Viral Video: ನನ್ನ ತಲೆಗೂದಲು ಕಟ್ ಮಾಡುತ್ತೀರಾ ಪ್ಲೀಸ್…. ಮುದ್ದಾದ ನಾಯಿಯ ವಿಡಿಯೋ ವೈರಲ್

ಸೆಲೂನ್​ನಲ್ಲಿ ಮುದ್ದಾದ ನಾಯಿಯೊಂದು ಕೂದಲು ಕಟ್ ಮಾಡಿಸಿದೆ. ಈ ವೇಳೆ ವರ್ತಿಸಿದ ನಾಯಿಯ ರೀತಿ ನೆಟ್ಟಿಗರ ಮನಗೆದ್ದಿದೆ. ನೀವು ಕೂಡ ಈ ವಿಡಿಯೋ ನೋಡಿ ಮನರಂಜನೆ ಪಡೆಯಿರಿ.

Viral Video: ನನ್ನ ತಲೆಗೂದಲು ಕಟ್ ಮಾಡುತ್ತೀರಾ ಪ್ಲೀಸ್.... ಮುದ್ದಾದ ನಾಯಿಯ ವಿಡಿಯೋ ವೈರಲ್
ಕೂದಲು ಕಟ್ ಮಾಡಿಸುತ್ತಿರುವ ನಾಯಿ
Edited By:

Updated on: Aug 20, 2022 | 12:12 PM

ನಾಯಿಗಳ ತಮಾಷೆಯ ವೈರಲ್ ವೀಡಿಯೊಗಳು ವೀಕ್ಷಿಸಲು ಯಾವಾಗಲೂ ಅದ್ಭುತವಾಗಿರುತ್ತದೆ. ಅವುಗಳ ವಿಭಿನ್ನ ವರ್ತನೆಗಳನ್ನು ಸೆರೆಹಿಡಿದಿರುವ ಕ್ಲಿಪ್‌ಗಳು ಜನರನ್ನು ಸಂತೋಷಪಡಿಸುವುದರಲ್ಲಿ ಅನುಮಾನವೇ ಇಲ್ಲ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ಕೂಡ ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ. ಮುದ್ದಾದ ಸಣ್ಣ ನಾಯಿಯೊಂದು ಸೆಲೂನ್ ಅಂಗಡಿಯಲ್ಲಿ ಕುಳಿತುಕೊಂಡು ತನ್ನ ತಲೆ ಕೂದಲು ಕತ್ತರಿಸುತ್ತಿರುವ ವಿಡಿಯೋ ಇದಾಗಿದ್ದು, ಕ್ಷೌರ ಮಾಡುವವನು ಕೂದಲು ಕಟ್ ಮಾಡುವಾಗ ಆ ನಾಯಿಯು ತಾಳ್ಮೆಯಿಂದ ವರ್ತಿಸಿದೆ. ಇದನ್ನು ಕಂಡ ನೆಟ್ಟಿಗರು ಅದರಲ್ಲೂ ಶ್ವಾನ ಪ್ರಿಯರು ಫಿದಾ ಆಗಿದ್ದಾರೆ.

ಈ ವಿಡಿಯೋವನ್ನು ᴘᴀᴠʟᴏᴠ ᴛʜᴇ ᴄᴏʀɢɪ ಎಂಬ ಟ್ವಿಟರ್ ಖಾತೆಯಲ್ಲಿ ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದು 3.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅಲ್ಲದೆ 2.11 ಲಕ್ಷ ಲೈಕ್​ಗಳನ್ನು, 30ಸಾವಿರಕ್ಕೂ ಅಧಿಕ ರೀಟ್ವೀಟ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಕಲ್ಪನೆಯಲ್ಲಿ ಕಾಮೆಂಟ್​ಗಳನ್ನು ನೀಡುತ್ತಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Sat, 20 August 22