬೆಂಕಿ ಹಚ್ಚಿಹೋದಾಗ ಮದುವೆ ಸಂಭ್ರಮದಲ್ಲಿ ಒಂದು ಕ್ಷಣ ಭಯದ ವಾತಾವರಣ ಸೃಷ್ಟಿಯಾಗಿ ಮೋಜುಮಸ್ತಿ ಸ್ಥಗಿತಗೊಂಡಂತಾಯಿತು. ಅದೃಷ್ಟವಶಾತ್, ಅದನ್ನು ತ್ವರಿತವಾಗಿ ನಂದಿಸಲಾಯಿತು. ಈ ಕುಡುಕನ ವರ್ತನೆಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

ವೈರಲ್ ವಿಡಿಯೋದಲ್ಲಿ ಇರುವಂತೆ, 1902ರಲ್ಲಿ ರೈಟ್ ಸೆಡ್ ಫ್ರೆಡ್ ಅವರ ಹಿಟ್ ‘ಐ ಆಮ್ ಟೂ ಸೆಕ್ಸಿ’ ಎಂಬ ಹಾಡಿಗೆ ಮೋಜು ಮಸ್ತಿ ಮಾಡುತ್ತಿದ್ದಾಗ ಸೂಟು ಬೂಟು ಧರಿಸಿರುವ ಗಡ್ಡಧಾರಿ ಕುಡುಕ ವ್ಯಕ್ತಿ, ಪಟಾಕಿ ವಿಭಾಗಕ್ಕೆ ಸೇರಿದ ಬೆಂಕಿ ಹಚ್ಚಿದ ವಸ್ತುವೊಂದನ್ನು ಹಿಡಿದು ಇನ್ನೊಬ್ಬ ಅತಿಥಿ ಮಹಿಳೆಯ ಹಿಂದೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಈ ವೇಳೆ ಆಕಸ್ಮಿಕವಾಗಿ ಆ ಪಟಾಕಿ ಅಲಂಕರಿಸಿದ ಒಣಹುಲ್ಲಿಗೆ ತಗುಲಿ ಹೊತ್ತಿ ಉರಿಯಲು ಆರಂಭವಾಗುವುದನ್ನು ಕಾಣಬಹುದು. ಕೂಡಲೇ ಉಳಿದ ಅತಿಥಿಗಳು ಎಚ್ಚರಿಸಿದ್ದು, ಇದು ಲೆಕ್ಕವೇ ಅಲ್ಲ ಎಂಬಂತೆ ವರ್ತಿಸಿದ ಅವಾಂತರ ಸೃಷ್ಟಿಗಾರ ಕುಡುಕ, ಸ್ವತಃ ತನ್ನ ಕೈಗಳಿಂದಲೇ ಬೆಂಕಿ ಹತ್ತಿಕೊಂಡಿರುವ ಹುಲ್ಲನ್ನು ಕೆಳಗೆ ಬೀಳಿಸಿ ಕಾಲುಗಳಿಂದ ಹೊಡೆದು ಬೆಂಕಿಯನ್ನು ನಂದಿಸಿ ಮತ್ತೆ ಡಾನ್ಸ್ ಮಾಡುವುದನ್ನು ಮುಂದುವರಿಸಿದ್ದಾನೆ.

ಡೈಲಿ ಮೇಲ್ ಪ್ರಕಾರ, ಟಿಕ್​ಟಾಕ್​ಗೆ ಪೋಸ್ಟ್ ಮಾಡಿದ ಮೂಲ ವಿಡಿಯೋವನ್ನು ಅಳಿಸಿ ಹಾಕಲಾಗಿದೆ. ಅದಾಗ್ಯೂ ಈ ವಿಡಿಯೋ ನೆಟ್ಟಿಗರ ಕಣ್ಣಿಗೆ ಬಿದ್ದು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. Thomas ಎಂಬ ವ್ಯಕ್ತಿ ಹಂಚಿಕೊಂಡ ಟ್ವಿಟರ್ ವಿಡಿಯೋ ವೈರಲ್ ಪಡೆದು ಈವರೆಗೆ 13 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: Viral Video: ನೀರಿನಲ್ಲಿ ಆಕ್ಟೋಪಸ್​ಗಳು ಬಣ್ಣ ಬದಲಾಯಿಸುತ್ತವೆ ಎಂದು ತಿಳಿದಿದೆಯಾ? ಇಲ್ಲಿದೆ ನೋಡಿ ವಿಡಿಯೋ

Published On - 11:51 am, Fri, 8 July 22