ಐಸ್ಕ್ರೀಂ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಯಾವುದಾದರೊಂದು ಸಮಾರಂಭದಲ್ಲಿ ಐಸ್ಕ್ರೀಂ ಇತ್ತೆಂದರೆ ಸಾಕು ಯಾವುದೇ ತಿನಿಸುಗಳಿಗೆ ಇಲ್ಲದೆ ಬೇಡಿಕೆ ಐಸ್ಕ್ರೀಂಗೆ ಇರುತ್ತದೆ. ಪ್ರಪಂಚದ ಬಹುತೇಕ ವ್ಯಕ್ತಿಗಳು ಐಸ್ಕ್ರೀಂ ಅನ್ನು ಇಷ್ಟಪಡುತ್ತಾರೆ ಮತ್ತು ಐಸ್ಕ್ರೀಂ (Ice Cream) ಪ್ರಿಯರೂ ಆಗಿದ್ದಾರೆ. ಇದರಿಂದ ಪ್ರಾಣಿಗಳು ಕೂಡ ಹೊರತಾಗಿಲ್ಲ. ಹೌದಾ? ಎಂದು ನೀವು ಪ್ರಶ್ನಿಸುತ್ತಿದ್ದೀರಾ? ನಿಮ್ಮ ಪ್ರಶ್ನೆಗೆ ಈ ವಿಡಿಯೋ ಸಾಕ್ಷಿ. ಪೋಸ್ಟರ್ನಲ್ಲಿರುವ ಐಸ್ಕ್ರೀಂ ಅನ್ನು ತಿನ್ನಲು ನಾಯಿಯೊಂದು ಪಡುವ ತ್ರಾಸು ಅಷ್ಟಿಷ್ಟಲ್ಲ, ಅದು ಬಾಯಿಗೆ ಸಿಗುತ್ತಿಲ್ಲ ಎಂದು ತಿಳಿದಾಗ ಇನ್ನಷ್ಟು ಉತ್ಸುಕವಾಗಿ ತಿನ್ನಲು ಮುಂದಾಗುವುದನ್ನು ವಿಡಿಯೋ ತೋರಿಸುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಅಂಗಡಿ ಮುಂದೆ ಹಾಕಿರುವ ಪೋಸ್ಟರ್ನಲ್ಲಿ ಐಸ್ಕ್ರೀಂ ಫೋಟೋವನ್ನು ಕಾಣಬಹುದು. ಈ ಪೋಸ್ಟರ್ ನೋಡಿದ ನಾಯಿ, ಇದು ನಿಜವಾದ ಐಸ್ಕ್ರೀಂ ಎಂದು ತಿಳಿದು ತಿನ್ನಲು ಹೋಗುತ್ತದೆ. ಐಸ್ಕ್ರೀಂ ತಿನ್ನಲು ಹರಸಾಹಸ ಪಡುತ್ತದೆ ಮತ್ತು ತಾನು ಎಷ್ಟು ಬಾಯಿ ಹಾಕಿದರೂ ಐಸ್ಕ್ರೀಂ ಸಿಗುತ್ತಿಲ್ಲ ಎಂದು ಇನ್ನಷ್ಟು ಉತ್ಸುಕವಾದ ನಾಯಿ ತನ್ನ ಕೈಗಳಿಂದಲೂ ಅದನ್ನು ಕೆದುಕುವುದನ್ನು ನೋಡಬಹುದು.
ಮುದ್ದಾದ ನಾಯಿಯ ವಿಡಿಯೋವನ್ನು Buitengebieden ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 7.3 ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಿಟ್ಟಿಸಿಕೊಂಡಿದೆ. ಅಲ್ಲದೆ 25ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳು ಆಗಿವೆ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಐಸ್ಕ್ರೀಂನಂತೆ ಕರಗಿಸಿದ್ದು, ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮುದ್ದಾದ ನಾಯಿಯ ವಿಡಿಯೋ ಇಲ್ಲಿದೆ, ನೋಡಿ ಆನಂದಿಸಿ:
Poor dog.. pic.twitter.com/F5Ly2zoNtK
— Buitengebieden (@buitengebieden) July 18, 2022