Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್​​ ವಿಡಿಯೋ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: May 20, 2022 | 7:43 PM

ನಾಯಿ- ಕೋತಿ ಪಾರ್ಟನರ್​ಶಿಪ್​ನಲ್ಲಿ ನಡೆದ ಈ ಕಳ್ಳತನದ ವಿಡಿಯೋ ಭಾರೀ ವೈರಲ್ ಆಗಿದೆ. ಮಂಗವು ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್​​ ವಿಡಿಯೋ ಇಲ್ಲಿದೆ
ಚಿಪ್ಸ್​ ಪ್ಯಾಕೆಟ್ ಕದಿಯುತ್ತಿರುವ ಕೋತಿ
Follow us on

ನಾಯಿ ಅತ್ಯಂತ ಬುದ್ಧಿವಂತ ಪ್ರಾಣಿ ಮತ್ತು ನಿಯತ್ತಿನ ಪ್ರಾಣಿ. ಮನುಷ್ಯನೊಂದಿಗಿನ ನಾಯಿಯ ಅದೆಷ್ಟೋ ವಿಡಿಯೋಗಳು ನೆಟ್ಟಿಗರ ಮನಸು ಕದ್ದಿವೆ. ಆದರೆ, ಎಲ್ಲರಿಗೂ ಗೊತ್ತಿರುವ ಹಾಗೆ ನಾಯಿ (Dog) ಮತ್ತು ಮಂಗ (Monkey) ಎರಡೂ ಶತ್ರುಗಳು. ಅಪ್ಪಿತಪ್ಪಿ ತನ್ನ ಮನೆಯ ಬಳಿ ಕೋತಿ ಕಾಣಿಸಿಕೊಂಡರೆ ಅದರ ಬೆನ್ನತ್ತುವ ನಾಯಿ ಆ ಕೋತಿ ಇನ್ನೆಂದೂ ಆ ಮನೆಯ ಕಡೆ ತಲೆಹಾಕದಂತೆ ಕಾಟ ಕೊಟ್ಟು ಓಡಿಸುತ್ತದೆ. ಆದರೆ, ಇಲ್ಲೊಂದು ನಾಯಿ ಕೋತಿಯೊಂದಿಗೆ ಗೆಳೆತನ ಮಾಡಿಕೊಂಡು, ಆ ಕೋತಿಗೆ ಅಂಗಡಿಯೊಂದರಿಂದ ಚಿಪ್ಸ್​ ಪ್ಯಾಕೆಟ್ ಕದಿಯಲು ಸಹಾಯ ಮಾಡಿದೆ!

ನಾಯಿ- ಕೋತಿ ಪಾರ್ಟನರ್​ಶಿಪ್​ನಲ್ಲಿ ನಡೆದ ಈ ಕಳ್ಳತನದ ವಿಡಿಯೋ ಭಾರೀ ವೈರಲ್ ಆಗಿದೆ. ಅಂಗಡಿಯೊಂದರ ಬಳಿ ಹೋಗುವ ನಾಯಿ ಮತ್ತು ಮಂಗ ಉಪಾಯವಾಗಿ ಆ ಅಂಗಡಿಯಿಂದ ಚಿಪ್ಸ್ ಪ್ಯಾಕ್ ಕದಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಹಳೆಯದಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಅದೀಗ ಮತ್ತೆ ವೈರಲ್ ಆಗುತ್ತಿದೆ. ಮಂಗವು ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದೆ. “ಮಂಗ ಮತ್ತು ನಾಯಿ ಒಳ್ಳೆಯ ಸ್ನೇಹಿತರಲ್ಲ ಎಂದು ಯಾರು ಯಾರಾದರೂ ಹೇಳಲು ಸಾಧ್ಯವೇ?” ಎಂದು ಈ ವಿಡಿಯೋಗೆ ಕ್ಯಾಪ್ಸನ್ ನೀಡಲಾಗಿದೆ.

ಇದನ್ನೂ ಓದಿ: Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು

ಈ ವಿಡಿಯೋವನ್ನು ನೋಡಿದ ನಂತರ ನಾನು ನನ್ನ ಸ್ನೇಹಿತನನ್ನು ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಇಂಟರ್ನೆಟ್​ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಜವಾದ ಟೀಂ ವರ್ಕ್ ಎಂದರೆ ಇದೇ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ 2,500ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 29,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಎರಡು ವರ್ಷಗಳ ಹಿಂದೆ ಕಾಡು ಕೋತಿಯೊಂದು ತನ್ನ ನೆಚ್ಚಿನ ನಾಯಿಯ ಮೇಲೆ ಕುಳಿತು ಎಲ್ಲೆಂದರಲ್ಲಿ ಸವಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ